Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಮಾವು ಬೆಳೆಗಾರರಿಗೆ ಸಿಗುವುದೇ ನಷ್ಟಪರಿಹಾರ?

Tuesday, 10.07.2018, 3:45 AM       No Comments

ರಾಮನಗರ:ಇದೀಗ ಕೋಲಾರದಲ್ಲಿ ಮಾವು ಬೆಳೆಗಾರರ ಹೋರಾಟ ಆರಂಭಗೊಂಡಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಮಾವಿನ ಹಣ್ಣುಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ. ರೈತರ ಹೋರಾಟಕ್ಕೆ ಸ್ಪಂದಿಸಿರುವ ಸರ್ಕಾರ ಬೆಂಬಲ ಬೆಲೆ ಘೊಷಣೆ ಸಂಬಂಧ ಪೂರಕವಾಗಿ ಸ್ಪಂದಿಸಿದೆ. ಆದರೆ ರಾಮನಗರ ಜಿಲ್ಲೆಯಲ್ಲೂ ಈಗಾಗಲೇ ಬೆಳೆ ನಷ್ಟಕ್ಕೆ ಒಳಗಾದ ಮಾವು ಬೆಳೆಗಾರರು, ಸರ್ಕಾರ ನಮ್ಮ ನೆರವಿಗೂ ಬರುವುದೇ ಎಂದು ಎದುರು ನೋಡುತ್ತಿದ್ದಾರೆ.

ಸರ್ಕಾರ ಮಾವಿಗೆ ಬೆಂಬಲ ಬೆಲೆ ನೀಡುವುದಾಗಿ ಘೊಷಣೆ ಮಾಡಿದೆಯಾದರೂ, ಈಗಾಗಲೇ ನಷ್ಟಕ್ಕೆ ಒಳಗಾಗಿರುವ ರಾಮನಗರ ಜಿಲ್ಲೆಯ ಮಾವು ಬೆಳೆಗಾರರಿಗೂ ನಷ್ಟವನ್ನು ತುಂಬಿಕೊಡಲಿದೆಯೇ ಎಂದು ರೈತರು ಎದರು ನೋಡುತ್ತಿದ್ದಾರೆ.

ಜಿಲ್ಲೆಯಿಂದ ಮೊದಲು ಮಾವು:ರಾಮನಗರ ಜಿಲ್ಲೆಯ ಮಾವು ವಾತಾವರಣ ಅನುಕೂಲದಿಂದ ಮಾರುಕಟ್ಟೆಗೆ ಮೊದಲು ಪ್ರವೇಶ ಮಾಡುತ್ತದೆ. 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ರಾಮನಗರ ತಾಲೂಕಿನಲ್ಲಿ 7300 ಹೆಕ್ಟೇರ್, ಚನ್ನಪಟ್ಟಣದಲ್ಲಿ 5300, ಮಾಗಡಿಯಲ್ಲಿ 5700 ಮತ್ತು ಕನಕಪುರದಲ್ಲಿ 4600 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಹೆಚ್ಚು ಪ್ರದೇಶವನ್ನು ಬಾದಾಮಿ ಜಾತಿಗೆ ಸೇರಿದ ಮರಗಳು ಆವರಿಸಿವೆ. ಪ್ರತಿ ಹೆಕ್ಟೇರ್​ಗೆ 10 ಮೆಟ್ರಿಕ್ ಟನ್ ಮಾವು ಇಳಿವರಿಯಾಗಬೇಕಿತ್ತು. ಆದರೆ ಈ ಬಾರಿ ರಾಮನಗರ ಮಾರುಕಟ್ಟೆಗೆ 64,127 ಕ್ವಿಂಟಾಲ್ ಹಾಗೂ ಚನ್ನಪಟ್ಟಣಕ್ಕೆ 1.85 ಲಕ್ಷ ಕ್ವಿಂಟಾಲ್ ಮಾವು ಮಾತ್ರ ಬಂದಿದೆ.

