ಮಹಾಂತ್ಮರ ಜಯಂತಿಗಳು ಆದರ್ಶದ ಸಂಕೇತ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಯಂತಿಗಳು ಮಹಾತ್ಮರ ಆದರ್ಶ ಬಿಂಬಿಸುವ ಸಂಕೇತವಾಗಿವೆ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ. ಆರ್.ರಾಘಪ್ರಿಯಾ ಹೇಳಿದರು.

ನಗರದ ಜೆಸ್ಕಾಂ ಇಂಜಿನಿಯರಿಂಗ್ ಸೋಸಿಯೇಷನ್ ಸಭಾಂಗಣದಲ್ಲಿ ಜೆಸ್ಕಾಂ ಬಂಜಾರಾ ಸಮಾಜದ ಅಧಿಕಾರಿ ಹಾಗೂ ನೌಕರರ ಸಮಿತಿ ಸೋಮವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಂತ, ಮಹಾತ್ಮರ ಆದರ್ಶ ನೆನಪಿಸುವ ಸಂಕೇತವಾಗಿ ಜಯಂತಿ ಆ ಚರಿಸಲಾಗುತ್ತಿದೆ. ಕೇವಲ ಜಯಂತಿ ಆಚರಿಸಿದರೆ ಸಾಲದು ಸಂತರ ಆದರ್ಶ ನಮ್ಮ ಜೀವನದಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಬಳಿರಾಮ ಮಹಾರಾಜರು, ಸಂತ ಸೇವಾಲಾಲರು ಬಂಜಾರಾ ಸಮಾಜದ ಗುರುಗಳಾಗಿದ್ದು, ಭಕ್ತಿಯ ಜತೆಯಲ್ಲಿ ಸಮಾಜವನ್ನು ಮುಖ್ಯವಾಹಿನಿಗೆ ತರುವಲ್ಲಿ ಮಹಾರಾಜರು ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರ ಆದರ್ಶ ಅಳವಿಡಿಕೊಂಡು ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಸೋನ್ಯಾಲಗಿರಿಯ ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜರು, ಕಲಕೋರಾ ದೇವಿತಾಂಡಾದ ಶ್ರೀ ಅನೀಲಮಹಾರಾಜ, ಚೌಡಾಪುರ ಜಗದಂಬಾ ಪುಣ್ಯಾಶ್ರಮದ ಶ್ರೀ ಮುರಾಹರಿ ಮಹಾರಾಜ, ಶ್ರೀ ಮಾತಾಲತಾದೇವಿ ಸಾನ್ನಿಧ್ಯ ವಹಿಸಿದ್ದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಡಿ.ಎಲ್.ಜಾಧವ್ ಅಧ್ಯಕ್ಷತೆ ವಹಿಸಿದ್ದರು.

ಜೆಸ್ಕಾಂ ತಾಂತ್ರಿಕ ನಿರ್ದೇಶಕ ನೀಲಕುಮಾರ ಬಬಲೇಶ್ವರ, ಮುಖ್ಯ ಅಭಿಯಂತರ ಜೋಶಿ ಸುನಂದಾ, ಬಂಜಾರಾ ಸಮಾಜ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎನ್. ಚವ್ಹಾಣ, ಬಂಜಾರಾ ಸಮಾಜದ ರಾಜ್ಯಾಧ್ಯಕ್ಷ ಸುಭಾಷ್ ರಾಠೋಡ, ಶಿವಲಾಲ್ ರಾಠೋಡ, ಭರತ್ ಚವ್ಹಾಣ, ನೀಲಪ್ಪ ಧೋತ್ರೆ, ಅಬ್ಲುಲ್ ವಾಹೀದ್, ಶಾಮರಾವ ಇಟಗಿ, ರಮೇಶ ಪವಾರ, ಮನೋಹರ ಮಾಘಮೋರೆ, ಚಿನ್ನಪ್ಪ,ಡಿ.ಎಲ್.ಜಾಧವ್, ಲಕ್ಷ್ಮಣ ಚವ್ಹಾಣ, ಸಂತೋಷ ಚವ್ಹಾಣ, ಎಸ್.ಎಂ. ರಾಠೋಡ,ಗುಲಾಬಂದ ಚವ್ಹಾಣ, ಸುರೇಶ ರಾಠೋಡ, ಸಂಜುಕುಮಾರ ಚವ್ಹಾಣ ಉಪಸ್ಥಿತರಿದ್ದರು.

ಜಯತ್ಯುತ್ಸವಸಮಿತಿ ಸಹ ಕಾರ್ಯದರ್ಶಿ ವಿಶ್ವನಾಥ ಪವಾರ ಸ್ವಾಗತಿಸಿದರು. ಕಾರ್ಯದರ್ಶಿ ರವಿ ನಾಯಕ ನಿರೂಪಣೆ ಮಾಡಿದರು.