17.8 C
Bengaluru
Wednesday, January 22, 2020

ಮಿತ ನೀರು, 24 ಲಕ್ಷ ರೂ. ಉಳಿಕೆ!

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

 ಬೆಂಗಳೂರು: ನೀರಿನ ಮಿತಬಳಕೆಗಾಗಿ 19 ಟವರ್​ಗಳ 1,830 ಫ್ಲ್ಯಾಟ್​ಗಳ ನಿವಾಸಿಗಳು ಮಾಡಿದ ತಲಾ 45 ರೂ. ಹೂಡಿಕೆ, ಪ್ರತಿವರ್ಷ 24 ಲಕ್ಷ ರೂ. ಉಳಿತಾಯಕ್ಕೆ ಅವಕಾಶ ಮಾಡಿಕೊಟ್ಟಿದೆ! ಹೌದು. ಇದು ನಂಬಲೇಬೇಕಾದ ಸಂಗತಿ!

ನಗರದ ಹುಳಿಮಾವು ಸಮೀಪದ ಅಕ್ಷಯನಗರದ ವೆಸ್ಟೆಂಡ್ ಹೈಟ್ಸ್ ಅಪಾರ್ಟ್​ವೆುಂಟ್​ಗಳ ನಿವಾಸಿಗಳು ಈ ಸಾಧನೆ ಮಾಡಿದವರು. 19 ಟವರ್​ಗಳಲ್ಲಿ ಒಟ್ಟು 1,830 ಫ್ಲ್ಯಾಟ್​ಗಳಿದ್ದು, ಪ್ರತಿ ಫ್ಲ್ಯಾಟ್ ನಿವಾಸಿಗಳ ಸಂಖ್ಯೆಗೆ ಅನುಗುಣವಾಗಿ ನೀರು ಒದಗಿಸಲು ಜಲಮಂಡಳಿ ಪೂರೈಸುವ ನೀರು ಸಾಲುತ್ತಿರಲಿಲ್ಲ. ಹೀಗಾಗಿ, ಪ್ರತಿ ವರ್ಷ 12 ಸಾವಿರ ಲೀಟರ್ ಸಾಮರ್ಥ್ಯದ 2 ಸಾವಿರ ಟ್ಯಾಂಕರ್ ನೀರು ತರಿಸಲಾಗುತ್ತಿತ್ತು. ಇದರಿಂದ ಅಪಾರ್ಟ್​ವೆುಂಟ್​ಗಳ ನಿರ್ವಹಣಾ ವೆಚ್ಚ ತುಂಬಾ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೀರಿನ ಮಿತಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಅಪಾರ್ಟ್​ವೆುಂಟ್ ನಿವಾಸಿಗಳು ನಿರ್ಧರಿಸಿದರು. ಅವರ ಈ ಆಸಕ್ತಿಗೆ ಜಲಸಂರಕ್ಷಣಾ ಸಮಿತಿ ಸ್ಪಷ್ಟ ರೂಪು ನೀಡಿತು. ಇದರಿಂದಾಗಿ ಈಗ ಅಪಾರ್ಟ್​ವೆುಂಟ್ ನಿವಾಸಿಗಳಿಗೆ ನಿರ್ವಹಣಾ ವೆಚ್ಚದಲ್ಲಿ ಲಕ್ಷಾಂತರ ರೂ. ಉಳಿತಾಯವಾಗುತ್ತಿದೆ.

ಶವರ್ ಬದಲು ಬಕೆಟ್ ಬಳಕೆ: ಸ್ನಾನ ಮಾಡಲು ಶವರ್ ಬದಲು ಅಪಾರ್ಟ್​ವೆುಂಟ್ ನಿವಾಸಿಗಳು ಬಕೆಟ್ ನೀರು ಬಳಸಲು ಆರಂಭಿಸಿದರು. ಆರ್​ಒ ನೀರು ಶುದ್ಧೀಕರಿಸುವ ಯಂತ್ರದಿಂದ ಹೊರಬರುವ ನೀರಿನ ಮರುಬಳಕೆ, ಅಂಗಳ ತೊಳೆಯಲು ಪೊರಕೆ ಮತ್ತು ಬಕೆಟ್​ನಲ್ಲಿ ನೀರು ಬಳಸಲು ಆರಂಭಿಸಿದರು.

