ಮಾತೃರೂಪದಲ್ಲಿ ಕಾಣುವ ನದಿಗಳನ್ನು ಸಂರಕ್ಷಿಸಿ

ಬೆಂಗಳೂರು: ಮಾತೃರೂಪದಲ್ಲಿ ಕಾಣುವ ದೇಶದ ನದಿಗಳನ್ನು ಜನರು ಮಲಿನ ಮಾಡುತ್ತಿದ್ದು, ಅವುಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿಜಯವಾಣಿ ಅಂಕಣಕಾರ ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ವಿಜಯವಾಣಿ ಮತ್ತು ದಿಗ್ವಿಜಯ 24ಗಿ7 ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಶ್ರೀ ಶಂಕರ ವಾಹಿನಿ ಮತ್ತು ಆಯುಷ್ ಟಿವಿ ಸ್ವಾತಂತ್ರ್ಯ ಉದ್ಯಾನ ದಲ್ಲಿ ನಡೆಸುತ್ತಿರುವ ‘ಬೆಂಗಳೂರು ಮಹಾ ಉತ್ಸವ’ದ 10ನೇ ದಿನವಾದ ಶನಿವಾರ ಸಂಜೆ ನಡೆದ ‘ವೃಷಭಾ ವತಿಯ ಕೊನೆಯ ಕಣ್ಣೀರು’ ಕುರಿತು ಮಾತನಾಡಿದರು.

ಜಗತ್ತಿನ ಯಾವುದೇ ರಾಷ್ಟ್ರದಲ್ಲಿರುವ ನದಿಗಳಿಗೆ ಪೌರಾಣಿಕ ಹಿನ್ನೆಲೆ ಇಲ್ಲ. ಅಂತೆಯೇ ನದಿಗಳನ್ನು ಹಾಳು ಮಾಡುವ ಕೆಲಸ ಹಿಂದಿನಿಂದಲೂ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿತ್ತು 38 ಸಾವಿರ ಕೆರೆಗಳು: ಮೈಸೂರು ರಾಜ್ಯದಲ್ಲಿ ಆಂದಾಜು 19 ಸಾವಿರ ಕೆರೆ, ದಿವಾನ್ ಶೇಷಾದ್ರಿ ಆಯ್ಯರ್ ಮಾಹಿತಿ ಪ್ರಕಾರ ರಾಜ್ಯದಲ್ಲಿ 38 ಸಾವಿರ ಕೆರೆ ಹಾಗೂ ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಆಂದಾಜು 2 ಲಕ್ಷ ಕೆರೆಗಳಿದ್ದವು. ವಿಜಯನಗರ ಕಾಲಘಟ್ಟದಲ್ಲಿ ಎತ್ತರವಾದ ಪ್ರದೇಶಗಳಲ್ಲಿ ಕಲ್ಯಾಣಿ ಗಳನ್ನು ಕಟ್ಟಿ ನೀರಿನ ಮೂಲವನ್ನು ಉಳಿಸಿದ್ದರು. ಅಲ್ಲದೆ, ಕನ್ನಡದ ಮೊದಲ ರಾಜಮನೆತನವಾದ ಕದಂಬರು ಗುಡ್ಡದಿಂದ ಹರಿದು ಬರುವ ನೀರು ಉಳಿಸು ವುದನ್ನು ತಿಳಿಸಿದ್ದರು. ಆದರೆ, ನಮ್ಮ ಜನರಿಗೆ ನೀರಿನ ಮಹತ್ವವೇ ಗೊತ್ತಿಲ್ಲ. ಅನಾದಿ ಕಾಲದಿಂದಲೂ ಇದ್ದ ಕಲ್ಯಾಣಿ, ಬಾವಿ, ಕೆರೆ ಮತ್ತು ಬಾವಿಗಳನ್ನು ಮುಚ್ಚಿ ದೊಡ್ಡ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ ಎಂದರು.

ಇದಲ್ಲದೇ, ಯೋಗ, ಪ್ರಾಣಾಯಾಮ, ಸ್ಪೆಲ್ ಬೀ, ಭರತನಾಟ್ಯ, ಆಧ್ಯಾತ್ಮಿಕ ಭಾಷಣ, ಆರೋಗ್ಯ ಕುರಿತ ಭಾಷಣ, ಡಾ.ಜ್ಯೋತಿ ಟಿನೇಜ್ ತಂಡದಿಂದ ಟ್ಯಾಲೆಂಟ್ ಶೋ, ಬೆಂಗಾಳಿ ನೃತ್ಯ ಪ್ರದರ್ಶನ ನಡೆದವು.

Leave a Reply

Your email address will not be published. Required fields are marked *