ಮಾತೃಭಾಷೆಗೆ ಹೆಚ್ಚಿನ ಮಹತ್ವ ಕೊಡುವುದು ಮುಖ್ಯ

blank

ಚಿಕ್ಕಮಗಳೂರು: ಕನ್ನಡ ಭಾಷೆ ನಮ್ಮ ನೆಲ, ಸಂಸ್ಕೃತಿ ಹಾಗೂ ನಾಡಿನ ಪರಂಪರೆಯ ಅಸ್ಮಿತೆ. ದೇಶದಲ್ಲೇ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಪುಣ್ಯ ಭೂಮಿಯಲ್ಲಿ ಜನಿಸಿರುವುದಕ್ಕೆ ನಾವುಗಳು ಹೆಮ್ಮೆಪಡಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿನ ಹಲವಾರು ಭಾಷೆಗಳಲ್ಲಿ ಅತ್ಯಂತ ಸುಂದರ ಭಾಷೆ ಕನ್ನಡ. ಆಯಾ ಪ್ರದೇಶದ ನಿವಾಸಿಗಳು ಭಾಷೆಯ ಸಂಸ್ಕೃತಿ ಉಳಿಸಿದಂತೆ, ಪುರಾತನ ಇತಿಹಾಸವುಳ್ಳ ಕನ್ನಡತನವನ್ನು ಉಳಿಸಿ ಎಲ್ಲೆಡೆ ಹಬ್ಬಿಸುವ ಕಾ ರ್ಯ ಮಾಡಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಇತಿಹಾಸ ಕೊಂಡೊಯ್ಯಲು ಸಾಧ್ಯ ಎಂದರು.
ತಾAತ್ರಿಕ ಕಾಲೇಜಿನಲ್ಲಿ ವಿವಿಧ ರಾಜ್ಯದ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ತೊಡಗಿದ್ದು, ಸಾಧಾರಣವಾಗಿ ಹೆಚ್ಚಾಗಿ ಕನ್ನಡದ ಬಳಕೆ ಹುಸಿ ಎಂದೆನಿಸಿತ್ತು. ಆದರೀಗ ಕಾಲೇಜು ಯುವಕ-ಯುವತಿಯರ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ವಸ್ತçದಲ್ಲಿ ಅತ್ಯಂತ ವಿಜೃಂಭಣೆಯಿAದ ಪಾಲ್ಗೊಂಡು ಯಶಸ್ವಿಗೊಳಿಸಿ ಹುಸಿಯನ್ನೇ ಸುಳ್ಳಾಗಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಹುದ್ದೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಆಂಗ್ಲಭಾಷೆ ಅನಿವಾರ್ಯ. ಈ ಜೊತೆಗೆ ಮಾತೃಭಾಷೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ದೇಶ, ವಿದೇಶಗಳಲ್ಲಿ ಉದ್ಯೋಗ ಅರಸಿದರೂ ಕನ್ನಡತನ, ಭಾಷೆಯನ್ನು ಮರೆಯಕೂಡದು ಎಂದು ಕಿವಿಮಾತು ಹೇಳಿದರು.
ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮಾತನಾಡಿ, ಕದಂಬರು, ಹೊಯ್ಸಳರು, ಚಾಲುಕ್ಯರು ನಾಡಿನ ಸಂಸ್ಕೃತಿ ಎತ್ತಿಹಿಡಿದ್ದರು. ವಿಜಯನಗರ ಹಾಗೂ ಮೈಸೂರು ಪ್ರಾಂತ್ಯವನ್ನು ಆಳ್ವಿಕೆ ನಡೆಸಿದ ಅರಸರು, ಕವಿಸಂತರ ಗೀತೆಗಳು, ವಚನಗಳ ಮುಖಾಂತರ ಕನ್ನಡ ಭಾಷೆ ನಾಡಿನಾದ್ಯಂತ ತುಂಬಿ ಹರಿಯುತ್ತಿದೆ ಎಂದು ಹೇಳಿದರು.
ಶಿಲ್ಪಕಲೆಗಳ ತವರೂರು ಕರ್ನಾಟಕದಲ್ಲಿ ಹುಟ್ಟಿನಿಂದಲೇ ಶಾಂತಿ, ಸಹಬಾಳ್ವೆ ಹಾಗೂ ಸಹೋದರತ್ವ ಭಾವನೆ ಹೊಂದಿರುವ ಪ್ರಜೆಗಳು. ನೆಲ, ಜಲ, ನುಡಿಗೆ ಧಕ್ಕೆಯುಂಟಾದರೆ ಶಾಂತಿಪ್ರಿಯರು ತೊಡೆ ತಟ್ಟಿ ನಾಡದ್ರೋಹಿಗಳನ್ನು ಹಿಮ್ಮೆಟ್ಟಿಸುವ ಶಕ್ತಿ ಹೊಂದಿರುವ ಕೆಚ್ಚದೆಯೇ ಕನ್ನಡಿಗರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಟಿ ಪ್ರಾಚಾರ್ಯ ಸಿ.ಟಿ.ಜಯದೇವ, ಕನ್ನಡವೆಂದರೆ ತಮಾಷೆ, ಸುಮ್ಮನೆಯಲ್ಲ. ಕನ್ನಡದ ಇತಿಹಾಸ ಪುರಾತನವಾದುದು. ಜಗತ್ತಿನಲ್ಲೇ ಕನ್ನಡದ ಲಿಪಿಗಳು ರಾಣಿಯಂತೆ. ವಿದ್ಯಾರ್ಥಿಗಳು ಭಾಷೆಯ ಇತಿಹಾಸ ತಿಳಿಯಲು ಸಮಗ್ರ ಅಧ್ಯಯನ ನಡೆಸುವುದು ಬಹಳ ಮುಖ್ಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಮಡಿವಂತಿಕೆ ಪ್ರಾರಂಭವಾಗಿದೆ. ಭಾಷೆ ನಾಶವಾದರೆ ಕನ್ನಡಿಗರು ನಾಶವಾದಂತೆ. ಆಂಗ್ಲಭಾಷೆ ಜೊತೆಗೆ ಕನ್ನಡವನ್ನು ಸ್ಪಷ್ಟವಾಗಿ ಉಚ್ಚರಿಸುವುದನ್ನು ಕಲಿಯಬೇಕು. ನಾಡಿಗಾಗಿ ಹೋರಾಟ ಕೈಗೊಳ್ಳದವರು ದಿನಪ್ರತಿ ಕನ್ನಡದಲ್ಲೇ ವ್ಯವಹರಿಸಿದರೆ ಸಾಕು. ಅದೇ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಕಾಲೇಜಿನ ನೂರಾರು ಯುವಕ-ಯುವತಿಯರು ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ವಸ್ತç ಧರಿಸಿ ಕುಣಿದು ಕುಪ್ಪಳಿಸಿದರು. ಕನ್ನಡಾಂಭೆ ಶ್ರೀ ಭುವನೇಶ್ವರಿಯನ್ನು ಕಾಲೇಜು ದ್ವಾರದಿಂದ ಕಸಾಪ ಮುಖಂಡರು, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಕನ್ನಡಗೀತೆಗಳ ಮುಖಾಂತರ ಗೌರವದಿಂದ ಕರೆ ತಂದರು.
ಕಾರ್ಯಕ್ರಮದಲ್ಲಿ ಎಐಟಿ ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಮೆಕ್ಯಾನಿಕ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಜಿ.ಎಂ.ಸತ್ಯನಾರಾಯಣ್, ಎಲೆಕ್ಟಿçಕಲ್ ಇಂಜಿನಿಯರ್ ವಿಭಾಗದ ವೀರೇಂದ್ರ ಉಪಸ್ಥಿತರಿದ್ದರು.

Share This Article

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango

mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…

ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ..  Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.  ಚಿನ್ನದ ಅಂಗಡಿಗಳು ವ್ಯಾಪಾರದಿಂದ…

ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್​​ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice

  Sugarcane Juice: ಕಬ್ಬಿನ ಜ್ಯೂಸ್​​ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…