ಮಾಂಜರಿ: ಮಾಜಿ ಶಾಸಕ ಹಾಗೂ ಶಿರಗುಪ್ಪಿ ಶುಗರ್ಸ್ ಸಕ್ಕರೆ ಕಾರ್ಖಾನೆ ಸಂಸ್ಥಾಪಕ ಅಧ್ಯಕ್ಷ ಮತ್ತು ಕೆ.ಪಿ.ಮಗೆಣ್ಣವರ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಸಂಸ್ಥಾಪಕ ಕಲ್ಲಪ್ಪಣ್ಣ ಮಗೆಣ್ಣವರ ಅವರ 75ನೇ ಹುಟ್ಟುಹಬ್ಬ ಅಂಗವಾಗಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಸೋಮವಾರ ಜರುಗಿತು.
ಸಾವಿರಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಿ, ಉಚಿತ ಔಷಧ ವಿತರಿಸಲಾಯಿತು. ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಂಸ್ಥೆ ಶಿರಗುಪ್ಪಿ ಶುಗರ್ಸ್ ಹಾಗೂ ಕಲ್ಲಪ್ಪಣ್ಣ ಮಗೆಣ್ಣವರ ಅಭಿಮಾನಿ ಬಳಗ ವತಿಯಿಂದ ಸುಮಾರು 160 ಯುವಕರು ರಕ್ತದಾನ ಮಾಡಿದರು.
ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಡಾ.ಎನ್.ಎ.ಮಗದುಮ್ಮ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಂಸ್ಥಾಪಕ ನೇಮಿನಾಥ ಮಗದುಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಡಾ.ರಮೇಶ, ಡಾ.ಜೆ.ಬಿ.ಮಾನೆ, ಡಾ.ವಿಜಯ ಉಪಾಧ್ಯೆ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ, ಡಾ.ಅಮೋಲ ಪಾಟೀಲ ಹಾಗೂ ಕಲ್ಲಪ್ಪಣ್ಣ ಮಗೆಣ್ಣವರ ಅಮೃತ ಮಹೋತ್ಸವ ಸಮಿತಿಯ ಸದಸ್ಯರು, ಸತೀಶ ಮಗೆಣ್ಣವರ, ರಾಮಚಂದ್ರ ಭೋಸ್ಲೆ, ಮೋಹನ ಲೋಕರ, ಶ್ರೀಧರ ಬೋಜಕರ, ಸದಾಶಿವ ಮಿರ್ಜಿ, ಅಶೋಕ ಚಿಮಾಯಿ, ಜಿನ್ನಪ್ಪ ಶೇಡಬಾಳೆ, ಚಂದ್ರಕಾಂತ ಪಾಟೀಲ, ರಾಘವೇಂದ್ರ ಕುಲಕರ್ಣಿ, ರಮೇಶ ಕಾಮತ್, ಪ್ರದೀಪ ಮಗೆಣ್ಣವರ, ಭಾವುಸಾಹೇಬ ಕೋಟಿವಾಲೆ ಇತರರು ಇದ್ದರು.
ನಿಮಶಿರಗಾಂವದಲ್ಲಿ ತಪಾಸಣೆ ಶಿಬಿರ: ಕಲ್ಲಪ್ಪಣ್ಣ ಮಗೆಣ್ಣವರ ಅವರ ಅಮೃತ ಮಹೋತ್ಸವ ಹುಟ್ಟುಹಬ್ಬ ಅಂಗವಾಗಿ ಕೊಲ್ಲಾಪುರ ಜಿಲ್ಲೆಯ ನಿಮಶಿರಗಾಂವ ಗ್ರಾಮದ ತಪಸ್ವಿ ಆಯುರ್ವೇದಿಕ್ ಆಸ್ಪತ್ರೆ ಮತ್ತು ಸಾಂಗಲಿಯ ಶ್ರೀಮಂತ ವಿಜಯಸಿಹರಾಜೆ ಪಟವರ್ಧನ್ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮಂಗಳವಾರ ಜರುಗಿತು.
ಡಾ. ಅಮೋಲ ಪಾಟೀಲ, ಡಾ.ಅಕ್ಷತಾ ಪಾಟೀಲ, ಡಾ.ರುಚಿಕಾ ಪಾಟೀಲ ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಸಲಹೆ ಮತ್ತು ಉಪಚಾರ ನೀಡಿದರು. ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಡಾ. ಮಹೇಶ ಶಹಾ, ಡಾ.ಘೋರ್ಪಡೆ ರೋಗಿಗಳ ಕಣ್ಣು ತಪಾಸಣೆ ಮಾಡಿ ಅಗತ್ಯ ಇರುವವರಿಗೆ ಶಸ್ತ್ರಚಿಕಿತ್ಸೆಗೆ ಸೂಚಿಸಿದರು.