ಹಗರಿಬೊಮ್ಮನಹಳ್ಳಿ: ಮಾಲವಿ ಜಲಾಶಯದ ಎಲ್ಲ 10ನೇ ಕ್ರಸ್ಟ್‌ಗೇಟ್‌ಗಳು ದುರಸ್ತಿ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಜಲಾಶಯದಲ್ಲಿನ ನೀರನ್ನು ಹಗರಿ ಹಳ್ಳಕ್ಕೆ ಭಾನುವಾರ ಸಂಜೆ ಹರಿಬಿಡಲಾಯಿತು.

ಎರಡು ತಿಂಗಳ ಹಿಂದೆಯೇ ಗೇಟ್‌ಗಳ ದುರಸ್ತಿ ಕಾರ್ಯಕ್ಕೆ ನೀರಾವರಿ ಇಲಾಖೆಯಿಂದ 4.2 ಕೋಟಿ ರೂ. ಬಿಡುಗಡೆಯಾಗಿದೆ. ದುರಸ್ತಿ ಕಾರ್ಯ ಕೈಗೊಂಡರೆ ಜಲಾಶಯದಿಂದ ನೀರು ಹೊರಬಿಡಬೇಕಾಗುತ್ತದೆ ಎಂಬ ಕಾರಣಕ್ಕೆ ದುರಸ್ತಿ ಕಾರ್ಯ ಮುಂದೂಡಲಾಗಿತ್ತು. ಇದೀಗ ಜಲಾಶಯದಲ್ಲಿ ಸ್ವಲ್ಪ ಪ್ರಮಾಣದ ನೀರಿದ್ದು, ಅದನ್ನು ಖಾಲಿ ಮಾಡಲಾಗುತ್ತಿದೆ. ಜಲಾಶಯಕ್ಕೆ ಮಳೆ ನೀರು ಹರಿದು ಬರುವ ಮುನ್ನ ದುರಸ್ತಿ ಕೆಲಸ ಮುಗಿಸಬೇಕಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಕೆ.ನೇಮಿರಾಜ್ ನಾಯ್ಕ, ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳ ದುರಸ್ತಿ ಕಾರ್ಯ ನಡೆಯಲಿದೆ. ಜಲಾಶಯದಲ್ಲಿನ ನೀರು ಸೋರಿಕೆಯಾಗದಂತೆ ಕಾಮಗಾರಿ ಕೈಗೊಂಡು ಶೀಘ್ರ ಮುಗಿಸುವಂತೆ ಸೂಚಿಸಲಾಗಿದೆ ಎಂದರು.