ಮಳೆಯಿಂದಾಗಿ ತುಂಡರಿಸಿದ ಮೇಲ್ಛಾವಣಿ

ಭಟ್ಕಳ: ತಾಲೂಕಿನಲ್ಲಿ ಮಂಗಳವಾರ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಬೈಲೂರ ಗ್ರಾಮದ ತೂದಳ್ಳಿಯಲ್ಲಿ ಮನೆಯ ಮೇಲ್ಛಾವಣಿ ಮುರಿದು ಬಿದ್ದಿದೆ. ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾದೇವಿ ಜಟ್ಟಾ ನಾಯ್ಕ ಅವರ ವಾಸ್ತವ್ಯದ ಪಕ್ಕದ ಮನೆಯ ಮೇಲ್ಛಾವಣಿ ಹಾನಿಗೊಂಡಿದ್ದು, ಗಾಳಿ- ಮಳೆಗೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಚಾಂದ ಭಾಷಾ, ಗ್ರಾಮ ಲೆಕ್ಕಾಧಿಕಾರಿ ಶೇಖರ, ಗ್ರಾಮ ಸಹಾಯಕ ನಾಗಪ್ಪ ನಾಯ್ಕ ಪರಿಶೀಲನೆ ನಡೆಸಿದರು. 1.20 ಲಕ್ಷ ರೂಪಾಯಿ ಹಾನಿ ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *