ಮಹಾ ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಿ

blank

ಚಿತ್ರದುರ್ಗ: ಚಿತ್ರದುರ್ಗ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ನಗರಾಭಿವೃದ್ಧಿ ಭೈರತಿ ಸುರೇಶ್ ಅವರಿಗೆ ಶುಕ್ರವಾರ ಮನವಿ ಮಾಡಿದ್ದಾರೆ.
ಐತಿಹಾಸಿಕ ಹಿನ್ನೆಲೆ ಚಿತ್ರದುರ್ಗ ನಗರದಲ್ಲಿ ಅಂದಾಜು 2.55 ಲಕ್ಷ ಜನಸಂಖ್ಯೆ ಇದೆ. ನಗರದ ಸುತ್ತಮುತ್ತಲಿರುವ ಮೆದೇಹಳ್ಳಿ, ಮದ ಕರಿಪುರ, ಚೋಳಘಟ್ಟ, ಮಠದಕುರುಬರಹಟ್ಟಿ, ಸಿದ್ದಾಪುರ, ಇಂಗಳದಾಳ್, ಪಂಡರಹಳ್ಳಿ, ಗುಡ್ಡದರಂಗವ್ವನಹಳ್ಳಿ ಗ್ರಾಪಂಗಳಿದ್ದು, ಈ ಏಳು ಗ್ರಾಪಂಗಳಲ್ಲಿ ಅಂದಾಜು 63 ಸಾವಿರ ಜನಸಂಖ್ಯೆ ಇದ್ದು, ಈ ಎಲ್ಲ ಗ್ರಾಪಂಗಳನ್ನೂ ನಗರಕ್ಕೆ ಸೇರಿದರೆ 3.18 ಲಕ್ಷಕ್ಕೂ ಅಧಿಕ ಜನಸಂಖ್ಯೆಯಾಗಲಿದೆ. ಈ ಕಾರಣ ಹಾಗೂ ಸರ್ಕಾರಿ ಆದೇಶಗಳನ್ವಯ ನಗರವನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಆದೇಶಿಸಬೇಕು.
ಚಿತ್ರದುರ್ಗದಲ್ಲಿ ಕೋಟೆ, ಚಂದ್ರವಳ್ಳಿ ಕೆರೆ, ಗುಹೆಗಳು, ಮುರುಘಾಮಠ, ತಿಮ್ಮಣ್ಣನಾಯಕ ಕೆರೆ, ಆಡುಮಲ್ಲೇಶ್ವರ, ಜೋಗಿಮಟ್ಟಿ ವನ್ಯ ಜೀವಿಧಾಮ ಮತ್ತಿತರ ಪ್ರೇಕ್ಷಣೀಯ ಸ್ಥಳಗಳಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಈಚಿನ ದಿನಗಳಲ್ಲಿ ನಗರಸಭೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆ ಮತ್ತಿತರ ವಾಣಿಜ್ಯ ಚಟುವಟಿಕೆಗಳು ಅಭಿವೃದ್ಧಿಯಾಗುತ್ತಿದ್ದು, ಜನ ಸಾಂದ್ರತೆ ಅಧಿಕವಾಗುತ್ತಿದೆ. ಹೀಗಾಗಿ ನಗರಸಭೆಯನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ ಎಂದು ಶಾಸಕರು ಮನವಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

blank
Share This Article

ಮನೆಯಲ್ಲಿಯೇ ಮಾಡಿ ರುಚಿಕರ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ತಯಾರಿಸುವ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಆಹಾರದ ರುಚಿಯ ಜತೆಗೆ ಆರೋಗ್ಯಕವೂ ಆಗಿರುವ ಉಪ್ಪಿನಕಾಯಿ ಮಾಡಿದರೆ ಎಲ್ಲರೂ…

ಸಕ್ಕರೆ ಅಥವಾ ಬೆಲ್ಲ ಯಾವುದು ಉತ್ತಮ ಆರೋಗ್ಯಕ್ಕೆ ಒಳ್ಳೆಯದು; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ತೂಕವನ್ನು ಇಳಿಸಲು ಅಥವಾ ಆರೋಗ್ಯಕರ ಆಹಾರವನ್ನು ಸೇವಿಸುವ ವಿಷಯಕ್ಕೆ ಬಂದಾಗ ಆಹಾರದಿಂದ ಸಕ್ಕರೆಯನ್ನು ತೆಗೆದುಹಾಕುವುದು ಅಥವಾ…

ತೂಕ ಇಳಿಕೆ ನಿಂಬೆರಸ ಅತ್ಯುತ್ತಮ ಮನೆಮದ್ದು ಎಂಬುದು ಗೊತ್ತೆ; ಇಲ್ಲಿದೆ ಬಳಸುವ ಸರಿಯಾದ ವಿಧಾನ | Health Tips

ಪ್ರಸ್ತುತ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಬೊಜ್ಜು ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದಾಗಿ…