ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾದ ಕಾರಣ ಜಿಲ್ಲೆಯ ವಾಣಿಜ್ಯ ಬೆಳೆಗಳಾದ ಟೊಮೆಟೋ, ಆಲೂಗಡ್ಡೆ, ಕ್ಯಾಪ್ಸಿಕಂ ಬೆಳೆಗಳಿಗೆ ಅಂಗಮಾರಿ ರೋಗ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಉಂಟಾಗಿದೆ.
ಕಳೆದ ವರ್ಷ ಟೊಮೆಟೋ, ಆಲೂಗಡ್ಡೆ, ಕ್ಯಾಪ್ಸಿಕಂ ಬೆಳೆಗಳಿಗೆ ಅಂಗಮಾರಿ ರೋಗ ತಗುಲಿ ಹತೋಟಿಗೆ ಬಾರದೆ ನಷ್ಟ ಅನುಭವಿಸುವಂತಾಯಿತು. ಲಕ್ಷಾಂತರ ರೂ.ಗಳು ಖರ್ಚು ಮಾಡಿ ಔಷಧಿಗಳನ್ನು ಸಿಂಪಡಣೆ ಮಾಡಿ ರೋಗವನ್ನು ಹತೋಟಿಗೆ ತರಲು ಸಾಧ್ಯವಾಗಲಿಲ್ಲ.
ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ಅಂಗಮಾರಿ ರೋಗ ತರಕಾರಿ ಬೆಳೆಗಳಿಗೆ ತಗಲುತ್ತದೆ. ರೋಗವನ್ನು ಹತೋಟಿಗೆ ತರಲು ರೈತರು ಮುನ್ನೆಚ್ಚರಿಕಾ ಕ್ರಮವಾಗಿ ಔಷಧಿಗಳನ್ನು ಸಿಂಪಡಿಸಬೇಕಾಗುತ್ತದೆ.
ಕಳೆದ ಒಂದು ತಿಂಗಳಿನಿAದ ಜಿಲ್ಲೆಯಲ್ಲಿ ಮಳೆ ಬೀಳುತ್ತಿರುವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗತೊಡಗಿದೆ. ಇದರಿಂದ ಟೊಮೆಟೋ ಮತ್ತು ಆಲೂಗಡ್ಡೆ ಹಾಗೂ ಕ್ಯಾಪ್ಸಿಕಂ ಬೆಳೆಗಳಿಗೆ ಅಂಗಮಾರಿ ರೋಗ ತಗಲುವ ಭೀತಿ ಶುರುವಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಶ್ರೀನಾಥ್ ಎಂಬುವವರ ಟೊಮೆಟೋ ತೋಟಕ್ಕೆ ಅಂಗಮಾರಿ ರೋಗ ತಗುಲಿದ್ದು, ಗಿಡದಲ್ಲಿಯೇ ಎಲೆಗಳು ಕೊಳೆತು ಹೋಗಿವೆ. ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿವೆ. ಲಕ್ಷಾöಂತರ ರೂ.ಗಳು ಖರ್ಚು ಮಾಡಿ ಔಷಧಿ ಸಿಂಪಡಣೆ ಮಾಡಿ ರೋಗವನ್ನು ಹತೋಟಿಗೆ ತರಲು ಮುಂದಾಗಿದ್ದಾರೆ. ಆದರೆ ರೋಗ ಹತೋಟಿಗೆ ಬರುತ್ತಿಲ್ಲ.
ಮಳೆಯಿಂದಾಗಿ ತರಕಾರಿಗಳ ಗುಣಮಟ್ಟ ಕಳೆದುಕೊಂಡು ಬೆಲೆ ಕುಸಿತ ಕಂಡಿರುವಾಗ ಅಂಗಮಾರಿ ರೋಗವು ಬೆಳೆಗಳನ್ನು ಕಾಡತೊಡಗಿರುವುದರಿಂದ ರೈತರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಹವಾಮಾನ ಮುನ್ಸೂಚನೆಯಂತೆ ನಂ.೯ ರಿಂದ ಮತ್ತೆ ಜಡಿ ಮಳೆ ಬರುವ ಮುನ್ಸೂಚನೆ ಇರುವುದರಿಂದ ಮತ್ತೆ ತೇವಾಂಶ ಹೆಚ್ಚಾಗಿ ಇರುವ ತೋಟಗಳಿಗೂ ಅಂಗಮಾರಿ ರೋಗ ಬರುತ್ತದೆ ಎಂಬ ಭೀತಿ ರೈತರಲ್ಲಿ ಆವರಿಸಿದ್ದು, ಇದರಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಕೋಟ್
ನವೆಂಬರ್ ತಿಂಗಳಾಗಿರುವುದರಿAದ ಮಳೆ ನಿಂತರೂ ಮತ್ತೆ ಬೆಳಗ್ಗಿನ ಜಾವ ಮಂಜು ಆವರಿಸುವುದರಿಂದ ಮಂಜಿಗೂ ಅಂಗಮಾರಿ ರೋಗ ಬರುವ ಸಾಧ್ಯತೆಗಳಿವೆ. ಈಗಲೇ ಇಲಾಖೆಯವರು ಎಚ್ಚೆತ್ತುಕೊಂಡು ಗುಣಮಟ್ಟದ ಔಷಧಿಗಳನ್ನು ಸಿಂಪಡಣೆ ಮಾಡಲು ರೈತರಿಗೆ ಅರಿವು ಮೂಡಿಸುವಂತಹ ಕೆಲಸ ಮಾಡಬೇಕಾಗಿದೆ. ಕಳೆದ ವರ್ಷ ಅಂಗಮಾರಿ ರೋಗದಿಂದ ಸಾಕಷ್ಟು ರೈತರು ನಷ್ಟ ಅನುಭವಿಸುವಂತಾಯಿತು. ಈ ಬಾರಿ ಪ್ರಾರಂಭದಲ್ಲಿಯೇ ಹತೋಟಿಗೆ ತರುವ ಕೆಲಸ ಮಾಡಬೇಕಾಗಿದೆ.
-ಸಂಪತ್‌ಕುಮಾರ್, ರೈತ, ಕಿತ್ತಂಡೂರು.
ಕೋಟ್
ಅಂಗಮಾರಿ ರೋಗ ಅಷ್ಟೇನೂ ಹೆಚ್ಚಾಗಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿಲ್ಲ. ತೇವಾಂಶ ಹೆಚ್ಚಾಗುವ ಕಾರಣ ಅಂಗಮಾರಿ ರೋಗ ಬರುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಬರಲುಬಹುದು. ನಮ್ಮ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಯಾವ ಔಷದಿಗಳನ್ನುü ಸಿಂಪಡಿಸಬೇಕು ಎಂಬ ಮಾಹಿತಿಯನ್ನು ನೀಡಲಾಗುವುದು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ೨ ದಿನಗಳಲ್ಲಿ ಮತ್ತೆ ಮಳೆ ಬರುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ.
-ಕುಮಾರಸ್ವಾಮಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೋಲಾರ.
ಚಿತ್ರ ೦೭ ಕೆ.ಎಲ್.ಆರ್. ೦೪ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಶ್ರೀನಾಥ್ ಎಂಬುವವರ ಟೊಮೆಟೋ ತೋಟಕ್ಕೆ ಅಂಗಮಾರಿ ರೋಗ ಬಂದಿರುವುದು.
ಚಿತ್ರ ೦೭ ಕೆ.ಎಲ್.ಆರ್. ೦೪ಎ : ಸಂಪತ್‌ಕುಮಾರ್, ರೈತ, ಕಿತ್ತಂಡೂರು ರವರ ಭಾವಚಿತ್ರ
ಚಿತ್ರ ೦೭ ಕೆ.ಎಲ್.ಆರ್. ೦೪ಬಿ : ಕುಮಾರಸ್ವಾಮಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೋಲಾರ ರವರ ಭಾವಚಿತ್ರ