ಮಳೆಗಾಗಿ ಕಪ್ಪೆಗಳಿಗೆ ಮದುವೆ

ಚೇಳೂರು: ಇಡೀ ಉತ್ತರ ಕರ್ನಾಟಕ ಮಹಾ ಮಳೆಗೆ ತತ್ತರಿಸಿದ್ದಿದ್ದರೆ, ಇತ್ತ ಬಯಲುಸೀಮೆ ಜಿಲ್ಲೆಗಳ ಮೇಲೆ ವರುಣನ ಕೃಪೆಗಾಗಿ
ಬಾಗೇಪಲ್ಲಿ ತಾಲೂಕು ಚೇಳೂರು ಗ್ರಾಮಸ್ಥರು ಮಂಗಳವಾರ ಕಪ್ಪೆಗಳಿಗೆ ಸಾಂಪ್ರದಾಯದಂತೆ ಮದುವೆ ಮಾಡಿಸಿದರು.
ಹೆಣ್ಣು ಮತ್ತು ಗಂಡು ಕಪ್ಪೆ ಹಿಡಿದು ತಂದಿದ್ದ ಗ್ರಾಮಸ್ಥರು ಮಧು-ವರರಂತೆ ಅಲಂಕರಿಸಿದ್ದರು. ಪಟ್ಟಣದ ಎಂ.ಜಿ.ವೃತ್ತದಲ್ಲಿ ಮಂಟಪ ನಿರ್ಮಿಸಿ, ಮಂಗಳವಾದ್ಯಗಳ ಕರೆಸಿ, ಅರ್ಚರ ಮಂತ್ರೋಷಗಳೊಂದಿಗೆ ಶಾಸ್ತ್ರೋಕ್ತವಾಗಿ ಕಪ್ಪೆಗಳಿಗೆ ಮದುವೆ ಮಾಡಿದರು.
ಹೋಬಳಿಯ ಜನರು ಬರಗಾಲಕ್ಕೆ ಕಂಗಾಲಾಗಿದ್ದು, ಮಳೆ, ಬೆಳೆ ಇಲ್ಲದೆ ಜನ, ಜಾನುವಾರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಭೂಮಿಗೆ ಹಾಕಿರುವ ರಾಗಿ ಮತ್ತಿತರ ಬಿತ್ತನೆ ಬೀಜಗಳು ಮೊಳಕೆ ಬರುವ ಮುನ್ನವೇ ಒಣಗುತ್ತಿವೆ, ಜಾನವಾರುಗಳಿಗೆ ಮೇವು ಇಲ್ಲದೆ ಅಲೆದಾಡುವಂತಾಗಿದೆ. ವರುಣನ ಕೃಪೆಗಾಗಿ ಹಿರಿಯರು ನಂಬಿಕೊಂಡು ಬಂದ ಪದ್ಧತಿಯಂತೆ ಕಪ್ಪೆಗಳಿಗೆ ಮದುವೆ ಮಾಡಿದ್ದೇವೆ ಎಂದು ರೈತ ರೈತ ಪೆದ್ದಪಾಳ್ಯಂ ಕೃಷ್ಣಪ್ಪ ತಿಳಿಸಿದರು.
ಗ್ರಾಮಸ್ಥರಾದ ಪೂಲ ರವಣಪ್ಪ, ಶಿವಶಂಕರಸ್ವಾಮಿ, ಕೂಟಪಲ್ಲಿ ಸೀನಪ್ಪ, ಪೂಲ ಕೃಷ್ಣಮೂರ್ತಿ, ಜೆ.ಎನ್.ವೆಂಕಟೇಶಪ್ಪ, ಗುನ್ನಪಾಪಿರೆಡ್ಡಿ, ಚಂದ್ರಶೇಖರ್, ಸೀತಾರಾಮಪ್ಪ, ಮಾರಪ್ಪ ಇತರರಿದ್ದರು.

Leave a Reply

Your email address will not be published. Required fields are marked *