ಕೆಂಭಾವಿ: ಮಾಧ್ಯಮ ಕ್ಷೇತ್ರ ಎಲ್ಲ ರಂಗಗಳಲ್ಲಿ ದೊಡ್ಡ ಆಸ್ತಿಯಾಗಿದೆ. ಈ ಕ್ಷೇತ್ರವನ್ನು ಉಳಿಸಿ ಬೆಳೆಸವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದು ಶಿಕ್ಷಕ, ಸಾಹಿತಿ ಬಂದೇನವಾ ನಾಲತವಾಡ ಹೇಳಿದರು.
ಪಟ್ಟಣದ ಸ್ಪಂದನ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ಪತ್ರಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನದ ನಾಲ್ಕನೆ ಅಂಗ ಎಂದು ಕರೆಸಿಕೊಳ್ಳುವ ಈ ಈ ಕ್ಷೇತ್ರ ದೇಶದಲ್ಲಿ ನಡೆಯುವ ಪ್ರತಿಯೊಂದು ಆಗು-ಹೋಗುಗಳನ್ನು ಜನತೆಯ ಮುಂದೆ ತೆರೆದಿಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಒಬ್ಬ ವ್ಯಕ್ತಿ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯವಾಗಿ ಬೆಳೆಯಲು ಇದೇ ಮಾಧ್ಯಮ ಕ್ಷೇತ್ರ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಗುಂಡಭಟ್ಟ ಜೋಷಿ, ಹಿರಿಯ ಪತ್ರಕರ್ತ ಪವನ ಕುಲಕರ್ಣಿ, ಉದ್ಯಮಿ ಸಂಗಣ್ಣ ಸಾಹು ತುಂಬಗಿ, ದಸರಾ ಉತ್ಸವ ಸಮಿತಿ ಉಪಾಧ್ಯಕ್ಷ ಪರಶುರಾಮ ನಾರಾಯಣಕರ, ಹಳ್ಳೇರಾವ ಕುಲಕರ್ಣಿ, ಉಮೇಶರೆಡ್ಡಿ, ಹಳ್ಳೆಪ್ಪ ಕವಾಲ್ದಾರ, ನಂದಪ್ಪ ಕವಾಲ್ದಾರ, ಪ್ರವೀಣ ಜಕಾತಿ, ಶರಣು ಪೂಜಾರಿ, ಮಲ್ಲನಗೌಡ ಪಾಟೀಲ್ ಇದ್ದರು. ರೇವಣಸಿದ್ದಯ್ಯ ಮಠ ಸ್ವಾಗತಿಸಿದರು. ಗುರುರಾಜ ಕುಲಕರ್ಣಿ ವಂದಿಸಿದರು. ವಿಜಯಾಚಾರ್ಯ ಪುರೋಹಿತ ನಿರೂಪಣೆ ಮಾಡಿದರು.
ಈ ವೇಳೆ ಉತ್ತಮ ವರದಿಗಾರಿಕೆ ಪ್ರಶಸ್ತಿ ಪಡೆದ ಪತ್ರಕರ್ತ ಡಿ.ಸಿ.ಪಾಟೀಲ್ ಅವರನ್ನು ಸ್ಪಂದನ ಸಂಸ್ಥೆ ಮತ್ತು ಬಳಗದಿಂದ ಸನ್ಮಾನಿಸಲಾಯಿತು.