More

  ಮಳೆಹಾನಿ ಪ್ರದೇಶ ಪರಿಶೀಲನೆ

  ಮೂಡಿಗೆರೆ:·ತಾಲೂಕಿನಲ್ಲಿ ಭಾರಿ ಮಳೆಯಿಂದ ಹಾನಿಗೊಂಡ ಕಿತ್ತಲೆಗಂಡಿ, ಬಿಳ್ಳೂರು, ದಾರದಹಳ್ಳಿ ಮತ್ತಿತರ ಪ್ರದೇಶಕ್ಕೆ ಶಾಸಕಿ ನಯನಾ ಮೋಟಮ್ಮ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

  ಕಳೆದ ಮಂಗಳವಾರ ದಾರದಹಳ್ಳಿ ಗ್ರಾಮದ ನಿವಾಸಿ ದೇವಮ್ಮ ಎಂಬುವರ ಮೃತದೇಹ ಹೇಮಾವತಿ ನದಿಯಲ್ಲಿ ಪತ್ತೆಯಾಗಿತ್ತು. ಅವರ ಮನೆಗೆ ತೆರಳಿದ ಶಾಸಕಿ ನಯನಾ ಮೋಟಮ್ಮ ಕುಟುಂಬದವರಿಗೆ ಸಾಂತ್ವಾನ ಹೇಳಿ ಸರ್ಕಾರದಿಂದ ಬಿಡುಗಡೆಯಾದ 5 ಲಕ್ಷ ರೂ. ಪರಿಹಾರದ ಆದೇಶ ಪತ್ರ ನೀಡಿದರು.
  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಯನಾ ಮೋಟಮ್ಮ, ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಅಲ್ಲಲ್ಲಿ ಹಾನಿಗಳು ಸಂಭವಿಸುತ್ತಿವೆ. ಗ್ರಾಮದ ದೇವಮ್ಮ ಎಂಬುವರ ಮೃತದೇಹ ಹೇಮಾವತಿ ನದಿಯಲ್ಲಿ ಪತ್ತೆಯಾಗಿತ್ತು. ಮಳೆಯಿಂದಾಗಿ ಆಕಸ್ಮಿಕ ಸಾವು ಸಂಭವಿಸಿದ್ದು ಅವರ ಸಾವಿನಿಂದ ಕುಟುಂಬ ಕಂಗಾಲಾಗಿದೆ. ಆ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದೇನೆ ಎಂದು ತಿಳಿಸಿದರು.
  ಮಳೆಯಿಂದ ತಾಲೂಕಿನ ವಿವಿಧ ಕಡೆ ಹಾನಿ ಸಂಭವಿಸಿದೆ. ಮಳೆಯಿಂದ ಮನೆ, ಜಮೀನು ಹಾನಿಗೊಳಗಾದರೆ ಅಂತಹ ಕುಟುಂಬದವರು ಭಯಪಡಬಾರದು. ಅವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು. ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಲಾಗಿದೆ. ತಾಲೂಕಿನ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಸೂಚಿಸಲಾಗಿದೆ. ಮಳೆಹಾನಿ ಪ್ರದೇಶಕ್ಕೆ ತುರ್ತು ಪರಿಹಾರ ತಂಡ ತೆರಳಲಿದೆ. ಸಾರ್ವಜನಿಕರು ಭಯಪಡಬಾರದು. ಸರ್ಕಾರದ ಆಡಳಿತ ಯಂತ್ರ ಚುರುಕಿನಿಂದ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
  ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್, ತಹಸೀಲ್ದಾರ್ ತಿಪ್ಪೇಸ್ವಾಮಿ, ಪಪಂ ಸದಸ್ಯ ಹೊಸಕೆರೆ ರಮೇಶ್, ದಾರದಹಳ್ಳಿ ಗ್ರಾಪಂ ಸದಸ್ಯ ಮಯೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಮುಖಂಡರಾದ ಎಂ.ಎನ್.ಅಶ್ವಥ್, ಶಿವಕುಮಾರ್, ಜಯರಾಮ್, ಸುಧೀರ್, ರಾಮು, ರಮೇಶ್, ದೀಪು, ವಿಜಯಗೌಡ, ಗೋಪಾಲ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts