ಮಾದರಿ ವಸತಿ ಬಡಾವಣೆಗೆ ಹಾಕಲಾಗಿದೆ ಅಡಿಪಾಯ

ಹಳಿಯಾಳ: ಬಡವರಿಗಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪುರಸಭೆ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಪಟ್ಟಣದಲ್ಲಿ ಮಾದರಿ ಬಡಾವಣೆ ನಿರ್ವಿುಸಲಾಗುತ್ತಿದೆ.

ಪಟ್ಟಣದ ಹೊರವಲಯ ಚಿಬ್ಬಲಗೇರಿ ಗ್ರಾಮದ ಮಾರ್ಗದಲ್ಲಿ ಬಡಾವಣೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಜಿ ಪ್ಲಸ್ 2 (ನೆಲ ಮಹಡಿ ಹಾಗೂ ಎರಡು ಅಂತಸ್ತು) ಯೋಜನೆಯಡಿ ಆಶ್ರಯ ಮನೆ ನಿರ್ವಣಕ್ಕೆ ಸಚಿವ ಆರ್.ವಿ. ದೇಶಪಾಂಡೆ ಅವರು 5.9 ಎಕರೆ ಜಮೀನನ್ನು ಮಂಜೂರು ಮಾಡಿಸಿದ್ದಾರೆ. ಒಟ್ಟು 504 ಮನೆಗಳ ನಿರ್ವಣಕ್ಕೆ ಅನುಮೋದನೆ ದೊರೆತಿದ್ದು, ಮೊದಲ ಹಂತದಲ್ಲಿ 240 ಮನೆಗಳನ್ನು ನಿರ್ವಿುಸಲಾಗುತ್ತಿದೆ. 72 ಮನೆಗಳ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದ್ದು, 36 ಮನೆಗಳಿಗಾಗಿ ಫೌಂಡೇಷನ್ ಕಾರ್ಯ ಆರಂಭಗೊಂಡಿದೆ.

ಮನೆ ವಿನ್ಯಾಸ: ಒಂದು ಬ್ಲಾಕ್​ನಲ್ಲಿ (ಸಮುಚ್ಚಯ) 12 ಮನೆಗಳಿವೆ. ನೆಲಮಹಡಿ, ಮೊದಲ ಮತ್ತು ಎರಡನೇ ಮಹಡಿಯಲ್ಲಿ ತಲಾ 4 ಮನೆಗಳನ್ನು ನಿರ್ವಿುಸಲಾಗಿದೆ. ಈ ವಸತಿ ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ಸರ್ಕಾರ ಕೆಎಚ್​ಬಿಗೆ ವಹಿಸಿದೆ. ಕೆಎಚ್​ಬಿ ವತಿಯಿಂದ ಕಾಮಗಾರಿಯ ಟೆಂಡರನ್ನು ಆರ್​ಎಸ್​ಪಿ ಯುನೈಟೆಡ್ ಇನ್​ಫ್ರಾ ಕನ್​ಸ್ಟ್ರಕ್ಷನ್ ಪ್ರೖೆವೇಟ್ ಲಿಮಿಟೆಡ್ ಪಡೆದಿದೆ. ಇಟ್ಟಂಗಿ ಬಳಸದೇ ಮಲೇಷಿಯನ್ ತಂತ್ರಜ್ಞಾನದಲ್ಲಿ ಕೇವಲ ಸಿಮೆಂಟ್, ಸ್ಟೀಲ್ ಬಳಸಿ ಮನೆಗಳನ್ನು ನಿರ್ವಿುಸಲಾಗಿದೆ.

ಮನೆ ವೆಚ್ಚ: ಒಂದು ಮನೆ ನಿರ್ವಣಕ್ಕೆ 4.95 ಲಕ್ಷ ರೂ. ಖರ್ಚು ತಗಲುತ್ತಿದೆ. ಅದರಲ್ಲಿ ಸಾಮಾನ್ಯ ವರ್ಗದವರಿಗೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂ., ರಾಜ್ಯ ಸರ್ಕಾರದಿಂದ 1.20 ಲಕ್ಷ ರೂ. ಅನುದಾನ ದೊರೆಯುತ್ತದೆ. ಹಿಂದುಳಿದ ವರ್ಗದವರಿಗೆ ಕೇಂದ್ರ ಸರ್ಕಾರ 1.75 ಲಕ್ಷ ರೂ., ರಾಜ್ಯ ಸರ್ಕಾರ 1.80 ಲಕ್ಷ ರೂ. ಅನುದಾನ ದೊರೆಯುತ್ತದೆ. ಇನ್ನುಳಿದ ಖರ್ಚು (ಪಾಲನ್ನು) ಸಾಮಾನ್ಯ ವರ್ಗದವರು 2.25 ಲಕ್ಷ ರೂ., ಹಿಂದುಳಿದ ವರ್ಗದವರು 1.40 ಲಕ್ಷ ರೂ. ಭರಿಸಬೇಕಾಗುತ್ತದೆ.

ವಸತಿ ಸಮುಚ್ಚಯದಲ್ಲಿ ರಸ್ತೆ, ಚರಂಡಿ, ಉದ್ಯಾನ ನಿರ್ಮಾಣ ಸ್ಥಳ (ಜಮೀನು) ಮೀಸಲಾಗಿಡಲಾಗಿದೆ. ಆರ್​ಎಸ್​ಪಿ ಸಂಸ್ಥೆಯು ಮೂಲಸೌಲಭ್ಯಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ವಿುಸಲು ಬದ್ಧವಾಗಿದೆ. | ಸುಬ್ರೋತೊ ಓಜಾ , ಪ್ರೊಜೆಕ್ಟ್ ಇಂಜಿನಿಯರ್

ಜಿ- ಪ್ಲಸ್ 2 ಯೋಜನೆಯಡಿ ನಿರ್ವಣಗೊಳ್ಳುತ್ತಿರುವ ಮನೆಗಳ ಕಾಮಗಾರಿ ಗುಣಮಟ್ಟದಲ್ಲಿ ನಡೆಯುವಂತೆ ಪುರಸಭೆ ಹೆಚ್ಚಿನ ನಿಗಾ ವಹಿಸಿದೆ. | ಜಿ.ಆರ್. ಹರೀಶ ಪುರಸಭೆ ಇಂಜಿನಿಯರ್