ಬೆಂಗಳೂರು: ವಿಕೆಸಿ ಬ್ರ್ಯಾಂಡ್ ಹೆಸರಿನಲ್ಲಿ ಪಾದರಕ್ಷೆಗಳನ್ನು ತಯಾರಿಸಿ ಅತಿ ಕಡಿಮೆ ಅವಧಿಯಲ್ಲೇ ದೇಶದ ಗ್ರಾಹಕರನ್ನು ಸೆಳೆದಿರುವ ಯು4ಐಸಿ ಅಂತಾರಾಷ್ಟ್ರೀಯ ಕಂಪನಿ ಇದೀಗ ‘ವಾಕರೂ’ ಬ್ರಾ್ಯಂಡ್ನ ಪಾದರಕ್ಷೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸ್ಪೋರ್ಟ್ಸ್, ಲೈಫ್ಸ್ಟೈಲ್, ಫಾರ್ಮಲ್ಸ್, ಕ್ಯಾಸ್ಯುಲ್ಸ್ ಮತ್ತು ಕಿಡ್ಸ್ ಸೇರಿ ವಿವಿಧ ಶ್ರೇಣಿಯ ಪಾದರಕ್ಷೆ ಮತ್ತ ಶೂಗಳನ್ನು ‘ವಾಕರೂ’ ಬ್ರಾ್ಯಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಯಾ ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದೆ ಎಂದು ಕಂಪನಿ ಎಂಡಿ ವಿಕೆಸಿ ನೌಷದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2013ರಲ್ಲಿ ವಾಕರೂ ಬ್ರಾ್ಯಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಪಾದರಕ್ಷೆಗಳು ಗ್ರಾಹಕರನ್ನು ಆಕರ್ಷಿಸಿವೆ. ಇದೀಗ ಆಯಾ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು ವಿವಿಧ ಶ್ರೇಣಿಯ ಪಾದರಕ್ಷೆಗಳನ್ನು ಬಿಡುಗಡೆ ಮಾಡಿದ್ದೇವೆ ಎಂದರು. ಸ್ಪೋರ್ಟ್ಸ್ ಶೂ 600 ರೂ.ನಿಂದ 1,400 ರೂ, ಕ್ಯಾಸುವಲ್ಸ್ 200 ರೂ.ನಿಂದ 400 ರೂ. ಹಾಗೂ ಫಾರ್ಮಲ್ಸ್ ಪಾದರಕ್ಷೆ 400 ರೂ.ನಿಂದ 890 ರೂ.ವರೆಗೆ ದರವಿದೆ ಎಂದು ಹೇಳಿದರು.
1 ಸಾವಿರ ಕೋಟಿ ರೂ. ಗುರಿ: ‘ವಾಕರೂ’ ಬ್ರಾ್ಯಂಡ್ನ ಪಾದರಕ್ಷೆಗಳಿಂದ ಕಳೆದ ವರ್ಷ 480 ಕೋಟಿ ರೂ. ವಹಿವಾಟು ನಡೆದಿದೆ. ಪ್ರಸಕ್ತ ವರ್ಷ 1 ಸಾವಿರ ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದ್ದೇವೆ/ ದೇಶಾದ್ಯಂತ 550 ವಿತರಕರು ಮತ್ತು 1.5 ಲಕ್ಷ ಮಳಿಗೆಗಳಿವೆ. ಬಾಲಿವುಡ್ ನಟ ಅಮೀರ್ ಖಾನ್ ‘ವಾಕರೂ’ ಬ್ರಾ್ಯಂಡ್ನ ರಾಯಭಾರಿಯಾಗಿದ್ದಾರೆ. ನಂಜನಗೂಡು, ಬೆಂಗಳೂರು, ನಲ್ಲೂರು, ಕೊಯಮತ್ತೂರು, ಕಲ್ಲಿಕೋಟೆ, ದೆಹಲಿ, ಭೋಪಾಲ್ ಹಾಗೂ ಬಾಂಗ್ಲಾದೇಶದಲ್ಲಿ ಉತ್ಪಾದನಾ ಘಟಕಗಳಿವೆ. ದೇಶ ವಿದೇಶಗಳಿಗೂ ಪಾದರಕ್ಷೆಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ನೌಷದ್ ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಎನ್.ಪಿ. ಮುಸ್ತಫಾ ಯಾಸೀನ್ ಮಾತನಾಡಿ, ಗ್ರಾಹಕರಿಗೆ ಉತ್ತಮ ದರ್ಜೆಯ ಪಾದರಕ್ಷೆಗಳನ್ನು ನೀಡುವುದು ನಮ್ಮ ಗುರಿಯಾಗಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲ ವಯೋಮಾನದವರ ಪಾದರಕ್ಷೆ ತಯಾರಿಸಲಾಗುತ್ತಿದೆ. 20 ಕೋಟಿ ರೂ. ನಿಂದ ಪ್ರಾರಂಭವಾದ ಕಂಪನಿ ಇದೀಗ 1400 ಕೋಟಿ ರೂ.ಕ್ಕಿಂತ ಹೆಚ್ಚು ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ ಎಂದರು.
ಕ್ರೀಡೆಗಳಿಗೆ ಬಳಸುವ ಶೂ, ಪ್ರತಿನಿತ್ಯ ಉಪಯೋಗಿಸುವ ಮತ್ತು ಹಗುರ ಪಾದರಕ್ಷೆಗಳು ಗ್ರಾಹಕರಿಗೆ ಇಷ್ಟವಾಗುವ ನಿರೀಕ್ಷೆ ಇದೆ. ಮುಂದಿನ ದಿನದಲ್ಲಿ ಈ ಬ್ರಾ್ಯಂಡ್ ಅನ್ನು ದೇಶಾದ್ಯಂತ ವಿಸ್ತರಿಸಲಾಗುವುದು.
| ವಿಕೆಸಿ ನೌಷದ್, ಯು4ಐಸಿ ಅಂತಾರಾಷ್ಟ್ರೀಯ ಕಂಪನಿ ಎಂಡಿ