ರಾಮದುರ್ಗ: ಸತ್ಯ, ಶುದ್ಧ ಕಾಯಕ ತತ್ತ್ವದೊಂದಿಗೆ ಜೀವನ ನಡೆಸಿದ ಮಹಾನ ಸಾಧು ಸಂತರ ಜೀವನ ಚರಿತ್ರೆ ಓದಿದರೆ ಸಾಲದು ಅವರ ತತ್ತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಥಣಿ ತಾಲೂಕು ಕಕಮರಿ ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ ಹೇಳಿದರು.
ಪಟ್ಟಣದ ನೇಕಾರ ಪೇಠೆಯ ಶ್ರೀ ಬನಶಂಕರಿದೇವಿ ಜಾತ್ರಾ ಶತಮಾನೋತ್ಸವದ ಪ್ರಯುಕ್ತ ಗುರುವಾರ ಸಂಜೆ 2ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇವಾಂಗ ಸಮುದಾಯ ಮುಖಂಡ ವಿಠ್ಠಲ ಮುರುಡಿ ಮಾತನಾಡಿ, ಬನಶಂಕರಿ ದೇವಿ ಶತಮಾನದ ಜಾತ್ರಾಮಹೋತ್ಸವ ಅದ್ದೂರಿಯಾಗಿ ಆಚರಿಸಲು ಹಿರಿಯರು ಮತ್ತು ಕಿರಿಯರು ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬನಶಂಕರಿ ದೇವಾಂಗ ಸಮುದಾಯದ ಉಪಾಧ್ಯಕ್ಷ ವಿಠ್ಠಲ ಕಲ್ಲೂರ, ಹಿರಿಯರಾದ ಕೆ.ಎಸ್. ಸೂಳಿಬಾವಿ, ರವೀಂದ್ರ ಹರವಿ ಮಾತನಾಡಿದರು.
ಮುಖಂಡರಾದ ಈರಪ್ಪಜ್ಜ ಕೊಣ್ಣೂರ, ಈಶ್ವರ ಸುಳ್ಳದ, ಪರಣ್ಣ ಆರಿ, ವಿಠ್ಠಲ ಮುದ್ದೇಬಿಹಾಳ, ಗುಂಡಪ್ಪ ಬೆನ್ನೂರ, ರಾಮಚಂದ್ರ ಸೂಳಿಬಾವಿ, ದಾಮೋದರ ರಾಮದುರ್ಗ, ವಿಷ್ಣು ಗಿಡ್ನಂದಿ, ರುದ್ರಪ್ಪ ಪಾಟೀಲ, ಅಶೋಕ ಸೋರಿ, ವಿನಾಯಕ ಸೂಳಿಭಾಂವಿ ಸೇರಿದಂತೆ ಇತರರಿದ್ದರು. ಆರ್.ಪಿ.ಬೆಟಗೇರಿ ಸ್ವಾಗತಿಸಿದರು. ಶ್ರುತಿ ಜಾಧವ ನಿರೂಪಿಸಿದರು. ಆನಂದ ಹುಣಶಿಮರದ ವಂದಿಸಿದರು.
