More

  ಮಾನಸಿಕ ರೋಗಿಗಳಿಗೆ ಬೇಕು ಸಹಾನುಭೂತಿ

  ಚಿತ್ರದುರ್ಗ: ಸಂಶೋಧನೆಗಳ ಪ್ರಕಾರ ದೇಶದಲ್ಲಿ ಶೇ.13.4 ಜನರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಮನೋವೈದ್ಯ ಡಾ. ಆರ್.ಮಂಜುನಾಥ ಹೇಳಿದರು.
  ನಗರದ ಶ್ರೀ ಕಬೀರಾನಂದ ವಿದ್ಯಾಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆಯಲ್ಲಿ ಮಾತನಾಡಿ, ಮಾನಸಿಕ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದ್ದು, ಈ ರೋಗಿಗಳನ್ನು ಪ್ರೀತಿ ಹಾಗೂ ಸಹಾನುಭೂತಿಯಿಂದ ಕಾಣುವುದು ಮುಖ್ಯ ಎಂದರು.
  ತೀವ್ರತರವಾದ ಮಾನಸಿಕ ಕಾಯಿಲೆ ಸ್ಕಿಜೋಫ್ರೇನಿಯಾ ಶೇ.1ಜನರಲ್ಲಿ ಕಂಡುಬರುತ್ತದೆ. ಈ ರೋಗಿ ನೈಜ ಜಗತ್ತಿನ ಜತೆಗೆ ಸಂಪರ್ಕದಲ್ಲಿ ಇರುವುದಿಲ್ಲ ಎಂದು ಹೇಳಿದರು.
  ಈ ಕಾಯಿಲೆಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಚಿಕಿತ್ಸೆ, ಉತ್ತಮ ಸಮಾಲೋಚನೆ ಮೂಲಕ ಸಂಪೂರ್ಣವಾಗಿ ಗುಣಮುಖರನ್ನಾಗಿ ಮಾಡಬಹುದಾಗಿದೆ. ಮಾನಸಿಕ ಕಾಯಿಲೆಗೆ ತುತ್ತಾದವರಿಗಾಗಿ ಟೆಲಿ ಮಾನಸ ಉಚಿತ ಸಹಾಯವಾಣಿ ಸಂಖ್ಯೆ14416ನ್ನು ಆರಂಭಿಸಲಾಗಿದೆ. ಈ ಸಂಖ್ಯೆಗೆ ಕರೆ ಮಾಡಿ ಆಪ್ತಸಮಾಲೋಚನೆ ಪಡೆಯಬಹುದು ಎಂದರು.
  ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಮನಸ್ಸು ದೇಹದ ಅತಿ ಮುಖ್ಯವಾದ ಭಾಗ. ಅದು ತಾಯಿಬೇರು. ಗಾಳಿಯಂತೆ ವೇಗವಾಗಿ ಮನಸ್ಸು ಸಂಚರಿಸುತ್ತದೆ. ಆದರಿಂದ ಮನಸ್ಸು ಚಂಚಲ. ಇಂತಹ ಮನಸ್ಸಿಗೆ ಕಾಯಿಲೆ ಎದುರಾದರೆ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಬಹುದು ಎಂದು ಹೇಳಿದರು.
  ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಒ.ನಾಗರಾಜ್ ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್, ಪ್ರಾಚಾರ್ಯರಾದ ಸಿ.ಎಲ್.ನಿರಂಜನಮೂರ್ತಿ, ಟಿ.ಗಿರೀಶ್, ಎಸ್.ವಿಶಾಲಾ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಟಿ.ಶ್ರೀಧರ, ಸಾಮಾಜಿಕ ಮಾನಸಿಕ ಕಾರ್ಯಕರ್ತೆ ಎನ್.ಸುನೀತಾ, ಶುಶ್ರೂಶಕಿ ಕೆ.ಎಂ.ರಶ್ಮಿ, ಆರ್.ರೂಪಾ, ಅರುಣ್, ಕೀರ್ತಿ, ಟಿ.ಶಿವರಾಜ್, ಟಿ.ಮಂಜುನಾಥ ಮತ್ತು ಎಂ.ಒ.ಮಂಜುನಾಥ್ ಇದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ನಿರೂಪಿಸಿದರು.

  See also  ‘ನಿತ್ಯಕಲ್ಯಾಣ’ ಶ್ರಾವಣ ಚಿಂತನಾ ಕಾರ‌್ಯಕ್ರಮ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts