ಮುಕುಲ್ ಸಕ್ಸೇನಾ ಹ್ಯಾವೆಲ್ಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ

ಬೆಂಗಳೂರು: ಫಾಸ್ಟ್ ಮೂವಿಂಗ್ ಎಲೆಕ್ಟ್ರಿಕಲ್ ಗೂಡ್ಸ್ ಉತ್ಪಾದನಾ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಹ್ಯಾವೆಲ್ಸ್ ಇಂಡಿಯಾ, ಡಾ.ಮುಕುಲ್ ಸಕ್ಸೇನಾ ಅವರನ್ನು ಸಂಸ್ಥೆಯ ನೂತನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿ(ಸಿಟಿಒ)ಸ್ಥಾನಕ್ಕೆ ಆಯ್ಕೆ ಮಾಡಿದೆ.

ಹ್ಯಾವೆಲ್ಸ್ ಸೆಂಟರ್ ಫಾರ್ ರಿಸರ್ಚ್ ಆಂಡ್ ಇನ್ನೋವೇಷನ್ ಮುಖ್ಯಸ್ಥರಾಗಿ ಮುಕುಲ್ ಸಕ್ಸೇನಾ ಕಾರ್ಯನಿರ್ವಹಿಸಲಿದ್ದಾರೆ.

ಇಂಧನ, ಇಂಡಸ್ಟ್ರಿಯಲ್ ಅಟೋಮೇಷನ್, ಡಿಜಿಟಲೀಕರಣ ಹಾಗೂ ಆರೋಗ್ಯ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ, ಯೋಜನೆ ನಿರ್ವಹಣೆಯಲ್ಲಿ ಸಕ್ಸೇನಾ 34 ವರ್ಷ ಅನುಭವ ಹೊಂದಿದ್ದಾರೆ. ಜತೆಗೆ ಇಂಡಸ್ಟ್ರಿಯಲ್ ಟರ್ಬೆನ್, ಎಲೆಕ್ಟ್ರಾನಿಕ್ಸ್ ಮತ್ತು ಎಂಬೆಡೆಡ್ ಸಿಸ್ಟಂ, ಮೆಕ್ಯಾನಿಕಲ್ ಡಿಸೈಸ್ ಮತ್ತು ಸಿಮ್ಯುಲೇಷನ್ಸ್ ಕ್ಷೇತ್ರದಲ್ಲಿ ತಂಡ ಕಟ್ಟಿ ಕಾರ್ಯ ನಿರ್ವಹಿಸಿದ್ದಾರೆ.

ಸೀಮನ್ಸ್ ಕಾಪೋರೇಟ್ ರಿಸರ್ಚ್ ಮತ್ತು ಟೆಕ್ನಾಲಜೀಸ್​ವುುಖ್ಯಸ್ಥರಾಗಿದ್ದರು. ಸಂಸ್ಥೆಯಲ್ಲಿ 14 ವರ್ಷ ಕಾರ್ಯನಿರ್ವಹಿಸಿ ಭಾರತದಲ್ಲಿ ಸೀಮನ್ಸ್ ಸಂಶೋಧನಾ ಕೇಂದ್ರ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಮೆರಿಕದ ಜಿಇ ಕಾಪೋರೇಟ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಿಂದ ವೃತ್ತಿ ಜೀವನ ಆರಂಭಿಸಿದ್ದ ಸಕ್ಸೇನಾ, 1997ರಲ್ಲಿ ಭಾರತಕ್ಕಾಗಮಿಸಿ ಗುಡ್​ಅರ್ಥನಲ್ಲಿ ಹೆಚ್ಚುವರಿ ಪ್ರಧಾನ ನಿರ್ದೇಶಕರಾಗಿದ್ದರು. 2000ನೇ ಇಸ್ವಿಯಲ್ಲಿ ಜಿಇ-ಐಟಿಸಿ ಅಡ್ವಾನ್ಸಡ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ತಾಂತ್ರಿಕ ನಿರ್ದೇಶಕರಾಗಿದ್ದರು.

ಐಐಟಿ ಕಾನ್ಪುರದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್​ನಲ್ಲಿ ಬಿ.ಟೆಕ್, ನ್ಯೂಯಾರ್ಕ್​ನ ರೋಚೆಸ್ಟರ್ ವಿವಿಯಿಂದ ಪಿಎಚ್.ಡಿ. ಮತ್ತು ಎಂ.ಎಸ್. ಪದವಿ ಪಡೆದಿದ್ದಾರೆ. ಏಮ್್ಸ-ಎಸ್​ಐಬಿ-ಸೀಮನ್ಸ್ ಕನ್ಸೋರ್ಟಿಯಂ, ಬೆಂಗಳೂರಿನ ಪಿಇಎಸ್ ಕಾಲೇಜಿನ ಶೈಕ್ಷಣಿಕ ಸಲಹಾ ಮಂಡಳಿ, ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಅಕಾಡೆಮಿಕ್ ಸೆನೆಟ್ ಸದಸ್ಯರಾಗಿದ್ದಾರೆ. 2004-05ರಲ್ಲಿ ಐಐಟಿ ಮದ್ರಾಸ್ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.