ಮಾಧ್ಯಮ ಜನರ ಸಮಸ್ಯೆಗೆ ಧ್ವನಿಯಾಗಲಿ

ಬೀದರ್: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಸಮಾಜದ ಡೊಂಕುಗಳನ್ನು ತಿದ್ದುವ, ಸಕರ್ಾರದ ಕಾರ್ಯವೈಖರಿ ಪರಿಶೀಲಿಸುವ, ಟೀಕಿಸುವ ಕಾರ್ಯ ಮಾಡುವ ಮೂಲಕ ಜನರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ಪಶು ವೈದ್ಯಕೀಯ ವಿವಿ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಹೇಳಿದರು.
ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟ, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಡಾ. ಕೇರ್ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ನಿಂದ ನಗರದಲ್ಲಿ ಬುಧವಾರ ನಡೆದ ಪತ್ರಿಕೆಗಳ ಅಧ್ಯಯನ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣ ಎಷ್ಟೇ ಮುಂದುವರಿದರೂ ಪತ್ರಿಕೆಗಳ ಗೌರವ ಬಹಳಷ್ಟಿದೆ. ಪತ್ರಿಕೆಗಳಲ್ಲಿ ಬರುವ ವರದಿಗಳು ಶಾಸನ ಸಭೆ, ನ್ಯಾಯಾಲಯ ಸಹ ಪುರಸ್ಕರಿಸುತ್ತವೆ ಎಂದರು.
ಪತ್ರಿಕೆಗಳನ್ನು ಓದುವುದರಿಂದ ಜಗತ್ತಿನಲ್ಲಿ ನಡೆಯುತ್ತಿರುವ ಪ್ರತಿ ಕಾರ್ಯಚಟುವಟಿಕೆಗಳ ಬಗ್ಗೆ ಗೊತ್ತಾಗುತ್ತದೆ. ನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಗಳು ಅಪಾರ ಜ್ಞಾನ ವೃದ್ಧಿಸುತ್ತವೆ ಎಂದು ಹೇಳಿದರು.
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕರ್ಣಿ ಮಾತನಾಡಿ, ಪತ್ರಿಕೆ ಯಾವ ರೀತಿ ತೆಗೆಯಬೇಕು, ಓದುಗರಿಗೆ ಹೇಗೆ ಆಕರ್ಷಿಸಬೇಕು ಎನ್ನುವುದನ್ನು ವಿಆರ್ಎಲ್ ಮೀಡಿಯಾದ ಡಾ. ವಿಜಯ ಸಂಕೇಶ್ವರ ಅವರನ್ನು ನೋಡಿ ಕಲಿಯಬೇಕು. ವರ್ಣರಂಜಿತ ತೆಗೆದ ವಿಜಯವಾಣಿ ಕೆಲವೇ ವರ್ಷಗಳಲ್ಲಿ ರಾಜ್ಯದ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ಸಂಕೇಶ್ವರ ಅವರಿಗೆ ಸಲ್ಲುತ್ತದೆ ಎಂದರು. ಪ್ರಮುಖರಾದ ಲಕ್ಷ್ಮಿ ನಾಗನಾಥ, ಅಂಬಣ್ಣ ಯಾದವ, ಪೂಜಾ, ಜೈಶ್ರೀ, ಸಚಿನ್, ಸಂಜು, ಕಲ್ಯಾಣಿ, ಪಾರ್ವತಿ, ಅಶ್ವ್ವಿನಿರಡ್ಡಿ, ಸಿದ್ದು ಯಾದವ, ವಿಜಯ, ಮಹೇಶ ಇದ್ದರು.

Leave a Reply

Your email address will not be published. Required fields are marked *