ಅಥಣಿ ಗ್ರಾಮೀಣ: ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೋರ್ವನನ್ನು ಮಾರ ಕಾಸದಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಘಟನೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಬಸ್ ನಿಲ್ದಾಣದ ಬಳಿ ಭಾನುವಾರ ರಾತ್ರಿ ನಡೆದಿದೆ.
ಸಂಬರಗಿ ಗ್ರಾಮದ ಸೂರಜ ಅಬಾ ಕಾಂಬಳೆ (24) ಹಲ್ಲೆಗೊಳಗಾದ ವ್ಯಕ್ತಿ. ಇದೇ ಗ್ರಾಮದ ವಿಶಾಲ ಸುರೇಶ ನಾಟೇಕರ, ಅತುಲ ತಾತುಬಾ ನಲವಡೆ ಹಾಗೂ ಸೋನ್ಯಾ ಹಿಮ್ಮತ್ ಶಿಂಧೆ ಹಲ್ಲೆ ಮಾಡಿದರು. ಎತ್ತಿನ ಬಂಡಿ ಶರ್ಯತ್ತು ವೇಳೆ ಆರೋಪಿತರು ಬೇಕಾಬಿಟ್ಟಿಯಾಗಿ ವರ್ತಿ ಸಿದ್ದಾರೆ.
ಈ ವೇಳೆ ಹಲ್ಲೆಗೊಳಗಾದ ಸೂರಜ್ ಯಾಕೆ ಅನುಚಿತವಾಗಿ ವರ್ತನೆ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಆರೋಪಿತರು ಹಲ್ಲೆ ಮಾಡಿದ್ದಾರೆ. ಈ ವೇಳೆ ಗಾಯಗೊಂಡ ಸೂರಜ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ಮಾಡಿದ ಆರೋಪಿಗಳು ನಾಪತ್ತೆಯಾಗಿದ್ದು, ಇವರ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.