ಮಹಿಳಾ ಕಾಲೇಜು ತಂಡ ರನ್ನರ್ ಅಪ್

ಹುಣಸೂರು: ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ವಾಲಿಬಾಲ್ ತಂಡವು ವಿಶ್ವವಿದ್ಯಾಲಯದ ಅಂತರ ವಲಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್. ಭಾಸ್ಕರ್ ತಿಳಿಸಿದ್ದಾರೆ.

ಪಿರಿಯಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೃಷ್ಣರಾಜ ವಲಯ ಮಟ್ಟದ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಕೆ.ಆರ್.ನಗರ ತಂಡದ ವಿರುದ್ಧ ರನ್ನರ್‌ಅಪ್ ಸ್ಥಾನದೊಂದಿಗೆ ವಿವಿ ಅಂತರ ವಲಯಮಟ್ಟಕ್ಕೆ ಆಯ್ಕೆಯಾಗಿದೆ.

ಪಂದ್ಯಾವಳಿಯಲ್ಲಿ ಪಿರಿಯಾಪಟ್ಟಣ, ಬನ್ನೂರು, ಬೆಟ್ಟದಪುರ, ಸಾಲಿಗ್ರಾಮ, ಹುಣಸೂರು ಪಟ್ಟಣದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸಂತ ಜೋಸೆಫರ ಪದವಿ ಕಾಲೇಜು ಸೇರಿ 8 ತಂಡಗಳು ಭಾಗವಹಿಸಿದ್ದವು. ವಿವಿ ಅಂತರ ವಲಯ ಮಟ್ಟದ ಪಂದ್ಯಾವಳಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರ ಕಾಲೇಜಿನಲ್ಲಿ 2020ರ ಜನವರಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *