ಅಥಣಿ: ಉತ್ತರ ಕರ್ನಾಟಕದಲ್ಲಿ ರೈತರು ವಿಜೃಂಭಣೆಯಿಂದ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಕಾರ ಹುಣ್ಣಿಮೆ ಒಂದಾಗಿದೆ. ಕಾರ ಹುಣ್ಣಿಮೆ ಆಚರಣೆಗೆ ರೈತರು ತಯಾರಾಗಿದ್ದಾರೆ.
ಮುಂಗಾರು ಹಂಗಾಮು ಇಲ್ಲಿಂದಲೇ ಪ್ರಾರಂಭವಾಗುವುದು. ಕಾರ ಹುಣ್ಣಿಮೆ ನಿಮಿತ್ತ ಮಣ್ಣಿನ ಎತ್ತುಗಳನ್ನು ಮನೆಯಲ್ಲಿಟ್ಟು ಪೂಜಿಸುವುದು ಪುರಾತನ ಕಾಲದಿಂದಲೂ ಬಂದಿರುವ ಪ್ರತೀತಿ ಇದೆ. ಇದಕ್ಕಾಗಿ ಪಟ್ಟಣದ ಮಾರುಕಟ್ಟೆಗಳಲ್ಲಿ ಬಣ್ಣಬಣ್ಣದ ಎತ್ತುಗಳು ಮಾರಾಟಕ್ಕೆ ಬಂದಿದ್ದು, ಒಂದಕ್ಕಿಂತ ಒಂದು ವಿಶೇಷವಾಗಿ ಕಂಡುಬರುತ್ತಿವೆ.
೨೦ ರೂ. ನಿಂದ ೫೦೦ ರೂ. ವರೆಗೆ ಎತ್ತುಗಳು ಮಾರಾಟವಾಗುತ್ತಿರುವುದು ಕಂಡು ಬಂದಿದೆ. ಇವುಗಳ ಮಧ್ಯೆ ಪಿಒಪಿ ಎತ್ತುಗಳು ಸಹ ರೈತರನ್ನು ಆಕರ್ಷಿಸಿದ್ದು, ಉತ್ತಮ ವ್ಯಾಪಾರ ಕಂಡುಕೊಂಡಿವೆ. ಮಣ್ಣಿನ ಎತ್ತುಗಳನ್ನು ಬಸವಣ್ಣ ರೂಪದಲ್ಲಿ ಕಾಣುವ ರೈತಾಪಿ ವರ್ಗದವರು ಕಾರ ಹುಣ್ಣಿಮೆಯಂದು ಮನೆಯಲ್ಲಿ ಮಣ್ಣಿನ ಎತ್ತುಗಳನ್ನು ಪೂಜಿಸಿ, ಸಿಹಿ ಅಡುಗೆ ಮಾಡಿ ನೈವೇದ್ಯ ಅರ್ಪಿಸುತ್ತಾರೆ. ಬಳಿಕ ಮುಂಗಾರು ಹಂಗಾಮಿನಲ್ಲಿ -ಫಸಲು ಉತ್ತಮವಾಗಿ ಬರಲಿ ಎಂದು ಪ್ರಾರ್ಥಿಸುತ್ತಾರೆ.