ಮಾಹಿತಿ ಮನೆ 

ಎಲ್ಲರಿಗೂ ಬಹುಕಾಲ ಜೀವಿಸಬೇಕೆಂಬ ಬಯಕೆ ಇರುವುದು ಸಹಜ. ಅದಕ್ಕೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡುವವರಿದ್ದಾರೆ. ದೀರ್ಘಾಯುಷಿಗಳಾಗಬೇಕಾದರೆ ಏನು ಮಾಡಬೇಕೆಂಬುದರ ಬಗ್ಗೆ 2015ರಲ್ಲಿ ಅಮೆರಿಕದ ನೂರಕ್ಕೂ ಅಧಿಕ ವಯೋವೃದ್ಧರ ಸಮೀಕ್ಷೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ 109 ವರ್ಷದ ಜೆಸ್ಸಿ ಗ್ಯಾಲನ್ ಎನ್ನುವವರು ನೀಡಿದ ವಿಭಿನ್ನ ಸಲಹೆ ಅಚ್ಚರಿ ಮೂಡಿಸುವಂತಿತ್ತು. ‘ಹೆಚ್ಚಿನ ಮಹಿಳೆಯರು ಉತ್ತಮ ಪುರುಷನಿಗಾಗಿ ಹಾತೊರೆಯುತ್ತಾರೆ. ಆದರೆ ಇದಕ್ಕಾಗಿ ಸಮಯವನ್ನು ಹಾಳುಮಾಡದೆ ಆ ಹಂಬಲವನ್ನು ಬಿಟ್ಟುಬಿಡಬೇಕು. ನಿಮ್ಮ ಕನಸಿನ ಗಂಡು ನಿಮ್ಮನ್ನು ಹುಡುಕಿ ಬರುವಂತಾಗಬೇಕು. ಪುರುಷರಿಂದ ದೂರವಿದ್ದುದೇ ನನ್ನ ದೀರ್ಘಾಯುಷ್ಯದ ಗುಟ್ಟು. ಅವರ ಮೌಲ್ಯ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಅವರು ತೊಂದರೆಯುಂಟುಮಾಡುತ್ತಾರೆ’ ಎಂದಿದ್ದ ಜೆಸ್ಸಿ, ‘ನನಗೆ ಆಹಾರ ಅತ್ಯಂತ ಪ್ರಿಯ ಹಾಗೂ ನಾನು ಬದುಕನ್ನು ಸಂಪೂರ್ಣವಾಗಿ ಅನುಭವಿಸಿದ್ದೇನೆ’ ಎಂದಿದ್ದರು. 1906ರಲ್ಲಿ ಸ್ಕಾಟ್ಲೆಂಡ್​ನ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಜೆಸ್ಸಿ, ನಗರಪ್ರದೇಶದಲ್ಲಿದ್ದ ಶ್ರೀಮಂತರೊಬ್ಬರ ಮನೆಯಲ್ಲಿ ಆಳಾಗಿ ಕೆಲಸ ಆರಂಭಿಸಿದರು. ನಂತರ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿದರು. ಅವರು ನಿಧನರಾಗಿದ್ದು 2015ರ ಮಾರ್ಚ್​ನಲ್ಲಿ.

Leave a Reply

Your email address will not be published. Required fields are marked *