ಮಾವು ರಸ್ತೆಗೆ ಸುರಿದಿದ್ದರು: ಮೂರ್ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಸೊರಗಿದ್ದ ಜಿಲ್ಲೆಯ ಮಾವು ಬೆಳೆಗಾರರು, ಈ ಬಾರಿ ಅತಿಯಾದ ಮಳೆಯಿಂದಾಗಿ ನಷ್ಟಕ್ಕೆ ಒಳಗಾದರು. ಹವಾಮಾನ ವೈಪರೀತ್ಯದಿಂದಾಗಿ ಕಟಾವಿಗೆ ಬಂದ ಮಾವು ಮಣ್ಣು ಸೇರಿತು. ಕೀಟಬಾಧೆ ಹಾಗೂ ಮಳೆಯಿಂದ ಕಾಯಿ ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳಿಗೆ ಬೆಲೆ ಇಲ್ಲದಂತೆ ಆಯಿತು. ಪ್ರತಿ ಕೆಜಿಗೆ 70-80 ರೂ.ವರೆಗೂ ಮಾರಾಟವಾಗಬೇಕಿದ್ದ ಬಾದಾಮಿ ಕಾಯಿಗಳನ್ನು ಕೇವಲ 3-4 ರೂ.ಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಇದರಿಂದ ಬೇಸತ್ತ ರೈತರು ಕಾಯಿಯನ್ನು ಕೋಯ್ಲು ಮಾಡದೆ ಮರಗಳಲ್ಲಿಯೇ ಬಿಟ್ಟರೆ, ಕೋಯ್ಲಾದ ಮಾವನ್ನು ರಸ್ತೆಯಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು.

ನಷ್ಟ ತುಂಬುವುದೇ ಸರ್ಕಾರ?: ಸರ್ಕಾರ ಪ್ರಸ್ತುತ ಪ್ರತಿ ಟನ್ ಮಾವಿಗೆ 2500 ರೂಪಾಯಿ ಬೆಂಬಲ ಬೆಲೆ ನೀಡುವುದಾಗಿ ಘೊಷಣೆ ಮಾಡಿದೆ. ಇದು ಮಾರುಕಟ್ಟೆಗೆ ಬರುವ ಮಾವು ಖರೀದಿಗೆ ಅಲಂಬಿತವಾಗಿರುತ್ತದೆ. ಆದರೆ, ಈಗಾಗಲೇ ನಷ್ಟಕ್ಕೆ ಒಳಗಾಗಿರುವ ರಾಮನಗರ ಜಿಲ್ಲೆಯ ಸಾವಿರಾರು ಮಾವು ಬೆಳೆಗಾರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಧಾವಿಸಬೇಕು. ಇನ್ನು ಮಾರುಕಟ್ಟೆಗೆ ಬರುವ ಕಾಯಿ ಪ್ರಮಾಣ ಬಹುತೇಕ ಕಡಿಮೆ ಇದೆ. ಅಲ್ಲದೆ, ಕೋಯ್ಲು ಮಾಡದೆ ಬಿಟ್ಟಿದ್ದರಿಂದ ಕೀಟಬಾಧೆಗೆ ಕಾಯಿ ತುತ್ತಾಗಿದೆ. ಸರ್ಕಾರ ಪ್ರತಿ ಹೆಕ್ಟೇರ್​ಗೆ ಉಂಟಾಗಿರುವ ನಷ್ಟವನ್ನು ಪರಿಹಾರದ ರೂಪದಲ್ಲಿ ತುಂಬಿಕೊಡಲಿ. ಇದರಿಂದ ಅಲ್ಪ ಸ್ವಲ್ಪ ಚೇತರಿಕೆ ಕಾಣಬಹುದಾಗಿದೆ ಎನ್ನುವುದು ಜಿಲ್ಲೆಯ ರೈತರ ಆಗ್ರಹ.

ಸಿಎಂ ನಮ್ಮವರೇ?: ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರ ಮಧ್ಯ ಪ್ರವೇಶದಿಂದಾಗಿ ಮಾವಿಗೆ ಬೆಂಬಲ ನೀಡುವ ನಿರ್ಧಾರವನ್ನು ಸರ್ಕಾರ ಘೊಷಣೆ ಮಾಡಿದೆ. ಅದೇರೀತಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯವರೇ ಆಗಿದ್ದು, ಜಿಲ್ಲೆಯ ರೈತರ ನೆರವಿಗೆ ಈಗಲಾದರೂ ಧಾವಿಸಬೇಕು ಎನ್ನುವ ಕೂಗು ಮಾವು ಬೆಳೆಗಾರರ ವಲಯದಿಂದ ಕೇಳಿ ಬಂದಿದೆ.

 

Leave a Reply

Your email address will not be published. Required fields are marked *

Back To Top