ಚಿತ್ರದುರ್ಗ: ಮುರುಘಾಮಠ ಎಲ್ಲ ಸಮುದಾಯದ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದು, ಬಸವ ಪರಂಪರೆಯ ಮಠವಾಗಿದೆ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಸಮಾರಂಭದಲ್ಲಿ ಮಾತನಾಡಿದರು.
ದೇಶದಲ್ಲಿ ಶತಮಾನಗಳಿಂದಲೂ ಕೆಳವರ್ಗದ ಜನರು ಶೋಷಣೆಗೆ ಒಳಗಾಗುತ್ತ ಬಂದಿದ್ದಾರೆ. ಇದರ ವಿರುದ್ಧ ಮೊದಲು ಧ್ವನಿ ಎತ್ತಿದವರು ಬುದ್ಧ, 12ನೇ ಶತಮಾನದಲ್ಲಿ ಬಸವಣ್ಣ. ಈ ಇಬ್ಬರೂ ಸಮಸಮಾಜಕ್ಕಾಗಿ ಶ್ರಮಿಸಿದ ಮಹನೀಯರಾಗಿದ್ದಾರೆ ಎಂದರು.
ಬೆಂಗಳೂರಿನ ವಿಜಯನಗರ ಬಸವಕೇಂದ್ರದ ಅಧ್ಯಕ್ಷ ಡಿ.ಟಿ.ಅರುಣ್‌ಕುಮಾರ್ ಮಾತನಾಡಿ, ಶ್ರೀಮಠ ರಾಜ್ಯ, ರಾಷ್ಟಮಟ್ಟದಲ್ಲಿ ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದೆ. ಬಸವಾದಿ ಶರಣರ ವಿಚಾರಗಳನ್ನು ನಾಡಿನಾದ್ಯಂತ ಪಸರಿಸುತ್ತಿದೆ. ಸಾಮಾನ್ಯರನ್ನು ಶರಣರನ್ನಾಗಿ ಮಾಡುವ ಶಕ್ತಿ ಮುರುಘಾಮಠಕ್ಕಿದೆ ಎಂದು ಅಭಿಪ್ರಾಯಪಟ್ಟರು.
ಡಾ.ಸಾರಂಗಧರ ದೇಶಿಕೇಂದ್ರ ಶ್ರೀ, ಶಿವಲಿಂಗಾನಂದ ಶ್ರೀ, ಡಾ. ಶಿವಾನಂದ ಶ್ರೀ, ಡಾ.ಬಸವಕುಮಾರ ಶ್ರೀ, ಹಂಪಿ ಕನ್ನಡ ವಿವಿ ಕುಲಪತಿ ಡಾ.ಪರಮಶಿವಮೂರ್ತಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ್ ಬಬಲೇಶ್ವರ, ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಬಿ.ಆರ್.ಅಶೋಕ್‌ಕುಮಾರ್, ಜಿಎಸ್‌ಟಿ ಸಹಾಯಕ ಆಯುಕ್ತ ಮಹಮ್ಮದ್ ರಫಿ ಪಾಷ, ವರ್ತಕ ಪಾಂಡುರಂಗ ಇತರರಿದ್ದರು.