ಮಹಿಳೆಯರೂ ಪುರುಷರಷ್ಟೇ ಸಶಕ್ತ

ವಿಜಯವಾಣಿ ಸುದ್ದಿಜಾಲ ಬೀದರ್
ನಗರ ಸೇರಿ ಜಿಲ್ಲಾದ್ಯಂತ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ನಿಮಿತ್ತ ಚರ್ಚಾಗೋಷ್ಠಿ, ಉಪನ್ಯಾಸ ಮೂಲಕ ಮಹಿಳೆಯರ ಬಗ್ಗೆ ಚಿಂತನ-ಮಂಥನ ನಡೆಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರಿಗೆ ಗೌರವ ಸನ್ಮಾನ ಸಹ ನಡೆದವು.

ಕನ್ನಡಿಗರ ಸಂಸ್ಥೆ: ನಗರದ ಅಂಬೇಡ್ಕರ್ ವೃತ್ತ ಹತ್ತಿರದ ಓಂ ಸಿದ್ದಿ ವಿನಾಯಕ ಪದವಿ ಕಾಲೇಜಿನಲ್ಲಿ ವಿಶ್ವ ಕನ್ನಡಿಗರ ಸಂಸ್ಥೆಯಿಂದ ವಿಶ್ವ ಮಹಿಳಾ ದಿನಾಚರಣೆ ನಡೆಯಿತು. ಪಾಸ್ಪೋರ್ಟ್​ ಸೇವಾ ಕೇಂದ್ರ ಅಧಿಕಾರಿ ಮಂಗಲಾ ಭಾಗವತ್ ಉದ್ಘಾಟಿಸಿ ಮಾತನಾಡಿ, ಅಮೆರಿಕದ ನ್ಯೂಯಾಕರ್್ನಲ್ಲಿ ಸಮಾನತೆ ಹಾಗೂ ದುಡಿಮೆಗೆ ತಕ್ಕ ನ್ಯಾಯಕ್ಕಾಗಿ ಮಹಿಳೆಯರು ಹೋರಾಟ ಮಾಡಿದ್ದರು. ಈ ವಿಜಯ ದಿನವನ್ನು ಮಹಿಳಾ ದಿನಾಚರಣೆ ಎಂದು ಆಚರಣೆ ಮಾಡಲಾಗುತ್ತಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಎಂ. ಎಸ್. ಮನೋಹರ, ಉಪನ್ಯಾಸಕಿ ಅಂಬಿಕಾ ಮಾತನಾಡಿದರು. ಪಾರ್ವತಿ ಸೋನಾರೆ ಉಪನ್ಯಾಸ ನೀಡಿದರು. ಸಂಸ್ಥೆ ಕಾರ್ಯದರ್ಶಿ ಪ್ರಿಯಾಂಕ ಕರಕನಳ್ಳಿ, ರಮೇಶ ಬಾಬು ಅವರಿಗೆ ಸನ್ಮಾನಿಸಲಾಯಿತು. ಪ್ರಾಂಶುಪಾಲ ಸಿದ್ರಾಮ ಬಿಚಕುಂದೆ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ಸೋನಾರೆ, ಎಂ.ಪಿ ಮುದಾಳೆ, ಸುನೀಲ ಭಾವಿಕಟ್ಟಿ, ರಮೇಶ ಪಾಸ್ವಾನ್, ಬಸವರಾಜ ದಯಾಸಾಗರ, ಅಮರ ಪೂಜಾರಿ, ಗೌತಮ ಮುತ್ತಂಗಿಕರ್, ಮಮತಾ ಕೆ., ಪವಿತ್ರಾ, ಜಗದೇವಿ, ಅಭಿಲಾಶ, ಸಪ್ನಾ ಕೆ. ಇದ್ದರು. ಸಂಸ್ಥೆ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಗೋರನಾಳಕರ್ ನಿರೂಪಣೆ ಮಾಡಿದರು.

ಬಿವಿಬಿ: ನಗರದ ಬಿವಿಬಿ ಕಾಲೇಜಿನಲ್ಲಿ ಮಹಿಳಾ ಸುರಕ್ಷಾ ಘಟಕದಿಂದ ನಡೆದ ಮಹಿಳಾ ದಿನಾಚರಣೆಯನ್ನು ವಿಶೇಷ ತಹಸೀಲ್ದಾರ್ ಅಂಜುಮ್ ತಬುಸುಮ್ ಉದ್ಘಾಟಿಸಿದರು. ಮಹಿಳಾ ಪೊಲೀಸ್ ಠಾಣೆ ಸಿಪಿಐ ಮಲ್ಲಮ್ಮಾ ಚೌಬೆ ಮಾತನಾಡಿದರು. ಅನೀಲಕುಮಾರ ಆಣದೂರೆ ಅಧ್ಯಕ್ಷತೆ ವಹಿಸಿದ್ದರು. ಡಾ. ಮೀನಾಕ್ಷ್ಮಿ ಪಾಟೀಲ್, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಡಾ. ಹಣಮಂತಪ್ಪ ಸೇಡಂಕರ್, ವಾಮನರಾವ ಕುಲಕರ್ಣಿ, ವಿಜಯಕುಮಾರ ಪಾಂಚಾಳ, ಬಸವರಾಜ ಬಿರಾದಾರ ಇದ್ದರು. ಮಹಿಳಾ ಸುರಕ್ಷಾ ಘಟಕದ ಸಂಯೋಜಕಿ ಲತಾ ಎಸ್. ಸ್ವಾಗತಿಸಿದರು. ಡಾ. ರಾಣಿಬಾಯಿ ನಿರೂಪಣೆ ಮಾಡಿದರು. ಸುಮನ್ ಕೌರ್ ವಂದಿಸಿದರು.

ವಿದ್ಯಾನಿಕೇತನ: ಅರಳು ವಿದ್ಯಾನಿಕೇತನ ಸಂಸ್ಥೆಯಿಂದ ನಗರದಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ವಂದೇ ಮಾತರಂ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ರತ್ನಾ ಪಾಟೀಲ್ ಉದ್ಘಾಟಿಸಿ, ಇಂದಿನ ದಿನಗಳಲ್ಲಿ ಭ್ರೂಣ ಹತ್ಯೆ ನಡೆಯುತ್ತಿವೆ. ಸರ್ಕಾರ ಕಠಿಣ ಕಾನೂನು ಜಾರಿಗೆ ತಂದರೂ ಭ್ರೂಣ ಹತ್ಯೆ, ಬಾಲ್ಯ ವಿವಾಹ, ವರದಕ್ಷಿಣೆ, ಅತ್ಯಾಚಾರ, ಮಹಿಳಾ ಶೋಷಣೆ ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಸ್ಥೆ ಅಧ್ಯಕ್ಷ ಶಿವರಾಜ ಪಾಟೀಲ್, ಅನೀಲಕುಮಾರ ಕಮಠಾಣೆ, ಭಾನುಪ್ರೀಯ, ಸೋಮನಾಥ ಬಿರಾದರ ಹಕ್ಯಾಳ, ಸುನೀತಾ ಕೌಠಾ(ಬಿ), ಅರಳು ಸಂಸ್ಥೆ ನಿರ್ದೇಶಕ ಕೆ.ಟಿ.ಮೆರಿಲ್, ಸಂಯೋಜಕಿ ಸುನೀತಾ ಕೆ.ಟಿ. ಮೆರಿಲ್, ಯದಲಾಪುರ ಗ್ರಾಪಂ ಸದಸ್ಯೆ ವಿಜಯಲಕ್ಷ್ಮೀ ಇದ್ದರು.