ಕೊಳ್ಳೇಗಾಲ: ಮುಂದಿನ ಪೀಳಿಗೆ ಗಟ್ಟಿಯಾದರೆ ಭಾರತ ವಿಶ್ವಗುರುವಾಗಲಿದೆ ಎಂದು ಶ್ರೀವಾಸವಿ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಆರ್ಯ ವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ಎ.ಡಿ.ಕುಮಾರಕೃಷ್ಣ ಅಭಿಪ್ರಾಯಪಟ್ಟರು.
ಶುಕ್ರವಾರ ಏರ್ಪಡಿಸಿದ್ದ ಪಟ್ಟಣದ ಶ್ರೀವಾಸವಿ ಸಮೂಹ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಶ್ರೀವಾಸವಿ ಶಿಕ್ಷಣ ಸಂಸ್ಥೆಯು ರಾಜ್ಯದಲ್ಲಿ ಹೆಸರು ಪಡೆದಿದೆ. ಜನರ ನಂಬಿಕೆ ಹಾಗೂ ವಿಶ್ವಾಸಗಳಿದೆ. ಇದಕ್ಕೆ ಮೂಲ ಕಾರಣ ವಿದ್ಯಾಸಂಸ್ಥೆಯ ಶಾಲೆಯ ಬೋಧಕ ವೃಂದವಾಗಿದೆ. ಮುಂದಿನ ಪೀಳಿಗೆಯನ್ನು ಶಿಕ್ಷಣ ಸಂಸ್ಥೆ ಗಟ್ಟಿಗೊಳಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಭಾರತೀಯರು ಪ್ರಪಂಚದ ಯಾವುದೇ ದೇಶದಲ್ಲಾದರೂ ಬದುಕುವ ಸಾಮಾರ್ಥ ಹೊಂದಿದ್ದಾರೆ. ಬಲಾಢ್ಯ ಆರ್ಥಿಕ ವ್ಯವಸ್ಥೆ ಇರುವ ಆಮೆರಿಕದಲ್ಲಿ ನೆಲೆಸಿರುವ ಭಾರತೀಯರು ಬುದ್ಧಿವಂತರು ಹಾಗೂ ಉತ್ತಮವಾಗಿ ದುಡಿಯುವ ವರ್ಗವಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಸಿಗುತ್ತಿರುವ ಅಡಿಪಾಯ ಶಿಕ್ಷಣವಾಗಿದೆ ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಗುರಿಯಿಟ್ಟುಕೊಂಡು ಓದಬೇಕು. ಆಗ ಮಾತ್ರ ಅತ್ಯುತ್ತಮ ಅಂಕ ಗಳಿಸಲು ಹಾಗೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಶ್ರೀವಾಸವಿ ವಿದ್ಯಾಸಂಸ್ಥೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಪಠ್ಯ, ಪಠ್ಯೇತರ ಕಲಿಸುವ ಶಿಕ್ಷಣ ಜತೆಗೆ ಸೃಜನಶೀಲತೆಯನ್ನೂ ಕಲಿಸುತ್ತಿದೆ ಎಂದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಬೆಂಗಳೂರಿನ ಶ್ರೀಭಾಗ್ಯಲಕ್ಷ್ಮೀ ಇಂಡಸ್ಟ್ರೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀನಿವಾಸ್ ಗುಪ್ತ, ಶ್ರೀವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ.ಜಿ.ಶ್ರೀಧರ್, ಖಂಜಾಚಿ ಸುಮಂತ್ ವಿ.ಅಚ್ಚಮ್, ಉಪಾಧ್ಯಕ್ಷ ಪಿ.ಎನ್.ಸತ್ಯನಾರಾಯಣ, ಕಾರ್ಯದರ್ಶಿ ಶಶಿಧರ್, ಜಂಟಿ ಕಾರ್ಯದರ್ಶಿ ಚೇತನ್, ಸಿ.ಪಿ.ಶರತ್, ಕೆ.ಎಸ್.ನಾಗ ರಾಜು ಬಾಬು, ನಿರ್ದೇಶಕರು ಹಾಗೂ ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.