ಮಳೆ-ಬೆಳೆ ಸಮ್ಮಿಶ್ರ ಫಲ ಭವಿಷ್ಯ

ಹೊಳೆಆಲೂರ: ಗ್ರಾಮದ ರೈತರು ಕಾರ ಹುಣ್ಣಿಮೆಯ ಕರಿ ಹರಿಯುವ ಹಬ್ಬವನ್ನು ಎತ್ತುಗಳನ್ನು ಓಡಿಸುವುದರೊಂದಿಗೆ ಸೋಮವಾರ ಸಂಭ್ರಮದಿಂದ ಆಚರಿಸಿದರು.

ಬಸವೇಶ್ವರ ರೈತ ಕಟ್ಟೆಯ ಬೋರ್ ಗಲ್ಲಿನ ಹತ್ತಿರ ಸಿಂಗರಿಸಿದ ಎತ್ತುಗಳ ಕರಿ ಹರಿಯುವ ಸ್ಪರ್ಧೆಯಲ್ಲಿ ರೈತರು, ಮಹಿಳೆಯರು, ಮಕ್ಕಳು ಪಾಲ್ಗೊಂಡು ಖುಷಿಪಟ್ಟರು. ಈ ಬಾರಿ ಬಿಳಿ ಮತ್ತು ಕೆಂದ ಎತ್ತುಗಳು ಜೋಡಿಯಾಗಿ ಕರಿ ಹರಿದಿದ್ದರಿಂದ ಮುಂಬರುವ ಮಳೆ-ಬೆಳೆ ಸಮ್ಮಿಶ್ರ ಫಲ ನೀಡಲಿದೆ ಎಂಬ ಭವಿಷ್ಯದ ಸೂಚನೆಯಿಂದ ರೈತರಲ್ಲಿ ಹುಮ್ಮಸ್ಸು ಮೂಡಿಸಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೆರವಣಿಗೆ ಜರುಗಿತು. ರೈತ ಮುಖಂಡರಾದ ರವಿ ಗಾಣಿಗೇರ, ಕಲ್ಯಾಣಪ್ಪ ಕಡಬಿನಕಟ್ಟಿ, ಶಂಕ್ರಪ್ಪ ಹೂಗಾರ, ಸಂಗಪ್ಪ ದುಗಲದ, ಅಡಿಯಪ್ಪ ಮೇಟಿ, ಶಿವಣ್ಣ ಅಂಗಡಕಿ, ಹೊಳೆಬಸಪ್ಪ ಬ್ಯಾಡಗಿ, ಹರೀಶ ಕಂಠಿ, ಗಣಪತಿ ಬಡಿಗೇರ, ಮುತ್ತಣ್ಣ ಮುದಕವಿ, ಪ್ರವೀಣ ಜಡಮಳಿ, ಬಸವರಾಜ ಹೂಗಾರ, ಈರಯ್ಯ ಮಠಪತಿ ಇತರರು ಪಾಲ್ಗೊಂಡಿದ್ದರು.

ನರೇಗಲ್ಲ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ನರೇಗಲ್ಲ ವೀರಣ್ಣನ ಪಾದಗಟ್ಟಿಯಲ್ಲಿ ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಅಗಸಿಯ ಹತ್ತಿರ ಈಟಿಯವರ ಓಣಿಯ ಯಲ್ಲಪ್ಪ ಗಿಂಡಿ ಅವರ ಬಿಳಿ ಎತ್ತು ಪ್ರಥಮ ಸ್ಥಾನ ಪಡೆಯಿತು. ಸತತ ಮೂರನೇ ಬಾರಿಗೆ ಯಲ್ಲಪ್ಪ ಗಿಂಡಿಯವರ ಎತ್ತುಗಳೆ ಪ್ರಥಮ ಸ್ಥಾನ ಪಡೆಯುತ್ತಿರುವುದು ವಿಶೇಷ. ಕರಿ ಹರಿದ ಎತ್ತಿನ ಮಾಲೀಕನನ್ನು ಸನ್ಮಾನಿಸಲಾಯಿತು. ಶಿವನಗೌಡ ಪಾಟೀಲ, ಅಶೋಕ ಬೇವಿನಕಟ್ಟಿ, ಗ್ರಾಮಲೆಕ್ಕಾಧಿಕಾರಿ ಕೆ.ಎನ್. ಪಾಟೀಲ, ಪ್ರಕಾಶ ಕೋಟಗಿ, ಮೈಲಾರಪ್ಪ ಗೋಡಿ, ಮಂಜು ಕಿಟಗೇರಿ ಇತರರು ಇದ್ದರು.

Leave a Reply

Your email address will not be published. Required fields are marked *