ಮಹಡಿ ಪರವಾನಗಿ 3, ನಿರ್ಮಾಣ 5!

ಕಾರವಾರ: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದ ಅನಾಹುತ ಸಂಭವಿಸಿದ ನಂತರ ನಗರದ ಕಟ್ಟಡಗಳು ಎಷ್ಟು ಸುರಕ್ಷಿತ ಎಂಬ ಅನುಮಾನ ಹುಟ್ಟಲಾರಂಭಿಸಿದೆ.

ನಗರದಲ್ಲಿ ಸಾಕಷ್ಟು ಕಟ್ಟಡಗಳು ನಗರ ಯೋಜನಾ ನಿಯಮಗಳನ್ನು ಉಲ್ಲಂಘಿಸಿ ನಿರ್ವಣವಾಗಿವೆ. ಅವುಗಳ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ ಈಗ ಕೇಳಿಬಂದಿದೆ.

ಹೆಚ್ಚು ಉಸುಕು ಮಣ್ಣಿನಿಂದ ಆವೃತವಾದ ಈ ಪ್ರದೇಶದಲ್ಲಿ ಆಳವಾಗಿ ಅಡಿಪಾಯ ನಿರ್ಮಾಣ ಮಾಡುವುದೂ ಕಷ್ಟದ ಕೆಲಸವಾಗಿದೆ. ದೊಡ್ಡ ಗುಂಡಿ ತೋಡಲು ಸಾಧ್ಯವಾಗದು. ಅಲ್ಲದೆ, ಗುಂಡಿ ತೋಡಿದ ತಕ್ಷಣ ನೀರು ತುಂಬಿಕೊಳ್ಳುವುದರಿಂದ ಕಟ್ಟಡಗಳ ಅಡಿಪಾಯ ಕಾಮಗಾರಿ ಇಲ್ಲಿ ಕಷ್ಟವೇ ಸರಿ. ಹಾಗಾಗಿ, ಹಲವು ಕಟ್ಟಡಗಳ ಅಡಿಪಾಯವನ್ನು ಸಮರ್ಪಕವಾಗಿ ನಿರ್ವಿುಸಿಲ್ಲ ಎಂಬ ಆರೋಪವಿದೆ.

11 ಕಟ್ಟಡಗಳು: ನಗರದಲ್ಲಿರುವ ಬಹುಮಹಡಿ ಕಟ್ಟಡಗಳ ಪೈಕಿ 11 ಕಟ್ಟಡಗಳು ನಗರಾಭಿವೃದ್ಧಿ ಪ್ರಾಧಿಕಾರದ ನಿಯಮ ಉಲ್ಲಂಘಿಸಿವೆ. ಇದರಿಂದ ನಗರಸಭೆಯಿಂದ ಕಂಪ್ಲೀಷನ್ ಸರ್ಟಿಫಿಕೆಟ್ ಪಡೆದುಕೊಂಡಿಲ್ಲ ಎಂದು ನಗರಸಭೆ ಅಧಿಕಾರಿಗಳೇ ಹೇಳುತ್ತಾರೆ. ಈಗ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರವು ಕಳೆದ ಐದು ವರ್ಷಗಳ ಹಿಂದೆ ನಗರದಲ್ಲಿ ನಿರ್ವಣವಾದ 30ರಷ್ಟು ಕಟ್ಟಡಗಳು ನಿಯಮ ಉಲ್ಲಂಘಿಸಿರುವ ಬಗ್ಗೆ ಪಟ್ಟಿ ಮಾಡಿ ಕ್ರಮಕ್ಕಾಗಿ ನಗರಸಭೆಗೆ ನೀಡಿತ್ತು. ಆದರೆ, ನಗರಸಭೆ ಯಾವುದೇ ಕ್ರಮ ವಹಿಸದೇ ಕಣ್ಮುಚ್ಚಿ ಕುಳಿತಿದೆ. ಈಗ ಹೊಸದಾಗಿ ಮತ್ತಷ್ಟು ಕಟ್ಟಡಗಳು ನಿಯಮ ಬಾಹಿರವಾಗಿ ನಿರ್ವಣವಾಗಿವೆ.

ಜಿ+3 ಗೆ ಮಾತ್ರ ಅನುಮತಿ: ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ನಗರ ಯೋಜನೆಯ ನಿಯಮದಂತೆ ಮೂರು ಮಹಡಿ (ಜಿ+3) ಕಟ್ಟಡ ನಿರ್ವಣಕ್ಕೆ ಮಾತ್ರ ಅವಕಾಶವಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೂರು ಮಹಡಿಗೆ ಪರವಾನಗಿ ಪಡೆದು ಐದಕ್ಕೂ ಹೆಚ್ಚು ಮಹಡಿ ನಿರ್ಮಾಣ ಮಾಡಿದ 20ರಷ್ಟು ಕಟ್ಟಡಗಳಿವೆ. ಆದರೆ, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಂದ ಅಂಥ ಕಟ್ಟಡಗಳ ಬಗೆಗೆ ಯಾವುದೇ ಕ್ರಮವಾಗಿಲ್ಲ ಎಂಬ ಗಂಭೀರ ಆರೋಪವಿದೆ. ಹೆಚ್ಚುವರಿ ಮಹಡಿ ನಿರ್ಮಾಣ ಮಾಡಿದಲ್ಲಿ ಅದನ್ನು ಸಕ್ರಮ ಮಾಡಿಕೊಳ್ಳಲು ಸದ್ಯಕ್ಕೆ ನಿಯಮದಲ್ಲಿ ಯಾವುದೇ ಅವಕಾಶವಿಲ್ಲ.

