More

  ಮುಕ್ಕಾಟಿರ ತಂಡಕ್ಕೆ ಭರ್ಜರಿ ಜಯ ; ಮಲ್ಚೀರ ತಂಡದ ವಿರುದ್ಧ ಎರಡು ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿ ಗೆಲುವು

  ಮಡಿಕೇರಿ : ನಾಪೋಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬಾಳೆಯಡ ಕಪ್ ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯಗಳಲ್ಲಿ ಮುಕ್ಕಾಟಿರ(ಕಡಗದಾಳು), ಚೋನಿರ, ಮಲ್ಚಿರ, ಪೊನ್ನಿಮಾಡ, ಚೆಟ್ಟಿಯರಂಡ, ಮುಕ್ಕಾಟಿರ (ಕಡಗದಾಳು) ತಂಡಗಳು ಮುನ್ನಡೆ ಸಾಧಿಸಿದವು.


  ನಡಿಕೇರಿಂಡ ವಿರುದ್ಧ ಮುಕ್ಕಾಟಿರ ತಂಡ ಗೆಲುವು ಸಾಧಿಸಿತು. ಮುಕ್ಕಾಟಿರ ತಂಡ ಒಂದು ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದರೆ ನಡಿಕೇರಿ ಯಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿತು. ಪುಲಿಯಂಡ ವಿರುದ್ಧ ಚೋನಿರ ತಂಡ ಜಯ ಸಾಧಿಸಿತು. ಪುಲಿಯಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದರೆ ಚೋನಿರ ಒಂದು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತು. ಪಾಲೆಂಗಡ ವಿರುದ್ಧ ಕಡೆಮಾಡ ತಂಡ ಜಯಗಳಿಸಿತು.


  ಪಾಲೆಂಗಡ ಮೂರು ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿತು. ಕಡೆಮಾಡ ನಾಲ್ಕು ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿ 19 ರನ್‌ಗಳ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಮಾದೆಯಂಡ ಏಳು ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದರೆ ಮಲ್ಚಿರ ತಂಡ ಮೂರು ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿ ಗೆಲುವು ಸಾಧಿಸಿತು. ಕುಪ್ಪಣಮಾಡ ಆರು ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದರೆ ಪೊನ್ನಿಮಾಡ 54 ರನ್ ಗಳಿಸಿ ಗೆಲುವು ಸಾಧಿಸಿತು.

  ಮುಂದಿನ ಪಂದ್ಯದಲ್ಲಿ ಆಪಟ್ಟಿರ 45 ರನ್ ಗಳಿಸಿದರೆ ಚೆಟ್ಟಿಯಾರಂಡ ತಂಡ ಎರಡು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿ ಮುಂದಿನ ಹಂತ ಪ್ರವೇಶಿಸಿತು. ಮುಂದಿನ ಪಂದ್ಯದಲ್ಲಿ ಮಲ್ಚೀರ ನಾಲ್ಕು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತು. ಮುಕ್ಕಾಟಿರ( ಕಡಗದಾಳು) ತಂಡ ಎರಡು ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿ ಗೆಲುವು ಸಾಧಿಸಿತು.


  ನೆಲ್ಲಿರ ತಂಡದ ವಿರುದ್ಧ ಬಲ್ಲಚಂಡ ತಂಡ ಜಯ ಸಾಧಿಸಿತು. ನೆಲ್ಲಿರ ತಂಡ 55 ರನ್ ಗಳಿಸಿದರೆ ಬಲ್ಲಚಂಡ 56 ರನ್ ಗಳಿಸಿ ಮುನ್ನಡೆ ಸಾಧಿಸಿತು. ಮಳವಂಡ ತಂಡದ ವಿರುದ್ಧ ಮಾಯನಮಾಡ ತಂಡ ಗೆಲುವು ಸಾಧಿಸಿತು. ಮಳವಂಡ ಆರು ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದರೆ ಮಾಯನಮಾಡ ನಾಲ್ಕು ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿತು.

  ಮುಂದಿನ ಪಂದ್ಯಗಳಲ್ಲಿ ಅಯ್ಯಮಾಡ ತಂಡ ಸಾದೆರ ವಿರುದ್ಧ, ಅತ್ರಂಗಡ ತಂಡ ನಾಪಂಡ ತಂಡದ ವಿರುದ್ಧ, ಪೊನ್ನಿಮಾಡ ಕಡೆಮಾಡ ವಿರುದ್ಧ, ಅತ್ರಂಗಡ ಮಾಯನ ಮಾಡ ವಿರುದ್ಧ, ಮಲ್ಲಜ್ಜಿರ ಚೆಟ್ಟಿಯಾರಂಡ ವಿರುದ್ಧ ಗೆಲುವು ಸಾಧಿಸಿದವು.
  ಬೇತು ಗ್ರಾಮದ ಮಕ್ಕಿ ಶಾಸ್ತಾವು ಉತ್ಸವದ ಪ್ರಯುಕ್ತ ಗುರುವಾರ ಕ್ರಿಕೆಟ್ ಪಂದ್ಯಗಳು ನಡೆಯುವುದಿಲ್ಲ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts