blank

ಮಹಾತ್ಮರ ಜಯಂತಿ ಆದರ್ಶದ ಸಂಕೇತ

blank

ಕಲಬುರಗಿ: ಜಯಂತಿಗಳು ಮಹಾತ್ಮರ ಆದರ್ಶ ಬಿಂಬಿಸುವ ಸಂಕೇತವಾಗಿವೆ ಎಂದು ಸಂಸದ ಡಾ.ಉಮೇಶ ಜಾಧವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಂಜಾರ ಭವನ ಆವರಣದಲ್ಲಿ ಜಿಲ್ಲಾ ಸೇವಾಲಾಲ್ ಜಯತ್ಯುತ್ಸವ ಸಮಿತಿ ಶನಿವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ 281ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸಂತ-ಮಹಾತ್ಮರ ಆದರ್ಶ ನೆನಪಿಸುವ ಸಂಕೇತವಾಗಿ ಜಯಂತಿ ಆಚರಿಸಲಾಗುತ್ತಿದೆ. ಕೇವಲ ಜಯಂತಿ ಆಚರಿಸಿದರೆ ಸಾಲದು, ಸಂತರ ಆದರ್ಶ, ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುಲ್ಬರ್ಗ ವಿಶ್ವವಿದ್ಯಾಲಯ ಮುಚ್ಚಬೇಕು ಎಂದು ನಾನು ಹೇಳಿಲ್ಲ. ಕೆಲ ಸಂಘಟನೆಗಳು ವಿವಾದ ಎಬ್ಬಿಸುತ್ತಿವೆ. ಕ್ಷಮೆಕೇಳುವಂತೆ ಒತ್ತಡ ಹೇರುತ್ತಿವೆ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ದಿಲ್ಲಿ ಸಂಸತ್ನಲ್ಲಿ ಮೊದಲ ಬಾರಿಗೆ ಸಂತ ಸೇವಾಲಾಲ್ ಮಹಾರಾಜ ಜಯಂತಿ ಆಚರಿಸಿದ್ದೇನೆ. ನೀವು ನನಗೆ ಮತ ಹಾಕಿ ಕಳಿಸಿದ್ದಕ್ಕೆ ದಿಲ್ಲಿಯಲ್ಲಿ ಆಚರಿಸಲು ಸಾಧ್ಯವಾಯಿತು ಎಂದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ ಸಚಿವರಾಗಿದ್ದಾಗ ಕಲಬುರಗಿಯಲ್ಲಿ ಬಂಜಾರ ಭವನ ಸ್ಥಾಪಿಸಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ಬಂಜಾರ ಸಮಾಜಕ್ಕೆ ಸಾಕಷ್ಟು ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ ಎಂದು ಗುಣಗಾನ ಮಾಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಬಳಿರಾಮ ಮಹಾರಾಜ ಆಶೀರ್ವಚನ ನೀಡಿ, ಸಂತ ಸೇವಾಲಾಲ್ ಬಂಜಾರ ಸಮಾಜದ ಗುರು. ಭಕ್ತಿಯ ಜತೆಗೆ ಸಮಾಜವನ್ನು ಮುಖ್ಯವಾಹಿನಿಗೆ ತರುವಲ್ಲಿ ಮಹಾರಾಜ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರ ಆದರ್ಶ ಅಳವಡಿಸಿಕೊಂಡು ಸಮಾಜದವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಸೋನ್ಯಾಲಗಿರಿಯ ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜ, ಮುಗಳನಾಗಾವಿಯ ಶ್ರೀ ಜೇಮಸಿಂಗ್ ಮಹಾರಾಜ, ಕಲಖೋರಾ ದೇವಿತಾಂಡಾದ ಶ್ರೀ ಅನೀಲ ಮಹಾರಾಜ, ಶ್ರೀ ಮಾತಾ ಲತಾದೇವಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಯುವ ಮುಖಂಡ ಚಂದು ಪಾಟೀಲ್, ಮುಖಂಡರಾದ ಆರ್.ಎಲ್. ವೆಂಕಟೇಶ, ಎಸ್.ರಂಗನಾಥ ನಾಯಕ, ಬಿ.ಎನ್. ಚವ್ಹಾಣ್, ಡಾ.ಜ್ಯೋತಿ ರಾಠೋಡ್, ಸುಭಾಷ ರಾಠೋಡ್, ರಾಮಚಂದ್ರ ಜಾಧವ್, ಬಿ.ಬಿ.ನಾಯಕ. ಸೈನಿಕ ರಾಠೋಡ್, ಹೀರಾ ನಾಯಕ ಚವ್ಹಾಣ್, ಉಮೇಶ ಚವ್ಹಾಣ್, ರವೀಂದ್ರ ಚವ್ಹಾಣ್ ಉಪಸ್ಥಿತರಿದ್ದರು.
ಜಯಂತ್ಯುತ್ಸವ ಸಮಿತಿ ಉಪಾಧ್ಯಕ್ಷ ಆನಂದ ಚವ್ಹಾಣ್ ಪ್ರಾಸ್ತಾವಿಕ ಮಾತಣಾಡಿದರು. ಅಧ್ಯಕ್ಷ ಅರವಿಂದ ಚವ್ಹಾಣ್ ಸ್ವಾಗತಿಸಿದರು. ಕಾಯರ್ಾಧ್ಯಕ್ಷ ರಾಜು ಚವ್ಹಾಣ್ ವಂದಿಸಿದರು. ಆಶಾ ಹೆಗಡೆ ನಿರೂಪಣೆ ಮಾಡಿದರು.
ಅದ್ದೂರಿ ಮೆರವಣಿಗೆ
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಬಂಜಾರ ಭವನವರೆಗೆ ಸಂತ ಸೇವಾಲಾಲ್ ಮಹಾರಾಜ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಬಂಜಾರ ಸಮಾಜದ ಮಹಿಳೆಯರ ಸಾಂಸ್ಕೃತಿಕ ನೃತ್ಯ ಗಮನ ಸೆಳೆಯಿತು. ವಿವಿಧ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರಗು ತಂದುಕೊಟ್ಟಿತು.

ಸಂತ ಸೇವಾಲಾಲ್ ಜಯಂತಿ ಅದ್ದೂರಿಯಾಗಿ ಆಚರಿಸಲಾಗಿದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ ಯುವಕರು ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸುವೆ.
| ಆನಂದ ಚವ್ಹಾಣ್
ಜಯಂತ್ಯುತ್ಸವ ಸಮಿತಿ ಉಪಾಧ್ಯಕ್ಷ

Share This Article

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…