ಬಸವಕಲ್ಯಾಣ: ಮಹಿಳೆಯರ ಪ್ರಗತಿಯಲ್ಲಿ ಸಮಾಜದ ಅಭಿವೃದ್ಧಿ ಅಡಗಿದ್ದು, ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬರಲು ಮಹಿಳೆಯರು ಪ್ರಯತ್ನಿಸಬೇಕು ಎಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ತಾಲೂಕು ಅಧ್ಯಕ್ಷೆ ಡಾ.ಶಾಂತಾ ದುರ್ಗೆ ಹೇಳಿದರು.
ನಗರದ ವಿದ್ಯಾಶ್ರೀ ಕಾಲನಿಯ ಹನುಮಾನ ಮಂದಿರದಲ್ಲಿ ವಿದ್ಯಾಶ್ರೀ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಬಸಣ್ಣನವರು ಸ್ತ್ರೀ ಸಮಾನತೆ, ಸ್ವಾತಂತ್ರ, ಸಾಮಾಜಿಕ ನ್ಯಾಯ ನೀಡಿದ ನೆಲ ಕಲ್ಯಾಣ. ಶರಣರ ವಚನಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಡಾ.ಸ್ಮಿತಾ ಕಳ್ಳಿಗುಡಿ ಮಾತನಾಡಿ, ಮಹಿಳೆಯರು ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಬೇಕು. ಕೆಲಸ ಕಾರ್ಯಗಳ ಜತೆಗೆ ಆರೋಗ್ಯದ ಬಗ್ಗೆಯೂ ಕಾಲಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕಿ ಡಾ.ಶಿವಲೀಲಾ ಮಠಪತಿ ಮಾತನಾಡಿ, ಟ್ರಸ್ಟ್ನ ಸಮಾಜಮುಖಿ ಕಾರ್ಯ-ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಟ್ರಸ್ಟ್ನ ಅಧ್ಯಕ್ಷೆ ಕೀರ್ತಿಲತಾ ಅಗ್ರೆ, ಡಾ. ಜ್ಯೋತಿ ಖಂಡ್ರೆ, ಜ್ಯೋತಿ ಬೆಲ್ಲೆ, ಅರುಣಾ ಮಠಪತಿ, ಜಯಶ್ರೀ, ಅನಿತಾ ಕಾಳಗಿ, ಕಾಶಮ್ಮ ಬಿರಾದಾರ, ಶೋಭಾ ಮಾಶೆಟ್ಟಿ, ಚಿನ್ನಮ್ಮ ಯಲ್ಲಾಮಲ್ಲೆ, ರಾಜೇಶ್ವರಿ ನಿಮ್ಮಾಣೆ, ಶೀತಲ ಸ್ವಾಮಿ, ರೇಣುಕಾ ಸ್ವಾಮಿ, ಆಶಾಬಾಯಿ ಆಳ್ಳೆ, ರಾಜೇಶ್ವರಿ ಕಣಸುರೆ, ನಿರ್ಮಲಾ ಖಂಡ್ರೆ, ಸುನಂದಾ ನಂದಿ, ಮಂದಾಕಿನಿ, ಚೇತನಾ ಮಠಪತಿ, ಅನ್ನಪೂರ್ಣ ಚಂದನಕೆರೆ, ಸವಿತಾ ಕಪನೂರೆ, ಉಮಾ ಮೂಲಗೆ, ಗಂಗಮ್ಮ ಮಠಪತಿ, ಶಾಂತಮ್ಮ ಅಮರಶೆಟ್ಟಿ, ಕೀರ್ತಿ ಡಿಗ್ಗಿಕರ, ಸವಿತಾ ಕಲ್ಯಾಣಿ ಇದ್ದರು.
ಅನ್ನಪೂರ್ಣ ಮೂಲಗಿ ಪ್ರಾರ್ಥನಾ ಗೀತೆ ಹಾಡಿದರು. ಇಂದುಮತಿ ಹುಣಸಿಗೇರಿ ಸ್ವಾಗತಿಸಿದರು. ಜಯಶ್ರೀ ಬೋಳೆಗಾಂವೆ ವಂದಿಸಿದರು. ಡಾ.ಭುವನೇಶ್ವರಿ ಖಂಡ್ರೆ ನಿರೂಪಣೆ ಮಾಡಿದರು. ಮಹಿಳಾ ದಿನಾಚರಣೆ ನಿಮಿತ್ತ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಜ್ವಲಾ ನಿಶಿಕಾಂತ್ ಜೋಶಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
