ಮೀನುಗಾರರ ಕುರಿತು ಸುಳಿವು ಲಭ್ಯ

ಬೆಂಗಳೂರು: ರಾಜ್ಯದ ಕರಾವಳಿಯಿಂದ ಕಾಣೆಯಾಗಿದ್ದ ಮೀನುಗಾರರ ಸುಳಿವು ಸಿಕ್ಕಿದ್ದು, ನೌಕಾಪಡೆಯವರು ರೇಡಿಯೊ ಫ್ರೀಕ್ವೆನ್ಸಿ ಮೂಲಕ ಹುಡುಕಾಟ ನಡೆಸಿದ್ದಾರೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದರು. ಗುರುವಾರ ಸಂಜೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮೀನುಗಾರರ ಪತ್ತೆಗೆ ಕೇಂದ್ರ ರಕ್ಷಣಾ ಪಡೆಯ ನೆರವು ಪಡೆಯಲಾಗಿದೆ. ಅಲ್ಲದೆ ಮಹಾರಾಷ್ಟ್ರ ಗೃಹಸಚಿವರ ಜತೆ ಮಾತುಕತೆ ನಡೆಸಿ ಸಹಾಯ ಕೇಳಿದ್ದೇವೆ. ಸೂಕ್ಷ್ಮ ವಿಷಯವಾದ್ದರಿಂದ ಹೆಚ್ಚಿನ ವಿವರ ತಿಳಿಸಲು ಸಾಧ್ಯವಿಲ್ಲ ಎಂದರು. ಮೀನುಗಾರರು ಪತ್ತೆಗಾಗಿ ಮಹಾರಾಷ್ಟ್ರ ಗೃಹಸಚಿವರ ಭೇಟಿಗೆ ರಾಜ್ಯದಿಂದ ನಿಯೋಗ ಕಳಿಸಲು ಸಚಿವರಾದ ಯು.ಟಿ. ಖಾದರ್, ಜಯಮಾಲಾ ಹಾಗೂ ವೆಂಕಟರಾವ್ ನಾಡಗೌಡ ಅವರು ಎಂ.ಬಿ.ಪಾಟೀಲ್ ಜತೆಗೂ ರ್ಚಚಿಸಿದರು.

Leave a Reply

Your email address will not be published. Required fields are marked *