ಮಹಾರಾಷ್ಟ್ರದ ಶಾಹುಗೆ ಸ್ವರ್ಣ

ಹುಬ್ಬಳ್ಳಿ: ರಾಷ್ಟ್ರಮಟ್ಟದ ಹುಬ್ಬಳ್ಳಿ ಓಪನ್ ಶೂಟಿಂಗ್ ಚಾಂಪಿಯನ್​ಷಿಪ್​ನ ಏರ್ ರೈಫಲ್ ಸ್ಪರ್ಧೆಯ ಫೈನಲ್ಸ್​ನಲ್ಲಿ ಮಹಾರಾಷ್ಟ್ರದ ಶಾಹು ಮಾನೆ 248.6 ಅಂಕ ಪಡೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ವತಿಯಿಂದ ವಿಆರ್​ಎಲ್ ಸಮೂಹ ಸಂಸ್ಥೆ ಪ್ರಾಯೋಜಕತ್ವದಲ್ಲಿ ಇಲ್ಲಿನ ಸಾಯಿನಗರದ ಕಾವೇರಿ ಕಾಲನಿಯಲ್ಲಿ ಆಯೋಜಿಸಿರುವ ಸ್ಪರ್ಧೆಯಲ್ಲಿ ಪಶ್ಚಿಮ ಬಂಗಾಳದ ಮೇಹುಲಿ ಘೊಶ್ (248.3) ದ್ವಿತೀಯ, ಕರ್ನಾಟಕದ ಮೇಘನಾ ಸಜ್ಜನವರ (226.7) ತೃತೀಯ ಸ್ಥಾನ ಪಡೆದರು. ಪ್ರಥಮ 1 ಲಕ್ಷ ರೂ. ನಗದು, ಟ್ರೋಫಿ, ದ್ವಿತೀಯ 50 ಸಾವಿರ ರೂ., ಬೆಳ್ಳಿ ಹಾಗೂ ತೃತೀಯ ಬಹುಮಾನ 25 ಸಾವಿರ ರೂ. ನಗದು, ಕಂಚಿನ ಪದಕ ನೀಡಲಾಯಿತು.

ರಾಕೇಶ್ ಮನ್ಪತ್ (203.8 ಅಂಕ), ಸುಹಾಸ್ ಕೆ.ಪಿ. (184.3), ತೇಜಸ್ ಕೆ. (162.8), ಸೂರ್ಯ ಆರ್.ಡಿ. (139.8), ವೀಣಾ ಬಿ. ಪಾಟೀಲ್ (119.2) ತಲಾ 10 ಸಾವಿರ ರೂ. ನಗದು ಹಾಗೂ ಸಮಾಧಾನಕರ ಬಹುಮಾನ ಪಡೆದರು. ಒಟ್ಟು 12 ಸುತ್ತುಗಳ ಸ್ಪರ್ಧೆ ನಡೆಯಿತು.

 ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಯೂತ್ ಒಲಿಂಪಿಕ್ಸ್​ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಅರ್ಜೆ ಟಿನಾದಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ. ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುವುದರಿಂದ ಉತ್ಸಾಹ ಮತ್ತಷ್ಟು ಹೆಚ್ಚಿದೆ.

| ಶಾಹು ಮಾನೆ ಚಿನ್ನದ ಪದಕ ವಿಜೇತ

ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ 8 ಬಂಗಾರ, 3 ಕಂಚಿನ ಪದಕ ಪಡೆದಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ ವೈಯಕ್ತಿಕವಾಗಿ ಚಿನ್ನ, ಗುಂಪು ಸ್ಪರ್ಧೆಯಲ್ಲಿ ಕಂಚು ಬಂದಿದೆ. ಏಷ್ಯನ್ ಏರ್​ಗನ್ ಚಾಂಪಿಯನ್​ಷಿಪ್​ನಲ್ಲಿ ಬಂಗಾರದ ಪದಕ ಸಿಕ್ಕಿದೆ. ಯೂತ್ ಒಲಿಂಪಿಕ್ಸ್​ನಲ್ಲಿ ಆಡುವ ಅವಕಾಶ ಲಭಿಸಿದೆ. ಹುಬ್ಬಳ್ಳಿ ಸ್ಪೋರ್ಟ್ಸ್ ಅಕಾಡೆಮಿಯಿಂದ ಆಯೋಜಿಸಿರುವ ಈ ಸ್ಪರ್ಧೆ ಭವಿಷ್ಯಕ್ಕೆ ದಾರಿದೀಪ.

| ಮೇಹುಲಿ ಘೊಶ್ ಬೆಳ್ಳಿ ಪದಕ ವಿಜೇತೆ

Leave a Reply

Your email address will not be published. Required fields are marked *