ಮಾಗಡಿ ರಸ್ತೆಯಲ್ಲಿ ಭೂಮಿಗೆ ಚಿನ್ನದ ಬೆಲ

 

ಮಾಗಡಿ ರಸ್ತೆಗೆ ಪೀಣ್ಯ, ಹೊಸಪೇಟೆ, ತುಮಕೂರು ರಸ್ತೆಯ ಕೈಗಾರಿಕೆ ಪ್ರದೇಶಗಳು ಹತ್ತಿರವಾಗುವುದರಿಂದ ಮಧ್ಯಮ, ಕಡಿಮೆ ಬೆಲೆಯ ನಿವೇಶನ ಮತ್ತು ಫ್ಲ್ಯಾಟ್​ಗಳು ಕೂಡ ಲಭ್ಯವಿದ್ದು, ಮಧ್ಯಮ ವರ್ಗದ ಜನರಿಗೆ ಹೆಚ್ಚು ಅನುಕೂಲವಾಗಿದೆ.

| ಅಭಯ್ ಮನಗೂಳಿ ಬೆಂಗಳೂರು

ವರ್ಷದಿಂದ ವರ್ಷಕ್ಕೆ ಅಳತೆ ಮೀರಿ ಬೆಳವಣಿಗೆ ಸಾಧಿಸುತ್ತಿರುವ ಬೆಂಗಳೂರಿನಲ್ಲಿ ನಿವೇಶನ, ಫ್ಲ್ಯಾಟ್​ಗಳ ಬೆಲೆಯೂ ಅಷ್ಟೇ ಏರಿಕೆ ಕಾಣುತ್ತಿವೆ. ನಾಲ್ಕು ದಿಕ್ಕಿನಲ್ಲಿಯೂ ನಗರ ವಿಸ್ತರಣೆಗೊಳ್ಳುತ್ತಿರುವುದರಿಂದ ಹೊರಭಾಗದಲ್ಲಿಯೂ ಭೂಮಿಗೆ ಭರ್ಜರಿ ಬೆಲೆ ಬಂದಿದೆ. ಮಾಗಡಿ ರಸ್ತೆ ಕೂಡ ಹೆಚ್ಚು ಬೇಡಿಕೆ ಕಂಡುಬರುತ್ತಿರುವ ಪ್ರದೇಶವಾಗಿ ಗುರುತಿಸಿಕೊಂಡಿದೆ.

ಮೊದಮೊದಲು ನಗರದ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿನ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಕ್ಕಿತ್ತು. ಇದರಿಂದ ರಿಯಲ್ ಎಸ್ಟೇಟ್ ಕ್ಷೇತ್ರವೂ ಈ ಭಾಗದಲ್ಲಿ ಹೆಚ್ಚಿನ ಹೂಡಿಕೆಗೆ ಆಸಕ್ತಿ ತೋರಿಸಿದ್ದವು. ನಗರದ ಪಶ್ಚಿಮ ಭಾಗವು ಹಸಿರಿನಿಂದ ಕೂಡಿದ್ದು, ಅಲ್ಲಿಯೂ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ.

ಬೆಂಗಳೂರು ನಗರದಲ್ಲಿ ಹಾಯ್ದು ಒಟ್ಟು 43 ಕಿ.ಮೀ. ಉದ್ದದ ಈ ರಸ್ತೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣ ಹತ್ತಿರವಾಗುವುದರೊಂದಿಗ ವಿಜಯನಗರ, ಗೋವಿಂದರಾಜನಗರ, ರಾಜಾಜಿನಗರ ಪ್ರದೇಶಗಳು ಈ ರಸ್ತೆಗೆ ಹೊಂದಿಕೊಂಡಿರುವುದರಿಂದಲೂ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಬೆಳವಣಿಗೆ ನಾಗಾಲೋಟದತ್ತ ಸಾಗುತ್ತಿದೆ.

