ಮುಂದುವರಿದ ವಿಐಎಸ್​ಎಲ್ ಹೋರಾಟ

 ಭದ್ರಾವತಿ: ವಿಐಎಸ್​ಎಲ್ ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಕಾರ್ವಿುಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ 18ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಬೆಳಗ್ಗೆ 6.30ರಿಂದ 9 ಗಂಟೆಯವರೆಗೂ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಕಾರ್ವಿುಕ ಸಂಘದ ಮುಖಂಡ ಮೋಹನ್ ಮಾತನಾಡಿ, ವಿಐಎಸ್​ಎಲ್ ಗುತ್ತಿಗೆ ಹಾಗೂ ಕಾಯಂನೌಕರರು ಕಳೆದ 18 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಥಳಕ್ಕೆ ಆಗಮಿಸದೆ ಕಾರ್ವಿುಕರನ್ನು ನಿರ್ಲಕ್ಷಿ್ಯದ್ದಾರೆ ಎಂದು ಆರೋಪಿಸಿದರು. ನಗರದ ವಿವಿಧ ಸಂಘ ಸಂಸ್ಥೆಗಳು, ನಾಗರಿಕರು ನಮ್ಮ ಹೋರಾಟವನ್ನು ಬೆಂಬಲಿಸಿ ಸಹಕಾರ ನೀಡುತ್ತಿದ್ದರೆ ನಮ್ಮೆಲ್ಲರ ಮತಗಳನ್ನು ಪಡೆದ ಸಂಸದರು ಕಾರ್ಖಾನೆ ಉಳಿಸಿಕೊಡುವ ಆತ್ಮಸ್ಥೈರ್ಯದ ಮಾತುಗಳನ್ನು ಸಹ ಆಡದೆ ಕೇವಲ ರಾಜಕಾರಣ ಮಾಡುವುದರಲ್ಲೆ ಉಳಿದಿದ್ದಾರೆ. ಕಾರ್ಖಾನೆ ಖಾಸಗೀಕರಣ ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟ ಅನಿವಾರ್ಯ ಆಗಿದ್ದು ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಪ್ರಯತ್ನಿಸಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ಬಸಂತ್​ಕುಮಾರ್, ಚಂದ್ರಹಾಸ್ ಸೇರಿ ನೂರಾರು ಗುತ್ತಿಗೆ ಕಾರ್ವಿುಕರು ಹಾಗೂ ಕಾಯಂ ನೌಕರರು ಪಾಲ್ಗೊಂಡಿದ್ದರು.

ಇಂದು ಉರುಳು ಸೇವೆ: ನಗರದ ಅಧಿದೇವತೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಸಾಮೂಹಿಕ ಅರ್ಚನೆ ಹಾಗೂ ಉರುಳು ಸೇವೆಯನ್ನು 19ನೇ ದಿನದ ಹೋರಾಟದ ಅಂಗವಾಗಿ ಕಾರ್ವಿುಕರು ಹಮ್ಮಿಕೊಂಡಿದ್ದಾರೆ. ವಿಐಎಸ್​ಎಲ್ ಕಾರ್ಖಾನೆ ಸ್ಥಾಪನೆ ಸಂದರ್ಭದಲ್ಲಿ ಸಾಕ್ಷಿಯಾಗಿ ನೆಲೆಸಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯೆ ನಮ್ಮನ್ನು ಕಾಪಾಡಲಿ ಎಂಬುದು ಹೋರಾಟಗಾರರ ಆಕಾಂಕ್ಷೆಯಾಗಿದ್ದು ತಮ್ಮ ಸಂಕಷ್ಟವನ್ನು ಪಾರು ಮಾಡುವಂತೆ ಮನವಿ ಸಲ್ಲಿಸಲಿದ್ದಾರೆ.

ಬೆಂಗಳೂರಿಗೆ ಕಾರ್ವಿುಕ ನಿಯೋಗ: ಶಾಸಕ ಬಿ.ಕೆ.ಸಂಗಮೇಶ್ವರ್ ಕರೆಯ ಮೇರೆಗೆ ಕೆಲವು ಕಾರ್ವಿುಕ ಮುಖಂಡರು ಭಾನುವಾರ ಬೆಂಗಳೂರಿಗೆ ತೆರಳಿ ಶಾಸಕ ಸಂಗಮೇಶ್ವರ್, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ವಿಐಎಸ್​ಎಲ್ ಕಾರ್ಖಾನೆ ಖಾಸಗೀಕರಣ ತಡೆಗಟ್ಟುವ ನಿಟ್ಟಿನಲ್ಲಿ ಸದನದಲ್ಲಿ ರ್ಚಚಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಡ ತರುವಂತೆ ಶಾಸಕರು ಹಾಗೂ ಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂಬುದಾಗಿ ಕಾರ್ವಿುಕ ವಲಯ ತಿಳಿಸಿದೆ.

ಹೋರಾಟಕ್ಕೆ ಬೆಂಬಲಿಸಿದ ಟೆಕ್ಸ್​ಟೈಲ್:  ನಗರದ ಬಿ.ಎಚ್.ರಸ್ತೆ ಹಾಲಪ್ಪ ವೃತ್ತದಲ್ಲಿರುವ ಮೈಕೋ ಟೆಕ್ಸ್​ಟೈಲ್ಸ್ ಬಟ್ಟೆ ಅಂಗಡಿ ಮಾಲೀಕರು ಗ್ರಾಹಕರಿಗೆ ನೀಡುವ ಬಿಲ್​ನಲ್ಲಿ ‘ಸೇವ್ ವಿಐಎಸ್​ಎಲ್ ಸೇವ್ ಭದ್ರಾವತಿ’ ಎಂದು ಮುದ್ರಿಸುವ ಮೂಲಕ ಕಾರ್ವಿುಕರ ಹೋರಾಟಕ್ಕೆ ಪರೋಕ್ಷ ಬೆಂಬಲ ಸೂಚಿಸಿದ್ದಾರೆ. ಕೆಲವು ದಿನಗಳ ಹಿಂದೆ ಕಾರ್ವಿುಕರು ಹಾಲಪ್ಪ ವೃತ್ತದಲ್ಲಿ ವಿಐಎಸ್​ಎಲ್ ಉಳಿಸಿ ಹೋರಾಟ ಕೈಗೊಂಡಿದ್ದರು. ಪ್ರತಿದಿನ ಒಂದೊಂದು ಸಂಘಟನೆಯ ಮುಖಂಡರು ಬೆಂಬಲ ವ್ಯಕ್ತಪಡಿಸುತ್ತಿದ್ದು ಇದೀಗ ಬಟ್ಟೆ ಅಂಗಡಿ ಮಾಲೀಕರು ನೀಡಿರುವ ಮುದ್ರಣದ ಬೆಂಬಲ ಕಾರ್ವಿುಕರ ಹೋರಾಟವನ್ನು ಹೆಚ್ಚು ಮಾಡಿದಂತಾಗಿದೆ.

Leave a Reply

Your email address will not be published. Required fields are marked *