1,300 ಕೆಎಲ್​ಡಿ ಎಸ್​ಟಿಪಿ ನೀರು: ವೆಸ್ಟೆಂಡ್ ಹೈಟ್ಸ್​ನಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವಿದೆ. ಇಲ್ಲಿ ಸಂಸ್ಕರಣೆಗೊಳ್ಳುವ 1,300 ಕೆಎಲ್​ಡಿ ನೀರನ್ನು ಉದ್ಯಾನ ಮತ್ತು ಶೌಚಗೃಹದಲ್ಲಿ ಫ್ಲಶ್​ಗಳಿಗೆ ಮರುಬಳಕೆ ಮಾಡಲಾಗುತ್ತಿದೆ. ಅಪಾರ್ಟ್​ವೆುಂಟ್​ಗಳಲ್ಲಿ ಇರುವ 1,300ಕ್ಕೂ ಹೆಚ್ಚು ಕಾರುಗಳ ಸ್ವಚ್ಛತೆಗೆ ನೀರನ್ನು ಬಳಸುವುದಿಲ್ಲ. ಬದಲಿಗೆ ವಾಟರ್​ಲೆಸ್ ಕಾರ್ ಕ್ಲೀನಿಂಗ್ ಸರ್ವಿಸ್​ನವರು ವಾರದಲ್ಲಿ 6 ದಿನ ಅಪಾರ್ಟ್​ವೆುಂಟ್​ಗೆ ಬಂದು ಕಾರುಗಳನ್ನು ನೀರು ಬಳಸದೆ ಸ್ವಚ್ಛಗೊಳಿಸಿಕೊಡುತ್ತಾರೆ. ಇದರಿಂದಲೂ ಬಹಳಷ್ಟು ಪ್ರಮಾಣದಲ್ಲಿ ನೀರನ್ನು ಉಳಿಸಲಾಗುತ್ತಿದೆ.

ಎರಡು ಸಾವಿರ ಕೆಎಲ್​ಡಿ ನೀರು ಉಳಿತಾಯ: ಬೆಂಗಳೂರು ಜಲಮಂಡಳಿ 500 ರಿಂದ 1 ಸಾವಿರ ಕೆಎಲ್​ಡಿ ನೀರು ಸರಬರಾಜು ಮಾಡುತ್ತಿದೆ. ಇದು ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಇದರ ಜತೆಗೆ 12 ಸಾವಿರ ಲೀ. ಸಾಮರ್ಥ್ಯದ 2 ಸಾವಿರ ಟ್ಯಾಂಕರ್​ಗಳಲ್ಲಿ ನೀರು ತರಿಸಲಾಗುತ್ತಿತ್ತು. ಹೀಗಾಗಿ ನೀರಿನ ಮಿತಬಳಕೆಗಾಗಿ ಪ್ರತಿ ಫ್ಲ್ಯಾಟ್​ಗಳ 3 ಕೊಳಾಯಿಗಳಂತೆ 45 ರೂ. ವೆಚ್ಚದಲ್ಲಿ 1,200 ಫ್ಲ್ಯಾಟ್​ಗಳಲ್ಲಿ ನೀರಿನ ವ್ಯರ್ಥವನ್ನು ಕಡಿಮೆ ಮಾಡುವ ಏರೇಟರ್ ಎಂಬ ಸಾಧನವನ್ನು ಅಳವಡಿಸಲಾಯಿತು. ಇದರಿಂದಾಗಿ ಅಪಾರ್ಟ್ ಮೆಂಟ್​ನಲ್ಲಿ ಪ್ರತಿ ತಿಂಗಳು ಖರ್ಚಾಗುತ್ತಿದ್ದ 22,000 ಕೆಎಲ್​ಡಿ ನೀರಿನಲ್ಲಿ 2,000 ಕೆಎಲ್​ಡಿ ನೀರು ಉಳಿತಾಯವಾಗಲಾರಂಭಿಸಿದೆ. ಅಂದರೆ, 167 ಟ್ಯಾಂಕರ್​ಗಳ ನೀರು ಪ್ರತಿ ತಿಂಗಳು ಉಳಿತಾಯವಾಗುತ್ತಿದೆ. ಇದರರ್ಥದಲ್ಲಿ ಪ್ರತಿ ತಿಂಗಳು 2.04 ಲಕ್ಷ ರೂ.ನಂತೆ ವಾರ್ಷಿಕವಾಗಿ 24 ಲಕ್ಷ ರೂ.ಗೂ ಹೆಚ್ಚು ಉಳಿತಾಯವಾಗುತ್ತಿದೆ.

ದ್ವಾರಕಾನಾಥ್ ಎ

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...