ಹಲವು ಹೊರ ವರ್ತಲ ರಸ್ತೆಗಳಿಗೂ ಮಾಗಡಿ ರಸ್ತೆ ಸಂಪರ್ಕ ಕಲ್ಪಿಸುವುದರಿಂದ ಜಾಗವನ್ನು ಖರೀದಿಸಲು ಇಷ್ಟಪಡುತ್ತಾರೆ. ಹೀಗಾಗಿಯೇ ತುಮಕೂರು ರಸ್ತೆಯ ಅಕ್ಕಪಕ್ಕದಲ್ಲಿ ದಿನದಿಂದ ದಿನಕ್ಕೆ ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಸಕಲ ಸೌಕರ್ಯಗಳು ಕೂಡ ಲಭ್ಯವಿದ್ದು, ಸುಮನಹಳ್ಳಿ, ಕೆಂಪೇಗೌಡನಗರ ಜಂಕ್ಷನ್, ನೈಸ್ ರಸ್ತೆಗಳಿಗೂ ಕೂಡಿಕೊಳ್ಳುತ್ತದೆ. ಇದಲ್ಲದೇ ಕೆಂಗೇರಿ, ಹೊಸಕೋಟೆ, ದೇವನಹಳ್ಳಿ, ಬೊಮ್ಮನಹಳ್ಳಿಗಳಿಗೂ ಈ ಮಾರ್ಗ ಸುಲಭವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಈ ರಸ್ತೆಯಿಂದ 38 ಕಿ.ಮೀ. ಅಂತರದಲ್ಲಿದೆ. ಮೆಟ್ರೋ, ಹೊರವರ್ತಲ ರಸ್ತೆ, ನೈಸ್ ರಸ್ತೆಗಳೂ ಮಾಗಡಿ ರಸ್ತೆಯ ವಸತಿ ಪ್ರದೇಶಗಳನ್ನು ಸಂರ್ಪಸುವುದರಿಂದ ಬೇಡಿಕೆ ದ್ವಿಗುಣಗೊಂಡಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸಹ ಇಲ್ಲಿದ್ದು, ವಾಣಿಜ್ಯ ಚಟುವಟಿಕೆಗಳು ಸಹ ಚುರುಕಾಗಿವೆ.

ಹೆಚ್ಚಿದ ಬೇಡಿಕೆ

ಮಾಗಡಿ ರಸ್ತೆಯಲ್ಲಿ ಭೂಮಿಗೆ ಚಿನ್ನದ ಬೆಲೆಯಿರುವುದರಿಂದ ಬಹುಪಾಲು ಪ್ರತಿಷ್ಠಿತ ಕಂಪನಿಗಳು ಈ ರಸ್ತೆಯಲ್ಲಿ ಬಡಾವಣೆಗಳನ್ನು ನಿರ್ವಿುಸುತ್ತಿವೆ. ಎಲ್ಲ ಮಾದರಿಯ ನಿವೇಶನಗಳು, ಅಪಾರ್ಟ್​ವೆುಂಟ್​ಗಳೂ ಲಭ್ಯವಿದ್ದು, 18 ಲಕ್ಷ ರೂ.ಗಳಿಂದ ಹಿಡಿದು 1.5 ಕೋಟಿ ರೂ.ಗಳ ವರೆಗಿನ ಫ್ಲ್ಯಾಟ್​ಗಳು ಸಹ ಲಭ್ಯವಿವೆ. ಈ ಭಾಗದಲ್ಲಿ ಭೂಮಿ ಹೊಂದಿರುವವರಿಗೆ ಶುಕ್ರದೆಸೆ.

ಲಕ್ಸ್ಸುರಿ ಪ್ರಾಪರ್ಟಿಗಳು ದುಬಾರಿ

2016ರ ಕೊನೆ ತ್ರೖೆಮಾಸಿಕ ವರ್ಷದಲ್ಲಿನ ಲಕ್ಸುರಿ ಪ್ರಾಪರ್ಟಿಗಳ ಬೆಲೆಗಳ ಕುರಿತು ಅಧ್ಯಯನ ನಡೆಸಿರುವ ಖಾಸಗಿ ಸಂಸ್ಥೆಯೊಂದು ಪ್ರತಿ ಚದರ ಮೀಟರ್​ಗೆ 6650 ರೂ.ಗಳಂತೆ ನಿವೇಶನಗಳು ಮಾರಾಟವಾಗಿರುವುದನ್ನು ದಾಖಲಿಸಿದೆ. ಮಧ್ಯಮ ನಿವೇಶನಗಳು ಪ್ರತಿ ಚದರ ಮೀಟರ್​ಗೆ 5100 ರೂ.ಗಳಂತೆ ಮಾರಾಟವಾಗಿದ್ದರೆ, ಕಡಿಮೆ ಸೌಕರ್ಯಗಳಿರುವ ನಿವೇಶನಗಳು ಪ್ರತಿ ಚದರ ಮೀಟರ್​ಗೆ 3500 ರೂ.ಗಳಂತೆ ಮಾರಾಟವಾಗಿವೆ. ಇನ್ನು ಕಟ್ಟಡಗಳ ಲೀಸ್ ಮತ್ತು ಬಾಡಿಗೆಯಲ್ಲಿಯೂ ಏರಿಕೆ ಕಂಡುಬಂದಿದೆ.

Leave a Reply

Your email address will not be published. Required fields are marked *