ಮಾ. 10 ರಂದು ಸಮಾವೇಶ

ರಾಯಚೂರು: ಮಾ. 10 ರಂದು ದಲಿತ, ಮುಸ್ಲಿಂ ಮತ್ತು ದಮನಿತ ಸಮುದಾಯಗಳ ಹಕ್ಕೊತ್ತಾಯ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಉಳಿವಿಗಾಗಿ ಕರ್ನಾಟಕ ರಾಜ್ಯ ಸಂಚಾಲಕ ಕೆ.ಎಲ್.ಅಶೋಕ ಹೇಳಿದರು.

ಯಾವುದೇ ಪಕ್ಷಕ್ಕೆ ಸಮಸ್ಯೆಗಳ ಅಜೆಂಡಾ ಪ್ರಮುಖ್ಯ ಆಗುತ್ತಿಲ್ಲ. ಜಾತಿ, ಹಣ, ಹೆಂಡ ಮುಖ್ಯ ಆಗುತ್ತಿವೆ.
ಈ ಲೋಕಸಭಾ ಚುನಾವಣೆಯಲ್ಲಿ ದೇಶಕ್ಕಾಗಿ ನಾವು ಎನ್ನುವ ಆಂದೋಲನ ರೂಪಿಸಲಾಗಿದೆ.

ಪಕ್ಷಗಳು ಮುಖ್ಯ ಅಲ್ಲ ಸಂವಿಧಾನ ಮುಖ್ಯ ಆಗಿದೆ. ಈ ಬಗ್ಗೆ ಸಂಸದರ ಜತೆ ಮುಖಾಮುಖಿ ಮಾತಿಗೆ  ಸಿದ್ಧತೆ ನಡೆದಿದೆ.
ಚುನಾವಣೆಯಲ್ಲಿ ಸಂವಿಧಾನ ಬದಲಿಸುವ ಮಾತನಾಡುವ ಯಾರೇ ಆಗಲಿ ಅವರಿಗೆ ಬೆಂಬಲ ನೀಡದಂತೆ ಜಾಗೃತಿ ಸಮಾವೇಶ ಆಗಲಿದೆ.

ಸರ್ಕಾರ ಒಪ್ಪಿದ ಸಾಚಾರ್, ಆದಿವಾಸಿ ಗಳ ಹಕ್ಕು ಕುರಿತು ಚುನಾವಣೆ ವಿಷಯಗಳ ಬಗ್ಗೆ ಎಲ್ಲ ಪಕ್ಷಗಳಿಂದ ಪ್ರಣಾಳಿಕೆ ಸೇರಿಸಬೇಕು.
ಮಾ. 31 ರಂದು ಧಾರವಾಡದಲ್ಲಿ ಯಾರಿಗೆ ಮತ ಹಾಕಬೇಕು ಎನ್ನುವ ಬಗ್ಗೆ ತೀರ್ಮಾನ ಮಾಡಲಾಗುವುದು.
ಈ ಸಮಾವೇಶದಲ್ಲಿ ಗುಜರಾತ್ ಶಾಸಕ ಜಿಗ್ನೇಶ ಮೇವಾನಿ, ರಾಜೀವ ಗಾಂಧಿ ವಿವಿ ಉಮಾರ್ ಖಾಲೀದ್ ಸೇರಿ ಹಲವು ಹೋರಾಟಗಾರರು ಭಾಗಿಯಾಗುವುದಾಗಿ ತಿಳಿಸಿದರು.