Friday, 16th November 2018  

Vijayavani

Breaking News

ಮಾಸ್ಟರ್ಸ್ ಗಾಲ್ಪ್ ಟೂರ್ನಿ

Thursday, 12.07.2018, 3:03 AM       No Comments

ಬೆಂಗಳೂರು: ಕಳೆದ ವರ್ಷದ ಅದ್ಭುತ ಯಶಸ್ಸಿನ ಬಳಿಕ 2ನೇ ಆವೃತ್ತಿಯ ಟೇಕ್ ಸಲ್ಯೂಷನ್ ಮಾಸ್ಟರ್ಸ್ ಗಾಲ್ಪ್ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಕರ್ನಾಟಕ ಗಾಲ್ಪ್ ಅಸೋಸಿಯೇಷನ್ ಆಶ್ರಯದಲ್ಲಿ ಆಗಸ್ಟ್ 9 ರಿಂದ 12ರವರೆಗೆ ಟೂರ್ನಿ ನಡೆಯಲಿದೆ.

ಏಷ್ಯನ್ ಟೂರ್ ಭಾಗವಾಗಿರುವ ಟೂರ್ನಿ ಕೆಜಿಎ ಕೋರ್ಸ್ ನಲ್ಲಿ ನಡೆಯಲಿದೆ. ಟೇಕ್​ನ ರಾಯಭಾರಿಯಾಗಿರುವ ಎಸ್​ಎಸ್​ಪಿ ಚೌರಾಸಿಯಾ, ಆರು ಬಾರಿಯ ಏಷ್ಯನ್ ಟೂರ್ ಹಾಗೂ ನಾಲ್ಕು ಬಾರಿಯ ಯುರೋಪಿಯನ್ ಟೂರ್ ಚಾಂಪಿಯನ್ ಖಲಿನ್ ಜೋಶಿ ಕೂಡ ಆಡಲಿದ್ದಾರೆ. ಕಳೆದ ವರ್ಷ ಖಲಿನ್ ಜೋಶಿ ಈ ಟೂರ್ನಿಯಲ್ಲಿ 2ನೇ ಸ್ಥಾನ ಪಡೆದಿದ್ದರು. 2015ರ ಪ್ಯಾನಸೋನಿಕ್ ಓಪನ್ ಇಂಡಿಯಾ ಚಾಂಪಿಯನ್ ಚಿರಾಗ್ ಕುಮಾರ್, ಸ್ಥಳೀಯ ಪ್ರತಿಭೆ ಎಸ್. ಚಿಕ್ಕರಂಗಪ್ಪ ಕೂಡ ಕಣದಲ್ಲಿದ್ದಾರೆ. ಹಾಲಿ ಚಾಂಪಿಯನ್ ಪೂಮ್ ಸಾಕ್ಷಸನ್​ಸಿನ್​ರೊಂದಿಗೆ ಅಂತಾರಾಷ್ಟ್ರೀಯ ಕಣದ ಅಗ್ರ ಗಾಲ್ಪರ್​ಗಳು ಸ್ಪರ್ಧೆ ಮಾಡಲಿದ್ದಾರೆ.

2.4 ಕೋಟಿ ಬಹುಮಾನ

ಕಳೆದ ವರ್ಷ 2 ಕೋಟಿ ರೂ. (300,000 ಯುಎಸ್ ಡಾಲರ್) ವೆಚ್ಚದಲ್ಲಿ ಟೂರ್ನಿ ನಡೆದಿತ್ತು. ಈ ಬಾರಿ 50 ಸಾವಿರ ಯುಎಸ್ ಡಾಲರ್ ಮೊತ್ತವನ್ನು ಬಹುಮಾನದಲ್ಲಿ ಹೆಚ್ಚಳ ಮಾಡಲಾಗಿದ್ದು, ಒಟ್ಟು ಮೊತ್ತ ಅಂದಾಜು 2.40 ಕೋಟಿ ರೂಪಾಯಿ ಆಗಿದೆ.

Leave a Reply

Your email address will not be published. Required fields are marked *

Back To Top