More

  ಮುದ್ನಾಳ್ ಕಲ್ಯಾಣದ ದೊಡ್ಡ ಶಕ್ತಿ


  ಯಾದಗಿರಿ: ಹಿರಿಯ ಸ್ವಾತಂತ್ರೃ ಹೋರಾಟಗಾರ ಹಾಗೂ ಮಾಜಿ ಸಚಿವ ಲಿಂ.ವಿಶ್ವನಾಥರಡ್ಡಿ ಮುದ್ನಾಳ್ ಮತ್ತು ಪತ್ನಿ ಲಿಂ.ನೀಲಗಂಗಮ್ಮ ತಾಯಿ ಮುದ್ನಾಳ್ರ 13ನೇ ಪುಣ್ಯಸ್ಮರಣೆ ಶುಕ್ರವಾರ ನಗರಕ್ಕೆ ಹತ್ತಿರವಿರುವ ಅವರ ತೋಟದಲ್ಲಿ ಜರುಗಿತು.

  ಬೆಳಗ್ಗೆ ಮುದ್ನಾಳ್ ಕುಟುಂಬ ವರ್ಗದವರು ಹಾಗೂ ಅಭಿಮಾನಿಗಳು ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚಣೆ ಅಪರ್ಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ವೆಂಕಟರಡ್ಡಿ ಅಬ್ಬೆತುಮಕೂರು ಮಾತನಾಡಿ, ವಿಶ್ವನಾಥರಡ್ಡಿ ಮುದ್ನಾಳ್ ಕಲ್ಯಾಣ ಕನರ್ಾಟಕದ ದೊಡ್ಡ ಶಕ್ತಿಯಾಗಿದ್ದವರು. ತಾವು ನಂಬಿದ ಸಿದ್ಧಾಂತಕ್ಕೆ ಕೊನೆವರೆಗೂ ಉಸಿರಾಗಿ ನಡೆದುಕೊಂಡವರು ಎಂದರು.

  ಮುದ್ನಾಳ್ರ ದೇಶಪ್ರೇಮ ಹಾಗೂ ಸಮಾಜವನ್ನು ಸಂಘಟಿಸುವ ಶಕ್ತಿ ಇಂದಿನ ಯುವಕರಿಗೆ ಮಾದರಿಯಾಗಿದೆ. ಸರ್ವ ಜನರನ್ನು ಸಮಾನರನ್ನಾಗಿ ಕಂಡು ನಾಗರಿಕ ಸಮಾಜ ದಾರಿ ತಪ್ಪಿದ ಸಂದರ್ಭದಲೆಲ್ಲ ಸರಿದಾರಿಗೆ ತರುವ ಕೆಲಸ ಅವರು ಮಾಡಿದ್ದಾರೆ. ಸಮಾಜದಲ್ಲಿ ಮನೆ ಮಾಡಿದ್ದ ಅಸ್ಪೃಶ್ಯತೆ ಹೋಗಲಾಡಿಸಲು ತಲೆಮೇಲೆ ಸದಾ ಶ್ವೇತವಸ ಧರಿಸಿ ಮೌನಕ್ರಾಂತಿ ಮಾಡಿದ ಪುಣ್ಯ ಪುರುಷ ಎಂದು ಬಣ್ಣಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts