ಸಿನಿಮಾ

ಮಾಣಿ ಜಂಕ್ಷನ್‌ನಲ್ಲಿ ರಾಜಕೀಯ ದ್ವೇಷದಲ್ಲಿ ಹಲ್ಲೆ

ವಿಟ್ಲ: ರಾಜಕೀಯ ಹಿನ್ನೆಲೆ ಇರುವ ಯುವಕರ ತಂಡ ಪೂರ್ವದ್ವೇಷವನ್ನಿಟ್ಟುಕೊಂಡು ಪರಸ್ಪರ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ಬಳಿ ಬುಧವಾರ ನಡೆದಿದೆ.

ಅನಂತಾಡಿ ನಿವಾಸಿ ಈಶ್ವರ ಯಾನೆ ಪ್ರವೀಣ್(28) ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಣಿ ಕೊಡಾಜೆ ನಿವಾಸಿ ಮಹೇಂದ್ರ(26), ಪೆರಾಜೆ ನಿವಾಸಿ ಪ್ರಶಾಂತ್(32) ಎಂಬುವರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ತಂಡದವರಿಂದ ಪ್ರತ್ಯೇಕ ಹೇಳಿಕೆಯನ್ನು ವಿಟ್ಲ ಪೊಲೀಸರು ಪಡೆಯುತ್ತಿದ್ದಾರೆ.

ಕಟ್ಟಿಗೆಯಿಂದ ಹಲ್ಲೆ: ಮಾಣಿಯಲ್ಲಿ ತಲವಾರು ದಾಳಿಯಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹಬ್ಬುತ್ತಿದ್ದಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟೀಕರಣ ನೀಡಿ, ಕಟ್ಟಿಗೆಯಿಂದ ಹಲ್ಲೆ ನಡೆದಿರುವ ಬಗ್ಗೆ ವಿಡಿಯೋವನ್ನು ರವಾನಿಸಿದ್ದಾರೆ

Latest Posts

ಲೈಫ್‌ಸ್ಟೈಲ್