ನೆಲಮಾಳಿಗೆ ರ್ಪಾಂಗ್​ನಿಂದ ತೊಂದರೆ?: ಜಾಗ ಉಳಿಸುವ ಸಲುವಾಗಿ ನೆಲಮಟ್ಟದಿಂದ ಕೆಳಗೆ ತಗ್ಗು ತೋಡಿ ಒಂದು ಸ್ಲ್ಯಾಬ್ ಹಾಕಿ ಅಲ್ಲಿ ರ್ಪಾಂಗ್ ವ್ಯವಸ್ಥೆ ಮಾಡಲಾಗುತ್ತದೆ. ಉಸುಕು ಮಣ್ಣು ಹಾಗೂ ಭಾರಿ ಮಳೆಯ ಕಾರಣ ಪ್ರತಿ ವರ್ಷ ಮಳೆಗಾಲದ ನಾಲ್ಕು ತಿಂಗಳು ಆ ಜಾಗದಲ್ಲಿ ನೀರು ತುಂಬಿರುತ್ತದೆ. ಇದು ಕಟ್ಟಡದ ಬಾಳಿಕೆ ಕಡಿಮೆ ಮಾಡುತ್ತದೆ ಎಂಬುದು ಇಂಜಿನಿಯರ್​ಗಳ ಅಭಿಪ್ರಾಯ.

ನಗರ ಮಹಾ ಯೋಜನೆಯಂತೆ ಕಟ್ಟಡಗಳಿಗೆ ಪರವಾನಗಿ ನೀಡುವುದು ಮಾತ್ರ ನಮ್ಮ ಜವಾಬ್ದಾರಿ. ನಿಯಮಗಳು ಪಾಲನೆಯಾಗಿವೆಯೇ ಇಲ್ಲವೇ ಎಂಬುದನ್ನು ನಗರಸಭೆ ನೋಡಬೇಕು. ಈ ಹಿಂದೆ ಕೆಲವು ಕಟ್ಟಡಗಳು ನಿಯಮ ಉಲ್ಲಂಘಿಸಿರುವ ಕುರಿತು ಪರಿಶೀಲಿಸಿ ನಗರಸಭೆಗೆ ವರದಿ ನೀಡಲಾಗಿತ್ತು. ನಗರಸಭೆ ಕ್ರಮ ಕೈಗೊಳ್ಳಬೇಕಿದೆ. | ವಿಶ್ವ ಎಸ್. ಕೆಡಿಎ, ಪ್ರಭಾರಿ ಆಯುಕ್ತ

ಅಪರ ಜಿಲ್ಲಾಧಿಕಾರಿಗೆ ಮನವಿ: ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ವಹಿಸುವಂತೆ ಕರುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಅವರಿಗೆ ಸೋಮವಾರ ಮನವಿ ಮಾಡಿದ್ದಾರೆ. ಜಿ+2 ಪರವಾನಗಿ ಪಡೆದು ನಂತರ ಎರಡು ಮಹಡಿ ಹೆಚ್ಚಿಸಿ ಕಟ್ಟಡ ನಿರ್ವಿುಸುತ್ತಾರೆ. ನಗರಸಭೆಯಿಂದ ಕಂಪ್ಲೀಷನ್ ಸರ್ಟಿಫಿಕೇಟ್ ಪಡೆಯದೇ ಮನೆಗಳನ್ನು ಮಾರಾಟ ಮಾಡಿರುವ ಹಲವು ಪ್ರಕರಣಗಳು ತಾಲೂಕಿನಲ್ಲಿವೆ. ಕಟ್ಟಡಕ್ಕೆ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ನೋಟಿಸ್ ನೀಡಿದರೂ ಕ್ರಮವಾಗುತ್ತಿಲ್ಲ. ಹೆಚ್ಚಿನ ಕಟ್ಟಡಗಳಲ್ಲಿ ಎಸ್​ಟಿಪಿ (ಸೀವೇಜ್ ಟಿಟ್ಟೆ್ಮಂಟ್ ಪ್ಲಾಂಟ್) ವ್ಯವಸ್ಥೆಯಿಲ್ಲ. ಈ ಕುರಿತು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ವೇದಿಕೆಯ ಅಧ್ಯಕ್ಷ ಎನ್.ದತ್ತಾ, ಆನಂದು ಮಡಿವಾಳ, ಮಂಗೇಶ ನಾಯ್ಕ ಈ ಸಂದರ್ಭದಲ್ಲಿದ್ದರು.