ಕಲಬುರಗಿ: ಪೌಷ್ಟಿಕ ಆಹಾರದ ಅಗತ್ಯವಿರುವ ನಿರ್ಗತಿಕರಿಗೆ ನಿತ್ಯ ಊಟ ಪೂರೈಸುವ ಮಲಬಾರ್ ಗ್ರೂಪ್‌ನ ಹಸಿವು ಮುಕ್ತ ಜಗತ್ತು ನಿರ್ಮಾಣದ ಯೋಜನೆಯನ್ನು ಹೆಚ್ಚುವರಿ ಸ್ಥಳಗಳಿಗೆ ವಿಸ್ತರಿಸುವುದಕ್ಕೆ ಮಂಗಳವಾರ ನಗರದ ಸ್ಟೇಷನ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಡೈಮಂಡ್ಸ್ನಲ್ಲಿ ಚಾಲನೆ ನೀಡಲಾಯಿತು.
ಪ್ರಸ್ತುತ ೩೧ ಸಾವಿರ ಆಹಾರ ಪೊಟ್ಟಣ ವಿತರಿಸುತ್ತಿದ್ದು, ಅದನ್ನು ೫೧ ಸಾವಿರಕ್ಕೆ ಹೆಚ್ಚಿಸಲಾಗಿದೆ. ಕಲಬುರಗಿ ನಗರದಲ್ಲಿ ೫೦೦ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ೨- ಶೂನ್ಯ ಹಸಿವು ಯೋಜನೆಗೆ ಪೂರಕವಾಗಿ ಈ ಸೇವಾ ಕಾರ್ಯಕ್ಕೆ ಮಲಬಾರ್ ಕಾರ್ಯ ಮುಂದಾಗಿದೆ.
ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್, ಕಾರ್ಯದರ್ಶಿ ಮಹಾಂತೇಶ ಜೇವರ್ಗಿ, ಕಾಂಗ್ರೇಸ್ ಮುಖಂಡ ನೀಲಕಂಠರಾವ ಮೂಲಗೆ, ಪ್ರಮುಖರಾದ ಶರಣು ಪಾಟೀಲ್, ಸಮೀರ ಭಾಗವಾನ್, ಅಣ್ಣವೀರಪ್ಪ ಸಜ್ಜನ್, ಅಯ್ಯುಬ್ ಖಾನ್ ಮಂಗಳವಾರ ಏರ್ಪಡಿಸಿದ್ದ ಹಸಿವು ಮುಕ್ತ ದಿನಾಚರಣೆಯಲ್ಲಿ ಯೋಜನೆಗೆ ಚಾಲನೆ ನೀಡಿದರು.
ಮಲಬಾರ್ ಗ್ರೂಪ್‌ನ ಶಾಖೆಯ ಉಪ ನಿರ್ದೇಶಕ ಜೀಸ್ನು ಎಸ್. ಸಜು ಅಧ್ಯಕ್ಷತೆ ವಹಿಸಿದ್ದರು.
ಹಸಿವು ಮುಕ್ತ ಜಗತ್ತು ಯೋಜನೆಯನ್ನು ಕರ್ನಾಟಕದಲ್ಲಿ ೨೦೨೩ರಲ್ಲಿ ಆರಂಭಿಸಲಾಯಿತು. ೪,೪೫೦ ಜನರಿಗೆ ಪ್ರತಿದಿನ ಒಂದು ಹೊತ್ತಿನ ಊಟ ನೀಡುತ್ತಿದ್ದೆವು. ಮುಂದೆ ೭,೧೬೭ ಜನರಿಗೆ ಪ್ರತಿದಿನ ಊಟ ನೀಡಲಾಗುತ್ತಿದೆ. ಈ ಮೂಲಕ ಕರ್ನಾಟಕದ ೧೨ ಸ್ಥಳಗಳಲ್ಲಿ ವಾರ್ಷಿಕ ೨೬,೧೫,೯೫೫ ಊಟವನ್ನು ನೀಡಲಿz್ದÉÃವೆ. ಮಲಬಾರ್ ಚಾರಿಟೇಬಲ್ ಟ್ರಸ್ಟ್ ವಿಶ್ವದ ೭೧ ಸ್ಥಳಗಳಲ್ಲಿ ೫೧,೦೦೦ ಜನರಿಗೆ ಪ್ರತಿದಿನ ಊಟವನ್ನು ನೀಡಲಿದ್ದು, ವಾರ್ಷಿಕ ೧೮.೬ ಮಿಲಿಯನ್ ಊಟವನ್ನು ವಿತರಣೆ ಮಾಡಲಿದೆ. ೧೬ ರಾಜ್ಯಗಳ ೩೭ ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ.
ಮಲಬಾರ್‌ನಿಂದ ೫೧,೦೦೦ ಆಹಾರ ಪೊಟ್ಟಣ
You Might Also Like
A. P. J. Abdul Kalam ಅವರ ಈ ಟ್ರಿಕ್ಸ್ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್ ಮಾಡ್ದೆ ಅನುಸರಿಸಿ
ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…
ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies
ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…
ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing
Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…