ಮುಳಬಾಗಿಲಲ್ಲಿ 113ನೇ ಕರಗ ಉತ್ಸವ

ಮುಳಬಾಗಿಲು: ನಗರದ ಧರ್ಮರಾಜರ ಪಾಳ್ಯದಲ್ಲಿರುವ ದ್ರೌಪದಮ್ಮ ದೇವಾಲಯದಲ್ಲಿ 113ನೇ ವರ್ಷದ ಹೂವಿನ ಕರಗ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಬೆಂಗಳೂರಿನ ಕೈಲಾಸ ಆಶ್ರಮದ ರಾಜರಾಜೇಶ್ವರಿ ದೇವಸ್ಥಾನದ ಪ್ರಣವಾನಂದಪುರಿ ಸ್ವಾಮೀಜಿ ಚಾಲನೆ ನೀಡಿದರು. ಎನ್.ವೆಂಕಟೇಶ್ ಕರಗ ಹೊತ್ತು ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದರು. ಕರಗ ಮಹೋತ್ಸವ ಅಂಗವಾಗಿ ಮೂಲದೇವರಿಗೆ ವಿಶೇಷ ಅಭಿಷೇಕ, ಅಲಂಕಾರ ಮಾಡಲಾಗಿತ್ತು.

ದ್ರೌಪದಮ್ಮ, ಅರ್ಜುನೋತ್ಸವ ಪಲ್ಲಕ್ಕಿ, ಶ್ರೀಕೃಷ್ಣ ಪಲ್ಲಕ್ಕಿ, ಗಂಗಮ್ಮ, ತಿರುಪತಿ ಗಂಗಮ್ಮ, ಸೋಮೇಶ್ವರ, ವೀರಭದ್ರೇಶ್ವರ, ವಿಠ್ಠಲನಾರಾಯಣಸ್ವಾಮಿ, ಗ್ರಾಮದೇವತೆ ಆದಿನಾಂಚಾರಮ್ಮ, ಓಂಶಕ್ತಿ, ಅಂಕಾಳ ಪರಮೇಶ್ವರಿ, ರಣಭೇರಮ್ಮ ಪಲ್ಲಕ್ಕಿ ಉತ್ಸವ ಸೇರಿ ನಗರದ ವಿವಿಧ ಬಡಾವಣೆಯಲ್ಲಿ ಸಂಚರಿಸಿ ದೇವಾಲಯದ ಮುಂಭಾಗದಲ್ಲಿ ಅಗ್ನಿಕೊಂಡ ಪ್ರವೇಶ ಮಾಡಲಾಯಿತು. ರಾಜ್ಯ ಹಾಗೂ ಅಂತರಾಜ್ಯಗಳಿಂದ ಲಕ್ಷಾಂತರ ಭಕ್ತರು ಕರಗದ ನೃತ್ಯ ಕಣ್ಣು ತುಂಬಿಕೊಂಡರು.

ತಹಸೀಲ್ದಾರ್ ಬಿ.ಎನ್.ಪ್ರವೀಣ್, ಜೆಡಿಎಸ್ ತಾಲೂಕು ಮಾಜಿ ಅಧ್ಯಕ್ಷ ಆಲಂಗೂರು ಶಿವಣ್ಣ, ಹನುಮಾನ್ ವ್ಯಾಯಾಮ ಶಾಲೆ ಗುರು ನಿವೃತ್ತ ಡಿವೈಎಸ್ಪಿ ಎಂ.ಕೃಷ್ಣಪ್ಪ, ವ್ಯಾಯಾಮ ಶಾಲೆ ಅಧ್ಯಕ್ಷ ಎಂ.ವೆಂಕಟೇಶ್ ಸೇರಿ ಧರ್ಮರಾಜ ಯುವಕರ ಸಂಘ, ವಹ್ನಿಕುಲ ಸಂಘದ ಮುಖಂಡರು ಕರಗದ ಉಸ್ತುವಾರಿ ವಹಿಸಿದ್ದರು.

ಡಿವೈಎಸ್ಪಿ ಬಿ.ಕೆ. ಉಮೇಶ್, ಸಿಪಿ.ಐ ರಾಘವೇಂದ್ರ ಪ್ರಕಾಶ್, ಪಿಎಸೈಗಳಾದ ರವಿಕುಮಾರ್, ಕೆ.ವಿ.ಶ್ರೀಧರ್, ಎನ್.ಅನಿಲ್​ಕುಮಾರ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದರು.

Leave a Reply

Your email address will not be published. Required fields are marked *