ಮೀಸಲಾತಿ ಹೆಚ್ಚಳಕ್ಕೆ ಪಾದಯಾತ್ರೆ

ದಾಬಸ್​ಪೇಟೆ: ಪರಿಶಿಷ್ಟ ಪಂಗಡದ ಮಿಸಲಾತಿ ಹೆಚ್ಚಿಸಲು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಮಹರ್ಷಿ ಗುರುಪೀಠದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆ ಬುಧವಾರ ದಾಬಸ್​ಪೇಟೆ ತಲುಪಿತು.

ವಾಲ್ಮೀಕಿ ಸಮಾಜದವರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರನ್ನು ಪೂರ್ಣಕುಂಭ ಕಳಸಗಳೊಂದಿಗೆ ಸ್ವಾಗತಿಸಿದರು. ವನಕಲ್ಲು ಮಠದಶ್ರೀ ಬಸವರಮಾನಂದ ಸ್ವಾಮೀಜಿ ಹಾಗೂ ನೆಲಮಂಗಲ ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಗೋಂವಿದರಾಜು ಇದ್ದರು.

ಕೇಂದ್ರ ಸರ್ಕಾರ ನಮ್ಮ ಸಮಾಜಕ್ಕೆ ಶೇ.7.5 ಮೀಸಲಾತಿ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರ ಸಮುದಾಯಕ್ಕೆ ಶೇ.3 ಮಾತ್ರ ಮೀಸಲಾತಿ ನೀಡುತ್ತಿದೆ. ಆದ್ದರಿಂದ ರಾಜ್ಯದಲ್ಲಿಯೂ ಮೀಸಲಾತಿ ಹೆಚ್ಚಿಸಲು ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ತಿಳಿಸಿದರು.

ನಿಜಗಲ್ ಗ್ರಾಪಂ ಮಾಜಿ ಅಧ್ಯಕ್ಷ ಎನ್.ಆರ್.ಸಿದ್ದರಾಜು, ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ರಾಜಣ್ಣ, ವಾಲ್ಮೀಕಿ ಸಮುದಾಯದ ಮುಖಂಡರಾದ ರಾಮಮೂರ್ತಿ, ಅಗಳಕುಪ್ಪೆ ಶಿವಕುಮಾರ್, ಶಿವಗಂಗೆ ನಾಗೇಶ ನಾಯ್್ಕ ಇತರರು ಇದ್ದರು.

Leave a Reply

Your email address will not be published. Required fields are marked *