ಮುಂಡಗೋಡ ಮಾರಿಕಾಂಬಾ ಜಾತ್ರೆ ಇಂದಿನಿಂದ

ಮುಂಡಗೋಡ: ಪಟ್ಟಣದ ಗ್ರಾಮದೇವಿ ಶ್ರೀ ಮಾರಿಕಾಂಬಾ (ದ್ಯಾಮವ್ವ) ದೇವಿ ಜಾತ್ರಾ ಮಹೋತ್ಸವ ಮಾ. 12ರಿಂದ 20ರವರೆಗೆ ಜರುಗಲಿದೆ. ಪಟ್ಟಣ ಹಾಗೂ ಶ್ರೀ ಮಾರಿಕಾಂಬಾ ದೇವಿಯ ತವರೂರು ನ್ಯಾಸರ್ಗಿ ಗ್ರಾಮದಲ್ಲಿ ಹಬ್ಬದ ವಾತಾವಾರಣ ನಿರ್ವಣವಾಗಿದೆ. ರಸ್ತೆಗಳ ಇಕ್ಕೆಲಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮತ್ತು ಎಲ್ಲೆಡೆ ಕೇಸರಿ ಬಣ್ಣದ ಹಾಳೆಗಳ ಮಾಲೆಗಳು ಕಂಗೊಳಿಸುತ್ತಿವೆ.

ಜಾನುವಾರು ಸೇರಿ ಜೀವ ಸಂಕುಲದ ಸಮೃದ್ಧಿಗಾಗಿ ದೇವಿಯ ಅನುಗ್ರಹ ಪಡೆಯಲು ಪ್ರತಿ ಸಲದಂತೆ ಈ ವರ್ಷವೂ 5 ಹೊರ ಬೀಡುಗಳನ್ನು ಭಕ್ತರು ಈಗಾಗಲೇ ಆಚರಿಸಿದ್ದಾರೆ. ಇಲ್ಲಿನ ಗ್ರಾಮದೇವಿ ದ್ಯಾಮವ್ವದೇವಿ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. 80 ವರ್ಷಗಳ ಹಿಂದೆ ಕಾರಣಾಂತರಗಳಿಂದ ಜಾತ್ರೆ ಸ್ಥಗಿತಗೊಂಡಿತ್ತು. 2007ರಲ್ಲಿ ಮತ್ತೆ ದೇವಾಲಯ ಕಮಿಟಿ ರಚನೆ ಮಾಡಿ 3 ವರ್ಷಕ್ಕೊಮ್ಮೆ ಜಾತ್ರೆ ನಡೆಸಲಾಗುತ್ತಿದೆ.