ಮಾಡಲಗೇರಿ ಗ್ರಾಪಂಗೆ ರೇಣವ್ವ ಅಧ್ಯಕ್ಷೆ

ರೋಣ: ತಾಲೂಕಿನ ಮಾಡಲಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ರೇಣವ್ವ ರಾಯನಗೌಡ್ರ ಅಧ್ಯಕ್ಷೆಯಾಗಿ ಮತ್ತು ಸಂಕವ್ವ ಪವಾಡಿಗೌಡ್ರ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ರೇಣವ್ವ ರಾಯನಗೌಡ್ರ ಹಾಗೂ ಉಪಾಧ್ಯಕ್ಷ ಸ್ಥಾನ ‘ಅ’ವರ್ಗ ಮಹಿಳೆಗೆ ಮೀಸಲಾಗಿದ್ದರಿಂದ ‘ಅ’ವರ್ಗ ಮಹಿಳೆ ಸಂಕವ್ವ ಪವಾಡಿಗೌಡ್ರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ವಿ. ಚಳಗೇರಿ ಘೊಷಣೆ ಮಾಡಿದರು.

ಈ ವೇಳೆ ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ರೇಣವ್ವ ರಾಯನಗೌಡ್ರ ಮಾತನಾಡಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯ ನಿರ್ವಹಿಸುತ್ತೇನೆ. ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ತಾಪಂ ವ್ಯವಸ್ಥಾಪಕ ಪರಶುರಾಮ ಹರಿಜನ, ಪಿಡಿಒ ಪಿ.ಕೆ. ಬಂಡಿ, ಶಾವವ್ವ ಅಮಾತಿಗೌಡ್ರ, ನಾಗವ್ವ ಪೂಜಾರ, ಸತ್ಯವ್ವ ಮಾದರ, ಶಿವನಗೌಡ ಅಮಾತ್ಯಗೌಡ್ರ, ಮಾಗುಂಡಪ್ಪ ಕೆಂಗಾರ, ಬಸನಗೌಡ ಅಮಾತಿಗೌಡ್ರ, ಬಸನಗೌಡ ಮುದಕನಗೌಡ್ರ, ವಸಂತ ಬಾವಿ, ಶಿವನಗೌಡ ಗದ್ದಿಗೌಡ್ರ, ವೆಂಕನಗೌಡ ಗೋವಿಂದಗೌಡ್ರ, ಶಂಕ್ರಪ್ಪ ಸೂಳಿಕೇರಿ, ಎಂ.ಎಚ್. ಬಾವಿ, ಇತರರು ಇದ್ದರು.

Leave a Reply

Your email address will not be published. Required fields are marked *