ಮಾದಕ ಮಾತ್ರೆ ಮಾರುತ್ತಿದ್ದವ ಅರೆಸ್ಟ್

ಬೆಂಗಳೂರು: ಮ್ಯಾನ್ಮಾರ್ ಮೂಲದ ಮಾದಕ ವಸ್ತು ಮೆಥ ಅಂಫಟಮೈನ್​ನ್ನು ಮಾರಾಟ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಜಹಾಂಗೀರ್ ಗಜಿ (27) ಬಂಧಿತ. ಆರೋಪಿಯಿಂದ ಮ್ಯಾನ್ಮಾರ್ ಮೂಲದ ಯಾಬಾ ಹೆಸರಿನ ಮೆಥಅಂಫಟಮೈನ್ ಹೆಸರಿನ ಒಟ್ಟು 103 ಗ್ರಾಂನ ಒಂದು ಸಾವಿರ ಮಾತ್ರೆ ಗಳನ್ನು ವಶಪಡಿಸಿಕೊಂಡಿದ್ದಾರೆ.

ಜೂ.14ರಂದು ಪರಪ್ಪನ ಅಗ್ರಹಾರದ ಈರಪ್ಪರೆಡ್ಡಿ ಲೇಔಟ್​ನಲ್ಲಿ ಜಹಾಂಗೀರ್ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಆಧರಿಸಿ ಆರೋಪಿ ವಾಸಿಸುತ್ತಿದ್ದ ಮನೆಗೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.ಆರೋಪಿಯು ಮೆಥಾಅಂಫಟ ಮೈನ್ ಮಾದಕ ಮಾತ್ರೆಗಳನ್ನು ಕೊಲ್ಕತದಿಂದ ಖರೀದಿಸಿ ನಗರಕ್ಕೆ ತರಿಸುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *