ಹಾಸನ: ಕೆರೆಯಲ್ಲಿ ಒಂದು ಮೀನನ್ನು ಗನ್‌ನಿಂದ ಶೂಟ್ ಮಾಡಿ ಸಾಯಿಸಿ ಕಳವು ಮಾಡಿಕೊಂಡು ಹೋಗಿರುವ ಸಂಬಂಧ ನಾಲ್ವರ ವಿರುದ್ಧ ಕೆರೆ ಗುತ್ತಿಗೆ ಪಡೆದಿರುವ ಹನುಮಂತ ಎಂಬುವವರು ದುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಂದಿಹಳ್ಳಿ ಗ್ರಾಮದ ಆನಂದ, ದುದ್ದ ಗ್ರಾಮದ ಮಂಜು, ಕಾರ್ತಿ ಸೇರಿ ನಾಲ್ವರ ಮೇಲೆ ಸುಮಾರು 2 ಕೆ.ಜಿ. ತೂಕದ ಮೀನು ಸಾಯಿಸಿ ಕಳವು ಮಾಡಿರುವ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ.
ಬೇಲೂರು ಪಟ್ಟಣದ ಹನುಮಂತ ಎಂಬುವವರು ದುದ್ದ ಹೋಬಳಿ ಹೆರಗು ಗ್ರಾಮದ ಕೆರೆಯನ್ನು ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದುಕೊಂಡು ಕೆರೆಗೆ ಮೀನಿನ ಮರಿಗಳನ್ನು ಬಿಟ್ಟಿದ್ದರು. ಪ್ರತಿದಿನ ಹೆರಗು ಕೆರೆಗೆ ಬಂದು ಕೆರೆಯನ್ನು ನೋಡಿಕೊಂಡು ಹೋಗುತ್ತಿದ್ದರು. ಆ.11ರ ಭಾನುವಾರ ಸಂಜೆ 6.30ರ ಸಮಯದಲ್ಲಿ ಹನುಮಂತ ಅಣ್ಣನ ಮಗ ಕೃಷ್ಣ ಜತೆಗೆ ಕೆರೆಯ ಹತ್ತಿರ ಹೋದಾಗ ಕೆರೆಯ ಬಳಿ ನಾಲ್ವರು ಎರಡು ಬೈಕ್‌ಗಳನ್ನು ನಿಲ್ಲಿಸಿಕೊಂಡು ನಿಂತಿದ್ದರು. ಹೋಗಿ ವಿಚಾರಿಸಿ, ಬೈಕಿನ ಮೇಲೆ ಇರಿಸಿದ್ದ ರಟ್ಟಿನ ಬಾಕ್ಸ್ ನೋಡಿದಾಗ ಕಾಡು ಜಾತಿಯ ಹಕ್ಕಿಗಳು ಮತ್ತು ಸುಮಾರು 2ರಿಂದ 2.5 ಕೆ.ಜಿ. ತೂಕದ ಒಂದು ಮೀನು ಇತ್ತು. ಮೀನನ್ನು ಎಲ್ಲಿ ಹಿಡಿದಿರಿ ಎಂದು ಕೇಳಿದ್ದಕ್ಕೆ ಅದರಲ್ಲಿ ಒಬ್ಬ ಇದೇ ಕೆರೆಯಲ್ಲಿಯೇ ಗನ್‌ನಿಂದ ಶೂಟ್ ಮಾಡಿ ಹಿಡಿದಿರುವುದಾಗಿ ಹೇಳಿದ್ದಾನೆ. ನಂತರ ಏಕಾಏಕಿ ಅಲ್ಲಿಂದ ನಾಲ್ವರು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಅವರಲ್ಲಿ ಮೂವರ ಹೆಸರು ಗೊತ್ತಿದ್ದು ಮತ್ತೊಬ್ಬರ ಹೆಸರು ಗೊತ್ತಿಲ್ಲ ಎಂದು ಹನುಮಂತು ಅವರು ದುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೀನನ್ನು ಬಂದೂಕಿನಿಂದ ಸಾಯಿಸಿ, ಕಳವು: ದೂರು ದಾಖಲು
You Might Also Like
ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್ ಬರೋದು ಪಕ್ಕಾ! ಇರಲಿ ಎಚ್ಚರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…