‘ಮಹಿಳೆಯರ ಸಮಾನತೆಗಾಗಿ ನಡಿಗೆ’

ಹುಬ್ಬಳ್ಳಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ‘ವಿಜಯವಾಣಿ’ ದಿನಪತ್ರಿಕೆ ಮತ್ತು ‘ದಿಗ್ವಿಜಯ’ ವಾಹಿನಿಯಿಂದ ಮಾ. 8ರಂದು ನಗರದಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.

‘ಮಹಿಳೆಯರ ಸಮಾನತೆಗಾಗಿ ನಡಿಗೆ’ ಎಂಬ ಘೊಷವಾಕ್ಯದೊಂದಿಗೆ ‘ವಾಕಥಾನ್’ ಆಯೋಜಿಸಿದ್ದು, ಅಂದು ಬೆಳಗ್ಗೆ 7 ಗಂಟೆಗೆ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕಿ ಅಹಿಲ್ಯಾ ಕಾಕೋಡಿಕರ್ ಚಾಲನೆ ನೀಡುವರು.

ಹಳೇ ಬಸ್ ನಿಲ್ದಾಣ, ಐಟಿ ಪಾರ್ಕ್, ಹೊಸೂರು ವೃತ್ತದ ಮೂಲಕ ತೆರಳುವ ವಾಕಥಾನ್ ಮತ್ತು ಸೈಕ್ಲೋಥಾನ್, ಮಹಿಳಾ ವಿದ್ಯಾಪೀಠದಲ್ಲಿ ಮುಕ್ತಾಯಗೊಳ್ಳಲಿದೆ.

ಇಎಂಐ ಹಾಲಿಡೇಸ್, ಪತಂಜಲಿ, ಸುಮನ್ ಎಂಟರ್​ಪ್ರೖೆಸಿಸ್, ಸ್ಪೂರ್ತಿ ಹರ್ಬಲ್ಸ್​ನ ಆಲೊಗ್ರಾಮಫ್ಲೋರ್ ಸೋಪ್, ಟಾಟಾ ಪ್ರೊಡಕ್ಟ್​ನ ತನಿಷ್ಕ್ ಸಹ ಪ್ರಾಯೋಜಕತ್ವದಲ್ಲಿ ಏರ್ಪಡಿಸಿರುವ ಈ ವಾಕಥಾನ್​ನಲ್ಲಿ ಮಹಿಳಾ ಸಮಾನತೆ, ಸ್ವಾತಂತ್ರ್ಯ, ಮಹಿಳಾ ಹಕ್ಕುಗಳು, ಗೌರವ, ಘನತೆ, ಸ್ವಾವಲಂಬನೆ, ಪ್ರಾಬಲ್ಯದ ಕುರಿತು ಜಾಗೃತಿ ಮೂಡಿಸಲಾಗುವುದು.

ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳು, ಗೃಹಿಣಿಯರು, ಸ್ತ್ರೀ ಶಕ್ತಿ ಸಂಘಟನೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

ಪ್ರವೇಶ ಉಚಿತವಾಗಿದ್ದು, ವಾಕಥಾನ್​ನಲ್ಲಿ ಪಾಲ್ಗೊಳ್ಳಬಯಸುವವರು ತಮ್ಮ ಹೆಸರು, ವಿಳಾಸ ಸಮೇತ ಮೊಬೈಲ್ ಸಂಖ್ಯೆ 8884432134 ಗೆ ಎಸ್​ಎಂಎಸ್ ಮಾಡಿ ಹೆಸರು ನೋಂದಾಯಿಸಬೇಕು. ಮಹಿಳೆಯರು ಹಾಗೂ ಮಹಿಳಾಪರ ಮನಸ್ಸುಗಳುಳ್ಳವರು ಪಾಲ್ಗೊಳ್ಳುವ ಮೂಲಕ ಸಮಾನತೆಯ ನಾಡು ಕಟ್ಟಲು ಮುಂದಾಗಬೇಕು ಎಂದು ಕೋರಲಾಗಿದೆ.