More

  ಮಾ.24ರಂದು ರೋಟರಿ ಜಿಲ್ಲಾ- 3182 ಕಾರ್ಯಕ್ರಮ ಮಾನಿನಿ ಸಮಾವೇಶ

  ಹಾಸನ: ನಗರದ ನಂದಗೋಕುಲ ಕನ್ವೆನ್ಷನ್ ಹಾಲ್‌ನಲ್ಲಿ ಮಾ.24ರಂದು ರೋಟರಿ ಜಿಲ್ಲಾ- 3182 ಕಾರ್ಯಕ್ರಮವಾದ ಮಾನಿನಿ ಸಮಾವೇಶ ಜಿಲ್ಲಾ ಗವರ್ನರ್ ರೊಟೇರಿಯನ್ ಬಿ.ಸಿ.ಗೀತಾ ಅವರ ನೇತೃತ್ವದಲ್ಲಿ ಜರುಗಲಿದೆ ಎಂದು ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಡಾ.ಬಿ.ಕೆ. ಸೌಮ್ಯಮಣಿ ಅವರು ತಿಳಿಸಿದರು.
  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಂದ ಸುಮಾರು 500 ರೊಟೇರಿಯನ್ ಜೊತೆ ಅವರ ಕುಟುಂಬ ಭಾಗವಹಿಸಲಿದೆ. ಚಲನಚಿತ್ರ ನಿರ್ದೇಶಕರು, ನಿರ್ಮಾಪಕರಾದ ಟಿ.ಎಸ್. ನಾಗಾಭರಣ ಮುಖ್ಯ ಭಾಷಣ ಮಾಡಲಿದ್ದಾರೆ. ಪ್ರಸಕ್ತ ದೃಶ್ಯ ಮಾಧ್ಯಮ-ಮಹಿಳೆ, ಪರಿಸರ ಸಂರಕ್ಷಣೆ, ಭಾರತೀಯ ಚಿಂತನೆಯಲ್ಲಿ ಮಹಿಳೆಯ ಪಾತ್ರ, ಮಾನವೀಯ ಮೌಲ್ಯ ಸಶಕ್ತ ಗೊಳಿಸುವಲ್ಲಿ ನಾಯಕತ್ವ ಗುಣಗಳು ಹೀಗೆ ಹಲವು ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡುವರು. ಸಮಾವೇಶದ ಉದ್ಘಾಟನೆಯನ್ನು ಜಿಲ್ಲಾ ಗೌವರ್ನರ್ ಬಿ.ಸಿ. ಗೀತಾ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಜಿಲ್ಲಾ ಮಾಜಿ ಗೌವರ್ನರ್ ಅಭಿನಂದನ್ ಶೆಟ್ಟಿ, ಡಿ.ಎಸ್.ರವಿ, ದೇವಾನಂದ್, ಕೆ.ಪಾಲಾಕ್ಷ, ಬಿ.ಎಂ. ಭಟ್, ಸ್ಫೂರ್ತಿ ವಿಶ್ವಾಸ್, ವಾಗೀಶ್ ಭಟ್ ಭಾವವಹಿಸಲಿದ್ದಾರೆ ಎಂದು ತಿಳಿಸಿದರು.
  ಡಾ.ವಾಣಿ ನಾಗೇಶ್, ಡಾ.ಮಮತಾ, ಮಮತಾ ನಟೇಶ್, ರೋಟರಿ ಕ್ವಾಂಟಾ ಅಧ್ಯಕ್ಷ ಬಿ.ಆರ್.ಬೊಮ್ಮೇಗೌಡ, ವಿಕ್ರಂ, ನಾಗೇಶ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts