17.8 C
Bengaluru
Wednesday, January 22, 2020

ಮುಕ್ಕಾಟೀರ, ತಂಬುಕುತ್ತೀರ ಫೈನಲ್‌ಗೆ

Latest News

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣಿ

ರಟ್ಟಿಹಳ್ಳಿ: ಸಮಾಜದಲ್ಲಿ ಎಲ್ಲರನ್ನೂ ಪ್ರೀತಿ ಮತ್ತು ಗೌರವದಿಂದ ಕಂಡರೆ ಎಲ್ಲರ ಮನಸ್ಸು ಗೆಲ್ಲಬಹುದು. ಯಾವುದೇ ವ್ಯಕ್ತಿ ಅಥವಾ ಸಮಾಜದ ವಿರುದ್ಧ ದ್ವೇಷ ಸಾಧಿಸಬಾರದು....

12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 27ರಿಂದ

ಹಾವೇರಿ: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ. 27 ಹಾಗೂ 28ರಂದು...

ನಾಪೋಕ್ಲು: ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಗ್ರಾಮ ವ್ಯಾಪ್ತಿಯಲ್ಲಿರುವ ಕೊಡವ ಕುಟುಂಬ ತಂಡಗಳ ನಡುವಿನ ಹೈಲ್ಯಾಂಡರ್ಸ್‌ ಕಪ್ ಹಾಕಿ ಪಂದ್ಯಾವಳಿ ಅಂತಿಮ ಹಣಾಹಣಿಯಲ್ಲಿ ಮುಕ್ಕಾಟೀರ (ಮೂವತ್ತೋಕ್ಲು) ಕುಟುಂಬ ತಂಡ ತಂಬುಕುತ್ತೀರ ಕುಟುಂಬ ತಂಡವನ್ನು ಎದುರಿಸಲಿದೆ.

ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್ ಆಶ್ರಯದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ಆಹ್ವಾನಿತ ತಂಡಗಳ ನಡುವಿನ ಹಾಕಿ ಪಂದ್ಯಾವಳಿ ನಡೆಯುತ್ತಿದೆ. ಭಾನುವಾರ ಬೆಳಗ್ಗೆ 10 ಗಂಟೆಗೆ ಅಂತಿಮ ಹಣಾಹಣಿ ನಡೆಯಲಿದೆ.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ತಂಬುಕುತ್ತೀರ ತಂಡ ನಾಗಂಡ ತಂಡವನ್ನು 3-2 ಗೋಲಿನಿಂದ ಪರಾಭವಗೊಳಿಸಿತು. 13ನೇ ನಿಮಿಷದಲ್ಲಿ ಶರಣು ಗೋಲು ಬಾರಿಸುವುದರ ಮೂಲಕ ತಂಬುಕುತ್ತೀರ ತಂಡಕ್ಕೆ ಪ್ರಾರಂಭಿಕ ಮುನ್ನಡೆ ತಂದುಕೊಟ್ಟರು. 16ನೇ ನಿಮಿಷದಲ್ಲಿ ದಿವಿನ್ ಗೋಲು ಗಳಿಸುವುದರ ಮೂಲಕ ನಾಗಂಡ 1-1 ಗೋಲಿನ ಸಮಬಲ ಸಾಧಿಸುವಂತೆ ಮಾಡಿದರು.

27ನೇ ನಿಮಿಷದಲ್ಲಿ ದೀಪು ಚಂಗಪ್ಪ ದಾಖಲಿಸಿದ ಗೋಲಿನಿಂದ ತಂಬುಕುತ್ತೀರ ತಂಡ 2-1 ಗೋಲಿನ ಮುನ್ನಡೆ ಗಳಿಸಿತು. 36ನೇ ನಿಮಿಷದಲ್ಲಿ ದಿವಿನ್ 2ನೇ ಗೋಲು ಬಾರಿಸುವುದರ ಮೂಲಕ ತಮ್ಮ ತಂಡ 2-2 ಗೋಲಿನ ಸಮಬಲ ಸಾಧಿಸುವಂತೆ ಮಾಡಿದರು. 38ನೇ ನಿಮಿಷದಲ್ಲಿ ದೀಪು ಚಂಗಪ್ಪ 2ನೇ ಗೋಲು ಬಾರಿಸುವುದರ ಮೂಲಕ ತಂಬುಕುತ್ತೀರ ತಂಡದ ಗೆಲುವಿನ ರೂವಾರಿಯಾದರು.

ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಮುಕ್ಕಾಟೀರ (ಮೂವತ್ತೋಕ್ಲು) ತಂಡ ಶಾಂತೆಯಂಡ ತಂಡವನ್ನು 3-2 ಗೋಲಿನಿಂದ ಪರಾಭವಗೊಳಿಸಿತು. 38ನೇ ಸೆಕೆಂಡ್‌ನಲ್ಲಿ ಅರ್ಜುನ್ ಗೋಲು ಬಾರಿಸುವುದರ ಮೂಲಕ ಮುಕ್ಕಾಟೀರ ತಂಡಕ್ಕೆ 1-0 ಗೋಲಿನ ಮುನ್ನಡೆ ತಂದುಕೊಟ್ಟರು. 2ನೇ ನಿಮಿಷದಲ್ಲಿ ರತನ್ ಗೋಲು ಬಾರಿಸುವುದರ ಮೂಲಕ 2-0 ಮುನ್ನಡೆ ಒದಗಿಸಿದರು.

14ನೇ ನಿಮಿಷದಲ್ಲಿ ನಿಶಾಂತ್ ಗೋಲು ಬಾರಿಸುವ ಮೂಲಕ ಶಾಂತೆಯಂಡ ಗೋಲು ಖಾತೆ ತೆರೆದರು. 24ನೇ ನಿಮಿಷದಲ್ಲಿ ದೀಪಕ್ ಗೋಲು ದಾಖಲಿಸುವುದರ ಮೂಲಕ ಮುಕ್ಕಾಟೀರ 3-1 ಮುನ್ನಡೆ ಸಾಧಿಸಿದರು. 27ನೇ ನಿಮಿಷದಲ್ಲಿ ಬಿಪಿನ್ ಗೋಲು ಗಳಿಸುವುದರ ಮೂಲಕ ಶಾಂತೆಯಂಡ ಸೋಲಿನ ಅಂತರ (3-2) ಕಡಿಮೆ ಮಾಡಿದರು.

ವಾರಿಯರ್ಸ್‌ ಚಾಂಪಿಯನ್ ಕಪ್
ವಾರಿಯರ್ಸ್‌ ಚಾಂಪಿಯನ್ ಕಪ್ ಲೀಗ್ ಪಂದ್ಯದಲ್ಲಿ ಅರೆಯಡ ತಂಡವನ್ನು ಕಲಿಯಂಡ ತಂಡ ಟೈಬ್ರೇಕರ್‌ನಲ್ಲಿ 5-4 ಗೋಲಿನಿಂದ ಸೋಲಿಸಿತು. ನಿಗದಿತ ಅವಧಿ ಪೂರ್ಣಗೊಂಡಾಗ ಎರಡು ತಂಡಗಳು ಗೋಲುಗಳಿಸಲು ಸಫಲವಾಗಲಿಲ್ಲ.

ಚೆಪ್ಪುಡೀರ ತಂಡ ಮಂಡೇಪಂಡ ತಂಡವನ್ನು 2-0 ಗೋಲಿನಿಂದ ಪರಾಭವಗೊಳಿಸಿತು. ವಿಜೇತ ತಂಡದ ಪರ 32ನೇ ನಿಮಿಷದಲ್ಲಿ ಚೇತನ್, 47ನೇ ನಿಮಿಷದಲ್ಲಿ ನರೇನ್ ಕಾರ್ಯಪ್ಪ ಗೋಲು ದಾಖಲಿಸಿದರು.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...