More

  ಮಾನವೀಯತೆ ಬೆಳೆಸಿಕೊಂಡರೆ ಜೀವನ ಸಾರ್ಥಕ

  ಕೊಪ್ಪ: ಆಕಸ್ಮಿಕವಾದ ಹುಟ್ಟು, ನಿಶ್ಚಯವಾದ ಸಾವಿನ ನಡುವಿನ ಕಾಲವೇ ಜೀವನ ಎಂಬುದಾಗಿ ಹಿರಿಯರು ಲೌಕಿಕ ಹಾಗೂ ವ್ಯಾವಹಾರಿಕವಾಗಿ ತಿಳಿಸಿದ್ದಾರೆ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

  ಶುಕ್ರವಾರ ಮಠದಲ್ಲಿ ಗುರುವಂದನಾ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅನಿಶ್ಚಿತ ಘಟನೆಗಳ ಸರಮಾಲೆಯೇ ಬದುಕು. ದುಃಖವನ್ನು ದೂರ ಮಾಡಿ ಸುಖವನ್ನು ಹೊಂದುವುದೇ ಎಲ್ಲರ ಉದ್ದೇಶ. ಮಾನವೀಯತೆ ಬೆಳೆಸಿಕೊಂಡಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

  ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ಗುರು ದೃಷ್ಟಿಯಿಂದ ಸರ್ವದೋಷ ನಿವಾರಣೆ ಎನ್ನುವಂತೆ ಗುರು ದರ್ಶನದಿಂದ ಪುಣ್ಯ ಪ್ರಾಪ್ತಿಯಾಗಲಿದೆ. ಇದು ನಾನು ಗುರುದರ್ಶನದಿಂದ ಕಂಡುಕೊಂಡ ಸತ್ಯ. ನಟ ಮತ್ತು ರಾಜಕಾರಣದ ಟ್ಯಾಗ್​ಲೈನ್ ಇಟ್ಟುಕೊಳ್ಳದೆ ಕೇವಲ ಭಕ್ತನಾಗಿ ಗುರುಗಳ ದರ್ಶನ ಪಡೆದುಕೊಳ್ಳಲು ಬಂದಿದ್ದೇನೆ. ಗುರುಗಳ ದರ್ಶನ ಭಾಗ್ಯದಿಂದ ಬಂದ ಭಕ್ತಾದಿಗಳಿಗೆಲ್ಲರಿಗೂ ಲಕ್ಷ್ಮೀನೃಸಿಂಹನ ಕೃಪಾಕಟಾಕ್ಷ ದೊರೆಯಲಿ ಎಂದರು.

  ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಮಾತನಾಡಿ, ಒಂದು ದಶಕದಿಂದ ಶ್ರೀಗಳ ನೇತೃತ್ವದಲ್ಲಿ ಹರಿಹರಪುರ ಕ್ಷೇತ್ರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಹೊಂದಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಲಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts